Thursday, December 12, 2024

Latest Posts

Election Commission : ಚುನಾವಣಾ ಪ್ರಚಾರ ಮಾರ್ಗಸೂಚಿಗಳಲ್ಲಿ ಸಡಿಲಿಕೆ..!

- Advertisement -

ಉತ್ತರ ಪ್ರದೇಶ (Uttar Pradesh), ಪಂಜಾಬ್ (Punjab), ಗೋವಾ, ಮಣಿಪುರ, ಉತ್ತರಾಖಂಡ್ (Uttarakhand) ನಲ್ಲಿ ಫೆಬ್ರವರಿ 10ರಿಂದ ಏಳು ಹಂತಗಳಲ್ಲಿ ಪಂಚ ರಾಜ್ಯಗಳಿಗೆ ಚುನಾವಣೆ (Elections to the five states) ನಡೆಯಲಿದೆ. ದೇಶದಲ್ಲಿ ಕೊರೋನಾ ಪ್ರಕರಣಗಳು (Corona cases) ಹೆಚ್ಚುತ್ತಿದ್ದು ಕಾರಣ ಬಹಿರಂಗ ಸಭೆ ಸಮಾರಂಭಗಳಿಗೆ, ನಿಷೇಧವನ್ನು ಹೇರಲಾಗಿತ್ತು. ಇದರಿಂದ ರಾಜಕೀಯ ಪಕ್ಷಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಚುನಾವಣಾ ಪ್ರಚಾರವನ್ನು ಕೈಗೊಂಡಿದ್ದರು. ಈಗ ಕೋವಿಡ್ ಪ್ರಕರಣಗಳು ವೇಗವಾಗಿ ಕಡಿಮೆಯಾಗುತ್ತಿದೆ. ಮತದಾನ ನಡೆಯಲಿರುವ ಪಂಚರಾಜ್ಯಗಳಲ್ಲಿ ಬೇರೆ ರಾಜ್ಯಗಳಿಗಿಂತ ಬಹಳ ಕಡಿಮೆ ಪ್ರಮಾಣದಲ್ಲಿ ಕೊರೋನಾ ಪ್ರಕರಣಗಳು ವರದಿಯಾಗಿದೆ. ಈಗ ಇರುವ ಪ್ರಚಾರ ಮಾರ್ಗಸೂಚಿಗಳನ್ನು ಮರುಪರಿಶೀಲಿಸಲು ಮತ್ತು ಹೆಚ್ಚಿನ ಸಡಿಲಿಕೆಗಳನ್ನು ಅನುಮತಿಸಲು ಸಮಿತಿಗೆ ಶಿಫಾರಸು ಮಾಡಿದ್ದರು. ಈ ಮಾಹಿತಿಗಳನ್ನು ಗಣನೆಗೆ ತೆಗೆದುಕೊಂಡು, ಆಯೋಗವು ಆರೋಗ್ಯ ಕಾರ್ಯದರ್ಶಿಯೊಂದಿಗೆ ಸಭೆ ನಡೆಸಿದ್ದು,ಚುನಾವಣೆ ನಡೆಯುತ್ತಿರುವ ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾಗಳಲ್ಲಿ, ಜನವರಿ 22 ರಂದು ಗರಿಷ್ಠ 30,000 ಕ್ಕಿಂತ ಹೆಚ್ಚು ಪ್ರಕರಣಗಳ ಸಂಖ್ಯೆ ಫೆಬ್ರವರಿ 5 ರಂದು ಸುಮಾರು 7,000 ಕ್ಕೆ ಇಳಿದಿದೆ” ಎಂದು ಆಯೋಗ ತಿಳಿಸಿದೆ. ಮನೆ-ಮನೆ ಪ್ರಚಾರಕ್ಕೆ ಸಂಖ್ಯೆ 20 ಮೊದಲಿನಂತೆಯೇ ಇರಲಿದೆ. ರಾತ್ರಿ 8 ರಿಂದ ಬೆಳಿಗ್ಗೆ 8 ರವರೆಗೆ ಪ್ರಚಾರದ ಮೇಲಿನ ನಿಷೇಧವು ಮೊದಲಿನಂತೆಯೇ ಮುಂದುವರಿಯುತ್ತದೆ, ಜಿಲ್ಲಾ ಅಧಿಕಾರಿಗಳು ನಿರ್ದಿಷ್ಟವಾಗಿ ಗೊತ್ತುಪಡಿಸಿದ ಮೈದಾನಗಳಲ್ಲಿ ಮಾತ್ರ ತೆರೆದ ಮೈದಾನದ ಸಭೆಗಳನ್ನು ನಡೆಸಬಹುದು ಎಂದು ಚುನಾವಣಾ ಆಯೋಗ (Election Commission) ಹೇಳಿದೆ.ಇನ್ನು ಚುನಾವಣೆ ಫಲಿತಾಂಶ ಮಾರ್ಚ್ 10ರಂದು ಪ್ರಕಟನೆಯಾಗಲಿದೆ.

- Advertisement -

Latest Posts

Don't Miss