Thursday, December 12, 2024

Latest Posts

Election Commission ಸ್ಪಷ್ಟಣೆ : 5 ರಾಜ್ಯಗಳ ವಿಧಾನಸಭೆ ಚುನಾವಣೆ ಮುಂದೂಡುವುದು ಅಸಾಧ್ಯ..!

- Advertisement -

2022ರಲ್ಲಿ ಉತ್ತರಾಖಂಡ, ಗೋವಾ, ಮಣಿಪುರ, ಉತ್ತರಪ್ರದೇಶ ಮತ್ತು ಪಂಜಾಬ್​ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ (Assembly Election 2022) ನಡೆಯಲಿದ್ದು, ಇದೇ ಹೊತ್ತಲ್ಲಿ ದೇಶದಲ್ಲಿ ಒಮಿಕ್ರಾನ್​ ಸೋಂಕಿನ (Omicron) ಆತಂಕ ಕೂಡ ಶುರುವಾಗಿದೆ. ಹೀಗಿರುವಾಗ ಚುನಾವಣೆ ನಿಮಿತ್ತ ಏನೆಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬಹುದು? ಆರೋಗ್ಯ ತಜ್ಞರ ಅಭಿಪ್ರಾಯ ಏನು ? ಚುನಾವಣೆ ಮುಂದೂಡುವ ಸಾಧ್ಯತೆ ಇದೆಯೇ ? ಹೀಗೆ ಹಲವು ವಿಚಾರಗಳನ್ನು ಚರ್ಚಿಸಲು ಸಭೆ ನಡೆದಿತ್ತು. ಈ ಮಧ್ಯೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗಳನ್ನು ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಆದರೆ ಚುನಾವಣಾ ಆಯೋಗ, ಚುನಾವಣೆಗಳನ್ನು ಮುಂದೂಡಲಾಗದು. ಅದರ ಬದಲು ಬರುವ ವರ್ಷ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕೊವಿಡ್ 19 ಲಸಿಕೆ ನೀಡಿಕೆ ವೇಗವನ್ನು ಹೆಚ್ಚಿಸಿ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಬಳಿ ಕೇಳಿದೆ ಎಂದು ಮೂಲಗಳು ತಿಳಿಸಿವೆ. ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಈಗಾಗಲೇ ಚುನಾವಣಾ ಆಯೋಗದ ಅಧಿಕಾರಿಗಳು ಪರಿಶೀಲನಾ ಭೇಟಿ ನಡೆಸುತ್ತಿದ್ದಾರೆ. ಗೋವಾ ಮತ್ತು ಉತ್ತರಾಖಂಡ ಪ್ರವಾಸದ ಬಳಿಕ ಇವರು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್​ ಭೂಷಣ್​​ರನ್ನು ಭೇಟಿಯಾಗಿ ದೇಶದ ಕೊರೊನಾ ಸ್ಥಿತಿಗತಿಗಳ ಕುರಿತು ಚರ್ಚೆ ಮಾಡಿದ್ದಾರೆ.  ಇನ್ನೇನು ಚುನಾವಣಾ ಪ್ರಚಾರ ಶುರುವಾಗುತ್ತದೆ. ನಂತರ ಮತದಾನದ ದಿನ, ಮತ ಎಣಿಕೆ ದಿನಗಳಂದು ಕೊವಿಡ್​ 19 ನಿಯಂತ್ರಣ ಶಿಷ್ಟಾಚಾರಗಳಲ್ಲಿ ಹೇಗೆ ಸುಧಾರಣೆ ಮಾಡಬಹುದು ಎಂಬುದನ್ನ ಚುನಾವಣಾ ಆಯೋಗ ಮತ್ತು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಸೇರಿ ಚರ್ಚಿಸಿದ್ದಾರೆ ಎನ್ನಲಾಗಿದೆ.

- Advertisement -

Latest Posts

Don't Miss