Thursday, June 19, 2025

Latest Posts

Raichur : ಹಿಜಾಬ್ ಗಿಂತ ಶಿಕ್ಷಣವೇ ಮುಖ್ಯ ಪ್ರಥಮ ಪಿಯು ವಿದ್ಯಾರ್ಥಿನಿ ಅಫ್ಸಾನಾ ರಾಜ್ಯಕ್ಕೆ ಮಾದರಿ..!

- Advertisement -

ರಾಯಚೂರು : ಹಿಜಾಬ್ ಮತ್ತು ಕೇಸರಿ ಶಾಲು (Hijab and saffron shawl) ಸಂಘರ್ಷ ಹಿನ್ನೆಲೆ ಇಂದು ರಾಯಚೂರು (raichur) ಕಾಲೇಜುಗಳಲ್ಲಿ  ಮನೆಯಿಂದ ಕಾಲೇಜಿನವರೆಗೆ ಹಿಜಾಬ್ ಹಾಕಿಕೊಂಡು ಬಂದ ವಿದ್ಯಾರ್ಥಿನಿ ಮಾತು ಆಗಿರುವಂತಹದು. ಇನ್ನೂ ರಾಯಚೂರು ನಗರದ SSRG ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಅಫ್ಸಾನಾ (Student Afsana) ಮನೆಯಿಂದ ಹಿಜಾಬ್ ಧರಿಸಿ ಕಾಲೇಜು ಆವರಣದಲ್ಲಿ ಬಂದು ಹಿಜಾಬ್ ತೆಗೆದು ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ. ಮತ್ತೆ ನಮಗೆ ಹಿಜಾಬ್ ಗಿಂತ ಶಿಕ್ಷಣವೇ ಮುಖ್ಯ ಎಂದು ಆ ವಿದ್ಯಾರ್ಥಿನಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು . ಶಿಕ್ಷಣಕ್ಕಾಗಿ ‌ನಾನು ಹಿಜಾಬ್ ತೆಗೆದು ಕ್ಲಾಸ್ ಗೆ ಹೋಗುತ್ತೇನೆ ಎಂದು ವಿದ್ಯಾರ್ಥಿನಿ ತಿಳಿಸಿದಳು. ಪ್ರಥಮ ಪಿಯು ವಿದ್ಯಾರ್ಥಿನಿ ಅಫ್ಸಾನಾ ಮನದಾಳದ ಮಾತು ರಾಜ್ಯಕ್ಕೆ ಮಾದರಿ (Model for the state) ಯಾಗಿದೆ.

- Advertisement -

Latest Posts

Don't Miss