Business Tips: ಕ್ರಿಕೇಟಿಕ ಮಹೇಂದ್ರ ಸಿಂಗ್ ಧೋನಿ, ಕ್ರಿಕೇಟ್‌ನಿಂದ ಅದೆಷ್ಟು ಸಂಪಾದನೆ ಮಾಡಿದ್ದಾರೆ ಎಂಬುದನ್ನು, ಅವರ ಲೈಫ್‌ಸ್ಟೈಲ್, ಅವರ ಗಾಡಿ ಕಲೆಕ್ಷನ್ ನೋಡಿ ತಿಳಿಯಬಹುದು. ಅವರ ಗಾಡಿ ಕಲೆಕ್ಷನ್ ಹೇಗಿದೆ ಅಂದ್ರೆ, ಒಂದು ಬೈಕ್ ಶೋರೂಮ್ ಇಡಬಹುದು. ಹಾಗಿದೆ. ಧೋನಿ ಪೂರ್ತಿಯಾಗಿ, ಕ್ರಿಕೇಟ್ ಆಡುವುದನ್ನು ನಿಲ್ಲಿಸಿದರೂ ಕೂಡ, ಅವರು ಕೋಟಿ ಕೋಟಿ ಆದಾಯ ಗಳಿಸಬಹುದು. ಇದು ಹೇಗೆ ಸಾಧ್ಯವೆಂದು ತಿಳಿಯೋಣ ಬನ್ನಿ..
ಕ್ಯಾಪ್ಟನ್ ಕೂಲ್ ಧೋನಿ, ಮಧ್ಯಮ ವರ್ಗದಲ್ಲಿ ಜನಿಸಿದ ಯುವಕ ಧೋನಿ. ಇವರ ಪೂರ್ತಿ ಹೆಸರು, ಮಹೇಂದ್ರ ಸಿಂಗ್, ಪಾನ್ ಸಿಂಗ್, ಧೋನಿ. ಶಾಲೆಯ ಫುಟ್‌ಬಾಲ್ ಟೀಂನಲ್ಲಿ ಗೋಲ್ ಕೀಪಿಂಗ್ ಮಾಡುತ್ತಿದ್ದ ಹುಡುಗ, ಇಂದು ಕೋಟ್ಯಾಧೀಶ ಕ್ರಿಕೇಟಿಗನಾಗಿದ್ದಾನೆಂದರೆ ಅದು ದೊಡ್ಡ ಸಾಧನೆಯೇ ಸರಿ. ಶಾಲೆಯಲ್ಲಿದ್ದಾಗ, ಕ್ರಿಕೇಟ್ ಟೀಂನ ವಿಕೇಟ್ ಕೀಪರ್ ಆಗುತ್ತಿದ್ದರು.
ಕ್ರಿಕೇಟ್ ಬಗ್ಗೆ ಹೆಚ್ಚು ಆಸಕ್ತಿಯುಳ್ಳ ಧೋನಿಗೆ, ಬಾಲ್ಯದಿಂದಲೇ, ತಾನು ಕ್ರಿಕೇಟ್ ಲೋಕದಲ್ಲಿ ಮಿಂಚಬೇಕು ಎನ್ನುವ ಕ್ರೇಜ್ ಇತ್ತು. ಆದರೆ ತಂದೆಯ ಒತ್ತಾಯದ ಮೇರೆಗೆ, ಧೋನಿ, ಜಾರ್ಖಂಡ ರೈಲ್ವೇ ನಿಲ್ದಾಣದಲ್ಲಿ ಟಿಕೇಟ್ ಕಲೆಕ್ಟರ್ ಆಗಿ ನಾಲ್ಕೈದು ವರ್ಷ ಕೆಲಸ ಮಾಡಿದರು. ಕೊನೆಗೆ ಸರ್ಕಾರಿ ಕೆಲಸ ಬಿಡುವ ನಿರ್ಧಾರ ಮಾಡಿ, ತನ್ನ ಪ್ಯಾಶನ್ ಫಾಲೋ ಮಾಡಲೇಬೇಕೆಂದು ನಿರ್ಧರಿಸಿದರು.
ಇಂಡಿಯನ್ ಕ್ರಿಕೇಟ್ ಟೀಂ ಸೇರಲು, ಬೇಕಾದ ತಯಾರಿ ನಡೆಸಿದರು. ಆಟದ ಬಗ್‌ಗೆ ಎಲ್ಲರಲ್ಲೂ ನಂಬಿಕೆ ಮೂಡುವಂತೆ ಮಾಡಿದರು. ವರ್ಲ್ ಕಪ್ ಮ್ಯಾಚ್‌ನಲ್ಲಿ ನಾಯಕನಾಗಿ ಆಡಿದ ಧೋನಿ, ಕಪ್‌ನ್ನು ಭಾರತಾಂಬೆಯ ಮುಡಿಗೇರಿಸಿದರು. ಅಂದಿನಿಂದ ಕ್ಯಾಪ್ಟನ್ ಕೂಲ್ ಎಂದರೆ, ಹಲವು ಕ್ರಿಕೇಟ್ ಫ್ಯಾನ್ಸ್‌ನ ಆರಾಧ್ಯ ದೈವವಾಗಿಬಿಟ್ಟರು.
ಹಲವು ಬ್ರ್ಯಾಂಡ್‌ಗಳಿಗೆ ಅಂಬಾಸೀಡರ್ ಆಗಿರು ಧೋನಿ, ಒಂದು ಬ್ರ್ಯಾಂಡ್ ಪ್ರಮೋಷನ್ ಮಾಡಲು 14 ಕೋಟಿ ತೆಗೆದುಕೊಳ್ಳುತ್ತಾರೆ. ಅವರು ಹಲವು ಕಂಪನಿಗಳೊಂದಿಗೆ ಬ್ಯುಸಿನೆಸ್ ಪಾರ್ಟ್ನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ, ಕೆಲ ಉದ್ಯಮಗಳನ್ನು ನಿಭಾಯಿಸುತ್ತಿರುವ ಧೋನಿ, ಕ್ರಿಕೇಟ್ ದುನಿಯಾಗೆ ಸಂಪೂರ್ಣವಾಗಿ ಗುಡ್ ಬೈ ಹೇಳಿದರೂ ಕೂಡ, ಆರಾಮವಾಗಿ ಕೋಟಿ ಕೋಟಿ ಗಳಿಸಬಹುದು.