ಬೆಂಗಳೂರು : ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹಿಜಾಬ್ ವಿವಾದ (Hijab Controversy) ಕುರಿತಂತೆ ನೀಡಿರುವ ಹೇಳಿಕೆಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ (Education Minister BC Nagesh) ತಿರುಗೇಟು ನೀಡಿದ್ದಾರೆ. ಮಕ್ಕಳ ಭವಿಷ್ಯದ ವಿಚಾರದಲ್ಲಿ ರಾಜಕೀಯ ಮಾಡಬೇಡಿ, ನೀವು ಮಂತ್ರಿಯಾಗಿದ್ದಾಗ ಸಮವಸ್ತ್ರ (Uniform) ನಿಯಮವನ್ನು ರೂಪಿಸಲಾಗಿದೆ. ಆಡಳಿತ ಮಂಡಳಿ ಒಪ್ಪಿದ ನಂತರವೇ ಸಮಸ್ಯೆಗಳು ಅಂತಿಮಗೊಳ್ಳುತ್ತದೆ ಎಂದು ಹೇಳಿದ್ದಾರೆ. ಬಾಯಿಗೆ ಬಂದಂತೆ ಮಾತನಾಡಲು ನಾಚಿಕೆಯಾಗಬೇಕು, ರಾಜಕೀಯ ಕ್ಷೇತ್ರವನ್ನು ಹಾಳು ಮಾಡಿಯಾಗಿದೆ, ಶಿಕ್ಷಣ ಕ್ಷೇತ್ರವನ್ನು ಹಾಳುಮಾಡಬೇಡಿ. ಬೇರೆ ವಿಚಾರಗಳಲ್ಲಿ ಸಮಾನತೆ (Equality) ಯನ್ನು ಮಾತನಾಡುತ್ತೀರಾ, ಈಗ ಯಾಕೆ ಮಾತನಾಡುತ್ತಿಲ್ಲ, ಕಾನೂನು ಓದಿರುವ ಸಿದ್ದರಾಮಯ್ಯ ದಾರಿತಪ್ಪಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಸಮವಸ್ತ್ರ ಬಂದಿದ್ದಲ್ಲ ಎಂದು ತಿಳಿಸಿದ್ದಾರೆ. ಇನ್ನು ಶಾಸಕ ರಘುಪತಿ ಭಟ್ (MLA Raghupathi Bhat) ಬಗ್ಗೆ ಏಕವಚನದಲ್ಲೇ ಮಾತನಾಡಿರುವುದಕ್ಕೆ, ಸಿದ್ದರಾಮಯ್ಯನವರಿಗೆ ಪ್ರಜಾಪ್ರಭುತ್ವದ ಬಗ್ಗೆ ಇರುವ ಕಾಳಜಿ ಎಷ್ಟು ಎಂಬುದು ಇದರಿಂದ ತಿಳಿಯುತ್ತದೆ. ಸಮವಸ್ತ್ರ ಸಮಾನತೆಯ ಸಂಕೇತ. ಮುಖ್ಯಮಂತ್ರಿ ಆಗಿದ್ದವರಿಗೆ ಸುಳ್ಳು ಹೇಳುವುದಕ್ಕೆ ನಾಚಿಕೆಯಾಗಬೇಕು ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ತಿರುಗೇಟು ನೀಡಿದ್ದಾರೆ.