Health Tips: ತಲೆಗೂದಲು ಚೆನ್ನಾಗಿ ಬೆಳೆದಾಗಲೇ, ಯುವತಿಯಾಗಲಿ, ಯುವಕರಾಗಲಿ ನೋಡೋಕ್ಕೆ ಚೆಂದಗಾಣೋದು. ಅದರಲ್ಲೂ ಮಹಿಳೆಯರಿಗೆ, ಯುವತಿಯರಿಗೆ ದಪ್ಪವಾದ, ಉದ್ದವಾದ ಕೂದಲು ಇದ್ದಾಗ ಮಾತ್ರ, ಅಂದ ಇನ್ನೂ ಹೆಚ್ಚಾಗೋದು. ಹಾಗಾದ್ರೆ ಅತಿಯಾದ ಹೊಟ್ಟಿನಿಂದ ನಿಮಗೆ ಮುಜುಗರವಾಗುತ್ತಿದ್ದರೆ, ಕೂದಲು ಉದುರುವಿಕೆ ಹೆಚ್ಚಾಗಿದ್ದರೆ, ಆ ಬಗ್ಗೆ ಪಾರಂಪರಿಕ ವೈದ್ಯರಾದ ಪವಿತ್ರ ಅವರು ವಿವರಿಸಿದ್ದಾರೆ.
ನಮ್ಮ ದೇಹ ಒಣಗುತ್ತಿದೆ ಎಂದಾದಲ್ಲಿ ತಲೆಯಲ್ಲಿ ಹೊಟ್ಟು ಹೆಚ್ಚಾಗುತ್ತದೆ. ಕೂದಲು ಉದುರುತ್ತದೆ. ಹೆಚ್ಚು ತುರಿಕೆಯಾಗುತ್ತದೆ. ಕೆಲವರು ಹೀಗಾದಾಗ, ತಲೆಗೂದಲಿಗೆ ತರಹೇವಾರಿ ಎಣ್ಣೆ, ಶ್ಯಾಂಪೂ ಎಲ್ಲವನ್ನೂ ಬಳಸುತ್ತಾರೆ. ಆದರೆ ಅದಷ್ಟೇ ಪರಿಹಾರವಲ್ಲ ಅಂತಾರೆ ವೈದ್ಯರು.
ತಲೆಹೊಟ್ಟು ಹೆಚ್ಚಾಗುತ್ತಿದೆ. ತಲೆಗೂದಲು ಉದುರುತ್ತಿದೆ ಎಂದಾದಲ್ಲಿ, ನೀವು ಆರೋಗ್ಯಕರವಾದ ಆಹಾರ ಸ್ವೀಕರಿಸುತ್ತಿಲ್ಲ. ಹೆಚ್ಚು ನೀರು ಕುಡಿಯುತ್ತಿಲ್ಲವೆಂದರ್ಥ. ಒಂದು ಗಿಡ ಒಣಗುತ್ತಿದೆ ಎಂದರೆ, ನಾವು ಅದಕ್ಕೆ ನೀರು ಹಾಕಿ ಚೆನ್ನಾಗಿ ಪೋಷಿಸಿಲ್ಲವೆಂದರ್ಥ. ಅದೇ ರೀತಿ ನಮ್ಮ ಚರ್ಮ, ತಲೆಗೂದಲು ಒಣಗುತ್ತಿದ್ದರೆ, ನಾವು ಕುಡಿಯುವ ನೀರಿನ ಪ್ರಮಾಣ ಸಾಲುತ್ತಿಲ್ಲವೆಂದರ್ಥ.
ಇದರಿಂದಲೇ, ದೇಹದಲ್ಲಿ ಉಷ್ಣತೆ ಹೆಚ್ಚಾಗುವುದು, ಮಲಬದ್ಧತೆ ಸಮಸ್ಯೆ, ರಕ್ತಸಂಚಾರ ಸಮಸ್ಯೆ ಉದ್ಭವವಾಗುತ್ತದೆ. ಬಳಿಕ ಅನಾರೋಗ್ಯ ಸಮಸ್ಯೆ ಜೊತೆಗೆ ಸೌಂದರ್ಯ ಸಮಸ್ಯೆ ಎದುರಾಗುತ್ತದೆ. ಆಗಲೇ ತಲೆಯಲ್ಲಿ ಹೊಟ್ಟಾಗುವುದು, ಕೂದಲು ಉದುರುವುದು, ಮುಖದ ಮೇಲೆ ಹೆಚ್ಚು ಮೊಡವೆಯಾಗುವುದೆಲ್ಲ ಆಗುತ್ತದೆ. ಹಾಾಗಾಗಿ ಬರೀ ಎಣ್ಣೆ, ಶ್ಯಾಂಪೂ ಬಳಸುವುದಷ್ಟೇ ಅಲ್ಲದೇ, ಚೆನ್ನಾಗಿ ನೀರು ಕುಡಿಯಬೇಕು ಮತ್ತು ಒಳ್ಳೆಯ ಆಹಾರ ಸೇವಿಸಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.