Saturday, May 25, 2024

Latest Posts

ಯಾವ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು, ಎಲ್ಲೆಲ್ಲಿ ಮತದಾನ ಮಾಡುತ್ತಾರೆ..?

- Advertisement -

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಅರ್ಧ ದಿನ ಬಾಕಿ ಇದೆ. ನಾಳೆ 6 ಗಂಟೆಯಿಂದ ಸಂಜೆ 5ಗಂಟೆಯವರೆಗೂ ಮತ ಚಲಾಯಿಸುವ ಅವಕಾಶವಿದೆ. ಅದಕ್ಕಾಗಿ ಹಲವಾರು ಮತಗಟ್ಟೆಗಳು, ತರಹೇವಾರಿಯಾಗಿ ಶೃಂಗಾರಗೊಂಡಿದೆ. ಹೆಣ್ಣುಮಕ್ಕಳಿಗೆ ಪಿಂಕ್‌ ಬೂತ್, ಮಂಗಳಮುಖಿಯರಿಗೆ ಸಪರೇಟ್ ಆಗಿರುವ ಬೂತ್, ಸಾಂಸ್ಕೃತಿಕ ಮತಗಟ್ಟೆ, ರೈತರಿಗಾಗಿ, ಯುವಕರಿಗಾಗಿ ಹೀಗೆ ಹಲವು ರೀತಿಯ ಮತಗಟ್ಟೆಗಳು ರೆಡಿಯಾಗಿದೆ. ಕೆಲವು ಕಡೆ ಮತ ಹಾಕಿದ್ರೆ, ಉಚಿತವಾಗಿ ಮೈಸೂರ್ ಪಾಕ್ ಕೂಡ ಕೊಡುವ ವ್ಯವಸ್ಥೆ ಮಾಡಲಾಗಿದೆ.

ಇಂಥ ಚುನಾವಣಾ ಹಬ್ಬಕ್ಕೆ ಮತ್ತೂ ಮೆರುಗು ನೀಡಲು, ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಸಜ್ಜಾಗಿದ್ದಾರೆ. ಕಾಂತಾರ ಫೇಮ್‌ನ ರಿಷಬ್ ಶೆಟ್ಟಿ ಕುಂದಾಪುರದ ಕೆರಾಡಿಯಲ್ಲಿ ಓಟ್ ಮಾಡ್ತಾರೆ. ರಾಜ್‌ ಬಿ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಉಡುಪಿಯಲ್ಲಿ ಓಟ ಮಾಡಲಿದ್ದಾರೆ.

ನಟ ಯಶ್,  ಉಪೇಂದ್ರ, ಸೃಜನ್ ಲೋಕೇಶ್, ಪೂಜಾ ಗಾಂಧಿ, ದುನಿಯಾ ವಿಜಯ್ ಕತ್ರಿಗುಪ್ಪೆಯಲ್ಲಿ ಮತದಾನ ಮಾಡಲಿದ್ದಾರೆ. ಸುಧಾರಾಣಿ, ಜಗ್ಗೇಶ್, ಅನಂತ್ ನಾಗ್, ಬಿ.ಸರೋಜಾದೇವಿ, ಮಲ್ಲೇಶ್ವರಂನಲ್ಲಿ ಮತದಾನ ಮಾಡಲಿದ್ದಾರೆ. ಇನ್ನು ಅಮೂಲ್ಯ, ನೆನಪಿರಲಿ ಪ್ರೇಮ್, ರಚಿತಾರಾಮ್, ಕಾರುಣ್ಯರಾಮ್, ಅವಿನಾಶ್, ವಸಿಷ್ಠ ಸಿಂಹ ಮತ್ತು ಹರಿಪ್ರಿಯ, ಆರ್.ಆರ್.ನಗರದಲ್ಲಿ ಮತದಾನ ಮಾಡಲಿದ್ದಾರೆ.

