Saturday, October 19, 2024

Latest Posts

1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ…!

- Advertisement -

ಬೆಂಗಳೂರು: ರಾಜ್ಯದ ಏಳು ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಮೊಟ್ಟೆ ನೀಡಲು ಸರ್ಕಾರ ಆದೇಶ ನೀಡಿದೆ.

1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆ ಬೇಯಿಸಿದ ಮೊಟ್ಟೆ ನೀಡಲಾಗುತ್ತದೆ. ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ನೀಡಲೂ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ಬೀದರ್‌, ರಾಯಚೂರು, ಕಲಬುರ್ಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಯ ಒಟ್ಟು 14,44,322 ಮಕ್ಕಳಿಗೆ ಬಿಸಿಯೂಟದ ಜತೆ ಪ್ರತಿ ತಿಂಗಳು 12 ಮೊಟ್ಟೆ ನೀಡಲಾಗುತ್ತದೆ. ಡಿಸೆಂಬರ್​​ನಿಂದ ಮಾರ್ಚ್‌ 30ರವರೆಗೆ ಒಟ್ಟು ನಾಲ್ಕು ತಿಂಗಳು ಈ ಯೋಜನೆ ಜಾರಿಯಲ್ಲಿ ಇರುತ್ತೆ. ಇದಕ್ಕಾಗಿ ಸರ್ಕಾರ 39.86 ಕೋಟಿ ವೆಚ್ಚ ಅಂದಾಜಿಸಿದೆ.

- Advertisement -

Latest Posts

Don't Miss