ಇಂದು ರಾಜ್ಯದಲ್ಲಿ ಮತದಾನ ಶುರುವಾಗಿದ್ದು, ಹಲವರು ವೋಟ್ ಮಾಡಲು ಉತ್ಸುಕರಾಗಿದ್ದಾರೆ. ಆದರೆ ಕೆಲವರಿಗೆ ತಮ್ಮ ಬಳಿ ವೋಟರ್ ಐಡಿ ಇಲ್ಲ, ಹಾಗಾದ್ರೆ ನಾವು ವೋಟ್ ಹಾಕಬಹುದಾ ಇಲ್ಲಾ..? ನಮಗೆ ಓಟ್ ಹಾಕುವ ಅವಕಾಶ ಸಿಗುತ್ತದಾ, ಇಲ್ಲವಾ ಅನ್ನೋ ಗೊಂದಲವಿದೆ. ಆದ್ರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದು, ನಿಮ್ಮ ಬಳಿ ವೋಟರ್ ಐಡಿ ಇಲ್ಲವೆಂದಲ್ಲಿ ಕೂಡ, ನೀವು ಬೇರೆ ಬೇರೆ ಡಾಕ್ಯೂಮೆಂಟ್‌ನೊಂದಿಗೆ, ವೋಟ್ ಹಾಕಬಹುದು.
ಹಾಗಾದ್ರೆ ಯಾವ ಡಾಕ್ಯೂಮೆಂಟ್ ಮೂಲಕ ನೀವು ಮತ ಚಲಾಯಿಸಬಹುದು ಅಂತಾ ನೋಡುವುದಾದರೆ, ಪಾನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಫೋಟೋವುಳ್ಳ ಪಾಸ್‌ಬುಕ್, ಚಾಲನಾ ಪರವಾನಗಿ, ಚುನಾವಣಾ ಆಯೋಗ ನೀಡಿದ ಗುರುತಿನ ಚೀಟಿ, ಇವೆಲ್ಲವನ್ನೂ ಬಳಸಿ ನೀವು ಮತ ಹಾಕಬಹುದು.
ಯಾವ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು, ಎಲ್ಲೆಲ್ಲಿ ಮತದಾನ ಮಾಡುತ್ತಾರೆ..?
‘ಲಾಠಿ ಏಟು ಬಿದ್ದಿದ್ದಕ್ಕೆ ಕ್ಷಮಿಸಿ, ನೀವು ಕೊಟ್ಟ ಪ್ರೀತಿಗೆ ಚಿರಋಣಿ’