Special Podcast: ದಿಿವಂಗತ ಡಿ.ಕೆ.ರವಿ ಅವರ ಪತ್ನಿ ಮತ್ತು ಕಾಂಗ್ರೆಸ್ ನಾಯಕಿ ಕುಸುಮ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಪತಿಯ ಸಾವಿನ ನಂತರ ಅವರ ಪಯಣದ ಬಗ್ಗೆ ಮಾತನಾಡಿದ್ದಾರೆ.
ಪತಿಯ ಸಾವಿನ ಬಳಿ ಕುಸುಮಾ ವಿದೇಶಕ್ಕೆ ಹೋಗಿ, ಅಲ್ಲಿ ಓದು ಮುಂದುವರೆಸಿದ್ದರು. ಆದರೆ ಅವರ ಅಪ್ಪ ಅಮ್ಮನಿಗೆ ಅದು ಇಷ್ಟವಗಲಿಲ್ಲ. ನಾವೇ ಹುಡುಕಿ ಮದುವೆ ಮಾಡಿದ್ದರೂ ಮಗಳ ಬಾಳು ಈ ರೀತಿ ಆಗಿ ಹೋಗಿರುವಾಗ, ಆಕೆಯನ್ನು ಹೀಗೆ ಪರದೇಶದಲ್ಲಿ ಬಿಟ್ಟು ಬಿಡುವುದು ಸೂಕ್ತವಲ್ಲ ಎಂದೆನ್ನಿಸಿ, ಕುಸುಮಾ ಅವರನ್ನು ತಂದೆ ತಾಯಿ ಭಾರತಕ್ಕೆ ಕರೆಸಿಕ“ಂಡು, ನೀನು ಇಲ್ಲೇ ಕೆಲಸ ಮಾಡು ಎಂದು ಸಲಹೆ ನೀಡಿದರಂತೆ.
ಅದರಂತೆ ಕುಸುಮಾ ಭಾರತಕ್ಕೆ ಬಂದು, ಕೆಲಸ ಮುಂದುವರಿಸುವ ನಿರ್ಧಾರ ಮಾಡಿದರು. ಬಳಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡಲು ಎಂದು ನಿರ್ಧರಿಸಿದ ಕುಸುಮಾ ಅಸಿಸ್ಟೆಂಟ್ ಪ್ರೋಫೆಸರ್ ಆಗಿ ಕಾರ್ಯನಿರ್ವಹಿಸಿದರು. ಇದು ನನ್ನ ಜೀವನದ ಪ್ರಥಮ ಕೆಲಸದ ಅನುಭವ ಅಂತಾರೆ ಕುಸುಮಾ.
ಬೆಂಗಳೂರಿ ದಯಾನಂದ್ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿದ್ದ ಕುಸುಮಾ ಅವರಿಗೆ ಅಲ್ಲಿ ಕೆಲಸ ಮಾಡಿದ ಅನುಭವ ಅತ್ಯುತ್ತಮವಾಗಿತ್ತಂತೆ. ಏಕೆಂದರೆ ಮಿಡ್ ಸೆಮಿಸ್ಟರ್ಗೆ ಹೋಗಿ ಜಾಯಿನ್ ಆಗಿದ್ದ ಕುಸುಮಾ ಅವರಿಗೆ ನೀವು ನಿಮ್ಮ ಪ್ರಯತ್ನ ಮಾಡಿ ಎಂದು, ಕ್ಲಾಸ್ ನೀಡಿ, ಎಲ್ಲವೂ ಹೇಳಿ ಕ“ಟ್ಟು ಸಹಾಯ ಮಾಡಿದ್ದರು ಎಂದು ಕುಸುಮಾ ನೆನಪಿಸಿಕ“ಂಡಿದ್ದಾರೆ.




