Monday, December 23, 2024

Latest Posts

Arvind Kejriwal ವಿರುದ್ಧ FIR ದಾಖಲು ಮಾಡುವಂತೆ ಚುನಾವಣಾ ಆಯೋಗವು ಆದೇಶ..!

- Advertisement -

ನಾಳೆ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ (Assembly elections in Punjab) ನಡೆಯಲಿದೆ. ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ವಿರುದ್ಧ ಆರೋಪಗಳು ಕೇಳಿಬಂದಿದೆ. ಆಮ್ ಆದ್ಮಿ ಪಕ್ಷ ವಿರುದ್ಧ ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ (Violation of the Code of Conduct) ಮಾಡಿದ ಆರೋಪದಲ್ಲಿ ಎಫ್‌ಐಆರ್‌ ದಾಖಲು ಮಾಡುವಂತೆ ಪಂಜಾಬ್‌ ಚುನಾವಣಾ ಆಯೋಗವು ಪೊಲೀಸರಿಗೆ ಆದೇಶ ನೀಡಿದೆ. ನೀತಿ ಸಂಹಿತೆಯ ಪ್ರಕಾರ ಯಾವುದೇ ಪಕ್ಷವು ಅಂತರ್ಜಾಲದಲ್ಲಿ ಯಾವುದೇ ಪ್ರಚಲಿತ ಹ್ಯಾಂಡಲ್‌ಗಳ ನಿರ್ದಿಷ್ಟ ನಾಯಕನನ್ನು ಗುರಿಯಾಗಿಸಿಕೊಂಡು ಯಾವುದೇ ಆಕ್ಷೇಪಾರ್ಹ ವೀಡಿಯೊಗಳನ್ನು ಹಾಕುವಂತಿಲ್ಲ, ಎಂದು ಪಂಜಾಬ್‌ನ ಮುಖ್ಯ ಚುನಾವಣಾ ಅಧಿಕಾರಿ ಹೇಳಿದ್ದಾರೆ. ವೀಡಿಯೋ ಒಂದರಲ್ಲಿ ಇತರ ಪಕ್ಷಗಳ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಾ ಮತ್ತು ಪಂಜಾಬ್‌ನಲ್ಲಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ ಎಂದು ಚುನಾವಣಾ ಆಯೋಗ ಹೇಳಿಕೊಂಡಿದೆ. ಪಂಜಾಬ್ ರಾಜ್ಯದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ದೆಹಲಿ ಮುಖ್ಯಮಂತ್ರಿ ವಿರುದ್ಧ ಅಕಾಲಿದಳದ ಉಪಾಧ್ಯಕ್ಷ ಅರ್ಷದೀಪ್ ಸಿಂಗ್ (Arshaddeep Singh) ಅವರು ದೂರನ್ನು ನೀಡಿದ್ದಾರೆ. ವೀಡಿಯೋಗೆ ಆಕ್ಷೇಪವನ್ನು ವ್ಯಕ್ತಪಡಿಸಿ ವೀಡಿಯೊ “ಶಿರೋಮಣಿ ಅಕಾಲಿದಳ ಮತ್ತು ಇತರ ರಾಜಕೀಯ ಪಕ್ಷಗಳ ಇಮೇಜ್ ಅನ್ನು ಸಾಮಾನ್ಯ ಜನರ ದೃಷ್ಟಿಯಲ್ಲಿ ಕೆಡಿಸುವ ಉದ್ದೇಶವನ್ನು ಹೊಂದಿದೆ ಎಂದು ಅಕಾಳಿದಳ ಪಕ್ಷವು ಆರೋಪ ಮಾಡಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಅರವಿಂದ್‌ ಕೇಜ್ರಿವಾಲ್‌ ಇಕ್ಕಟ್ಟಿನಲ್ಲಿ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅರವಿಂದ್ ಕೇಜ್ರಿವಾಲ್‌ ಹಲವಾರು ತೊಂದರೆಗೆ ಒಳಗಾಗುತ್ತಲೇ ಇದ್ದಾರೆ. ನಾಳೆ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಆರೋಪಗಳು ಕೇಳಿಬಂದಿದೆ. ಈ ಆರೋಪಗಳು ವಿಧಾನಸಭೆ ಚುನಾವಣೆಗೆ ಪರಿಣಾಮ ಬೀರುವ ಸಾಧ್ಯತೆ ಇದೆ.



- Advertisement -

Latest Posts

Don't Miss