Sunday, July 6, 2025

Latest Posts

ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್‌ನಲ್ಲಿ ಉದ್ಯೋಗ ; ತಿಂಗಳಿಗೆ 50.000 ಸಂಬಳ

- Advertisement -

ನ್ಯಾಷನಲ್ ಫರ್ಟಿಲೈಸರ್ಸ್ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಭರ್ಜರಿ ಉದ್ಯೋಗದ ಆಫರ್ ನೀಡಿದೆ . ಈಗಾಗಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ .
ಅರ್ಜಿ ಪ್ರಕ್ರಿಯೆ ಅಕ್ಟೋಬರ್ 20.2021 ರಂದು ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ . ನೊಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನವೆಂಬರ್ 10,2021 ಕೊನೆಯ ದಿನಾಂಕವಾಗಿದೆ.
ಪ್ರಮುಖವಾಗಿ 183 ನಾನ್-ಎಕ್ಸಿಕ್ಯೂಟಿವ್ ಹುದ್ದೆಗಳನ್ನು ಎನ್ ಎಪ್ ಎಲ್ ಭರ್ತಿಮಾಡಲಿದ್ದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಎನ್ ಎಫ್ ಎಲ್ ನ ಅಧಿಕೃತ ವೆಬ್‌ಸೈಟ್ nationalfertilizers.com  ಗೆ ಬೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು .
ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಎನ ಎಫ್ ಎಲ್ ನ ನೇಮಕಾತಿ 2021 ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ ಅರ್ಹತಾ ಮಾನದಂಡಗಳನ್ನು ಎಚ್ಚರಿಕೆಯಿಂದ ಪರೀಕ್ಷಿಸಬೇಕು . ಈ ನೇಮಕಾತಿ ಅಡಿಯಲ್ಲಿ ಖಾಲಿ ಇರುವ ಹುದ್ದೆಗಳು ಜೂನಿಯರ್ ಎಂಜಿನಿಯರ್ ಸಹಾಯಕ , ಅಟೆಂಡೆoಟ್ ಮತ್ತು ಲೋಕೋ ಅಟೆಂಡೆoಟ್ ಇತ್ಯಾದಿ .
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 20000-50000 ವೇತನ ನೀಡಲಾಗುತ್ತದೆ . ವಿದ್ಯಾರ್ಹತೆಗೆ ಸಂಭoದಿಸಿದoತೆ ಅಭ್ಯರ್ಥಿ ಕಡ್ಡಾಯವಾಗಿ ಪದವಿಯನ್ನು ಪಡೆದಿರಬೇಕು . ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿoದ.ಐಟಿಐ ಅಥವಾ ಡಿಪ್ಲೋಮ ಪದವಿ ಪಡೆದಿರಬೇಕು .ಅಭ್ಯರ್ಥಿಯು ಶೇಖಡ 50 ರಷ್ಟು ಅಂಕಗಳೊoದಿಗೆ ಉತ್ತೀರ್ಣರಾಗಿರಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ .
ವಯೋಮಿತಿ ಕನಿಷ್ಟ 18 ವರ್ಷ ಹಾಗು ಗರಿಷ್ಟ 30 ವರ್ಷವಾಗಿರುತ್ತದೆ . ಅರ್ಜಿ ಶುಲ್ಕ ಸಾಮಾನ್ಯ , ಒಬಿಸಿ ಮತ್ತು ಇಡಬ್ಲೂಎಸ್ ವರ್ಗದ ಅಭ್ಯರ್ಥಿಗಳಿಗೆ 200 ರೂ ಅರ್ಜಿ ಶುಲ್ಕ ಇರುತ್ತದೆ .
ಇನ್ನೂ ಆಯ್ಕೆ ಪ್ರಕ್ರಿಯೆಯನ್ನು ಕಂಪ್ಯೂಟರ್ ಆಧಾರಿತ ಆನ್‌ಲೈನ್ ಆಬ್ಜೆಕ್ಟಿವ್ ಮಾದರಿ ಪರೀಕ್ಷೆ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಬಳಿಕ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಂಪತ್‌ಶೈವ,ನ್ಯೂಸ್ ಡೆಸ್ಕ್ ,ಕರ್ನಾಟಕಟಿವಿ

- Advertisement -

Latest Posts

Don't Miss