ಭಾರತಿ ವಿಷ್ಣುವರ್ಧನ್, ಅನಿರುದ್ದ್ ಜಯನಗರದಲ್ಲಿ ಓಟ್ ಮಾಡಲಿದ್ದಾರೆ. ಮೇಘನಾ ಸರ್ಜಾ, ತಾರಾ, ಸಪ್ತಮಿಗೌಡ, ಅಭಿಷೇಕ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಜೆ ಪಿ ನಗರದಲ್ಲಿ ಮತ ಚಲಾಯಿಸಲಿದ್ದಾರೆ. ರವಿಚಂದ್ರನ್, ಅಜಯ್ ರಾವ್ ರಾಜಾಜಿನಗರದಲ್ಲಿ ಮತ ಚಲಾಯಿಸಿದರೆ, ರಾಘವೇಂದ್ರ ರಾಜಕುಮಾರ್ ಮತ್ತು ಅಶ್ವಿನಿ ಪುನೀತ್ ಸದಾಶಿವನಗರದಲ್ಲಿ ಮತ ಚಲಾಯಿಸಲಿದ್ದಾರೆ.

ಸುದೀಪ್ ಪುಟ್ಟೇನಹಳ್ಳಿಯಲ್ಲಿ, ದ್ವಾರಕೀಶ್ ಬೊಮ್ಮನಹಳ್ಳಿಯಲ್ಲಿ, ಚಂದನ್ ಶೆಟ್ಟಿ, ಸಾಧು ಕೋಕಿಲಾ ನಾಗರಬಾವಿಯಲ್ಲಿ, ವಿಜಯ್ ರಾಘವೇಂದ್ರ ಯಲಹಂಕದಲ್ಲಿ, ರಮೇಶ್ ಅರವಿಂದ ಪದ್ಮನಾಭನಗರದಲ್ಲಿ, ಮಾಲಾಶ್ರೀ ಶಿವಾಜಿನಗರದಲ್ಲಿ, ಶರಣ್ ಮತ್ತು ಶೃತಿ ಹೊಸಕೆರೆಹಳ್ಳಿಯಲ್ಲಿ, ಅರ್ಜುನ್ ಜನ್ಯ ಹೆಬ್ಬಾಳ, ಶ್ರೀಮುರುಳಿ, ಪ್ರಶಾಂತ್ ನೀಲ್ ವಸಂತನಗರದಲ್ಲಿ ಮತದಾನ ಮಾಡಲಿದ್ದಾರೆ.

ರಾಧಿಕಾ ಪಂಡಿತ್ ದೇವಯ್ಯ ಪಾರ್ಕ್‌ನಲ್ಲಿ, ಪ್ರೇಮ್ ಮತ್ತು ರಕ್ಷಿತಾ ಪ್ರೇಮ್ ಚಂದ್ರಾ ಲೇಔಟ್ನಲ್ಲಿ, ಶಿವರಾಜ್‌ಕುಮಾರ್ ಬ್ಯಾಟರಾಯನಪುರದಲ್ಲಿ, ಧ್ರುವಸರ್ಜಾ ತ್ಯಾಗರಾಜನಗರದಲ್ಲಿ, ಹರ್ಷಿಕಾ ಪೂಣಚ್ಚ ಕೆ ಆರ್ ಪುರ, ಯೋಗರಾಜ್ ಭಟ್ ಗಿರಿ ನಗರದಲ್ಲಿ ಮತ ಚಲಾಯಿಸಲಿದ್ದಾರೆ.

ಫೋಟೋಶೂಟ್‌ ವಿಷಯವಾಗಿ ಮದುವೆ ಮನೆಯಲ್ಲಿ ಗಲಾಟೆ: ವೀಡಿಯೋ ವೈರಲ್

ಉತ್ತರಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ನೋಡಲು ಕೊಡಬೇಕಾಗಿಲ್ಲ ತೆರಿಗೆ: ಯೋಗಿ ಆದೇಶ

‘ನಾರಾಯಣಮೂರ್ತಿ ಡ್ಯಾಶಿಂಗ್ ಹೀರೋ ಥರ ಇರ್ತಾರೆ ಅಂದ್ಕೊಂಡಿದ್ದೆ.. ಆದ್ರೆ..’

- Advertisement -

Latest Posts

Don't Miss