Sunday, December 22, 2024

Latest Posts

ಸೋಲಿನ ಸುಳಿಯಲ್ಲಿ ಸಿಲುಕಿದ ಭಾರತ: ರೂಟ್, ಬೈರ್‍ಸ್ಟೋ ಬೊಂಬಾಟ್ ಬ್ಯಾಟಿಂಗ್ 

- Advertisement -

ಬರ್ಮಿಂಗ್‍ಹ್ಯಾಮ್:  ಭಾರತ ಮತ್ತು ಆತಿಥೇಯ ಇಂಗ್ಲೆಂಡ್ ನಡುವಿನ ಐದನೆ ಟೆಸ್ಟ್ ನಿರ್ಣಾಯಕ ಘಟ್ಟ ತಲುಪಿದೆ. ಎರಡನೆ ಇನ್ನಿಂಗ್ಸ್‍ನಲ್ಲಿ ಬೌಲಿಂಗ್ ವೈಫಲ್ಯ ಅನುಭವಿಸಿದ ಬುಮ್ರಾ ಪಡೆ ಸೋಲಿನ ಭೀತಿಯಲ್ಲಿ ಸಿಲುಕಿದೆ.

ಸೋಮವಾರ ನಡೆದ ನಾಲ್ಕನೆ ದಿನದಾಟದ ಪಂದ್ಯದಲ್ಲಿ ಭಾರತ ಎರಡನೆ ಇನ್ನಿಂಗ್ಸ್‍ನಲ್ಲಿ  245 ರನ್‍ಗಳಿಗೆ ಆಲೌಟ್ ಆಯಿತು. ಒಟ್ಟು  378 ಗೆಲುವಿನ ಗುರಿ ನೀಡಿತು.

ಇಂಗ್ಲೆಂಡ್ ತಂಡ ನಾಲ್ಕನೆ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿದೆ.ಗೆಲ್ಲಲು 119 ರನ್ ಬೇಕಿದೆ.

ನಾಲ್ಕನೆ ದಿನದಾಟದ ಪಂದ್ಯದಲ್ಲಿ  ಬ್ಯಾಟಿಂಗ್ ಮುಂದುವರೆಸಿದ ಚೇತೇಶ್ವರ ಪೂಜಾರ ಹಾಗೂ ರಿಷಬ್ ಪಂತ್ ಉತ್ತಮ ಆರಂಭ ಕೊಡುವಲ್ಲಿ ಎಡವಿದರು. 66 ರನ್ ಗಳಿಸಿದ್ದ ಪೂಜಾರ ವೇಗಿ ಬ್ರಾಡ್‍ಗೆ ವಿಕೆಟ್ ಒಪ್ಪಿಸಿದರು. ಶ್ರೇಯಸ್ ಅಯ್ಯರ್ (19 ರನ್)ಪಾಟ್ಸ್‍ಗೆ ಬಲಿಯಾದರು.ರವೀಂದ್ರ ಜಡೇಜಾ 23, ಶಾರ್ದೂಲ್ ಠಾಕೂರ್ 4, ಮೊಹ್ಮದ್ ಶಮಿ 13, ನಾಯಕ ಜಸ್ಪ್ರೀತ್ ಬುಮ್ರಾ 7, ಮೊಹ್ಮದ ಸೀರಾಜ್ ಅಜೇಯ 2 ರನ್ ಗಳಿಸಿದರು. ಭಾರತ ಎರಡನೆ ಇನ್ನಿಂಗ್ಸ್‍ನಲ್ಲಿ  245 ರನ್ ಗಳಿಗೆ ಸರ್ವಪತನ ಕಂಡಿತು.ಇಂಗ್ಲೆಂಡ್‍ಗೆ ಒಟ್ಟು 378 ರನ್ ಗುರಿ ನೀಡಿತು.

ಬೃಹತ್ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ  ಆರಂಭಿಕರಾದ ಆ್ಯಲೆಕ್ಸ್ ಲೀಸ್ (56 ರನ್) ಮತ್ತು ಜಾಕ್ ಕ್ರೌವ್ಲಿ  (46 ರನ್) 107 ರನ್ ಗಳ ಭರ್ಜರಿ ಆರಂಭ ನೀಡಿದರು. 46 ರನ್ ಗಳಿಸಿದ್ದ ಜಾಕ್ ಕ್ರೌವ್ಲಿ  ಬುಮ್ರಾ ಎಸೆತದಲ್ಲಿ ಬೌಲ್ಡ್ ಆದರು. ಒಲಿ ಪಾಪ್ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಆ್ಯಲೆಕ್ಸ್ ಲೀಸ್ ರನೌಟ್ ಆದರು.

ನಂತರ ಜೊತೆಗೂಡಿದ ಜೋ ರೂಟ್ ಮತ್ತು ಜಾನಿ ಭೈರ್‍ಸ್ಟೋ ತಂಡದ ರನ್ ವೇಗ ಹೆಚ್ಚಿಸಿದರು.

ಶ್ರೇಯಸ್ಗೆ ವಿಲನ್ ಆದ ಕೋಚ್

ಶ್ರೇಯಸ್ ಅಯ್ಯರ್‍ಗೆ ತಮ್ಮ ಐಪಿಎಲ್ ಕೋಚ್ ಬ್ರೆಂಡಾನ್ ಮೆಕಲಮ್ ವಿಲನ್ ಆದರು. ಎರಡನೆ ಇನ್ನಿಂಗ್ಸ್‍ನಲ್ಲಿ 19 ರನ್ ಗಳಿಸಿ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡುತ್ತಿದ್ದರು. ಬೌಲಿಂಗ್ ಮಾಡುತ್ತಿದ್ದ  ವೇಗಿ ಪಾಟ್ಸ್‍ಗೆ ತಂಡದ ಕೋಚ್ ಬ್ರೆಂಡಾನ್ ಮೆಕಲಮ್ ಶಾಟ್ ಪಿಚ್ ಹಾಕುವಂತೆ ಡ್ರೆಸಿಂಗ್ ರೂಮ್‍ನಿಂದಲೇ ಕೈಸನ್ನೆ ಮಾಡಿದರು. ವೇಗಿ ಪಾಟ್ಸ್ ಶಾಟ್ ಪಿಚ್ ಹಾಕಿದರು. ಶ್ರೇಯಸ್ ಚೆಂಡನ್ನು ಮಿಡ್‍ವಿಕೆಟ್‍ನತ್ತ ಹೊಡೆದಾಗ ಆ್ಯಂಡರ್ಸನ್ ಸುಲ`À ಕ್ಯಾಚ್ ಹಿಡಿದರು.

ದಾಖಲೆ ಮುರಿದ ರಿಷಬ್ ಪಂತ್

ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ರಿಷಬ್ ಪಂತ್ ಒಂದೇ ಟೆಸ್ಟ್ ಪಂದ್ಯದಲ್ಲಿ ಶತಕ ಹಾಗೂ ಅರ್ಧ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್‍ನಲ್ಲಿ ಶತಕ ಸಿಡಿಸಿದ ಪಂತ್ ನಂತರ 2ನೇ ಇನ್ನಿಂಗ್ಸ್‍ನಲ್ಲಿ ಅರ್ಧ ಶತಕ ಸಿಡಿಸಿದರು.ಇದರೊಂದಿಗೆ  ತಂಡದ ಮಾಜಿ ಆಟಗಾರ ಫಾರೂಕ್ ಇಂಜಿನಿಯರ್ ಅವರ ಸಾಲಿಗೆ ಸೇರಿದರು. ಫಾರೂಖ್ 1973 ರ ಮುಂಬೈ ಟೆಸ್ಟ್‍ನಲ್ಲಿ  121 ಹಾಗೂ 66 ರನ್ ಗಳಿಸಿದರು. ಜೊತೆಗೆ ಆಂಗ್ಲರ ನಾಡಲ್ಲಿ ಶತಕ ಮತ್ತು ಅರ್ಧ ಶತಕ ಸಿಡಿಸಿದ ಎರಡನೆ ವಿಕೆಟ್ ಕೀಪರ್ ಎಂಬ ಗೌರವಕ್ಕೆ ಪಾತ್ರಾದರು.

ಮಾತಿನ ಚಕಮಕಿ ಆಟದ ಒಂದು ಭಾಗ : ಬೈರ್ಸ್ಟೊ    

ಮಾತಿನ ಚಕಮಕಿ ಆಟದ ಒಂದು ಭಾಗ ಎಂದು ಇಂಗ್ಲೆಂಡ್ ತಂಡದ ಆಟಗಾರ ಜಾನಿ ಬೈರ್‍ಸ್ಟೊ  ಸ್ಪಷ್ಟನೆ ನೀಡಿದ್ದಾರೆ.  ಎರಡನೆ ದಿನದಾಟ ಪಂದ್ಯದ ವೇಳೆ ಬೈರ್‍ಸ್ಟೊ ಬ್ಯಾಟಿಂಗ್ ಮಾಡುತ್ತಿದ್ದಾಗ ವಿರಾಟ್ ಕೊಹ್ಲಿ ಜೊತೆ ಜಗಳವಾಡಿದ್ದರು. ನಂತರ ಬೈರ್ ಸ್ಟೊ ಶತಕ ಸಿಡಿಸಿ ತಿರುಗೇಟು ನೀಡಿದ್ದಾರೆ ಎಂದು ಹೇಳಲಾಗಿತ್ತು.

 

 

 

- Advertisement -

Latest Posts

Don't Miss