Saturday, May 25, 2024

Latest Posts

ಗೂಂಡಾಪಡೆ ಕಟ್ಟಿರುವ ನಿಮ್ಮ ಪಕ್ಷದ ಇತಿಹಾಸ ಎಲ್ಲರಿಗೂ ತಿಳಿದಿದೆ: ಯತೀಂದ್ರಗೆ ಪ್ರೀತಂಗೌಡ ಟಾಂಗ್

- Advertisement -

Political news: ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಕೇಂದ್ರ ಗೃಹಮಂತ್ರಿ ಅಮಿತ್ ಷಾ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಮಿತ್‌ ಶಾ ಓರ್ವ ಗೂಂಡಾ, ರೌಡಿ, ಜುರಾತ್ ನರಮೇಧ ಮಾಡಿಸಿದ್ದು ಯಾರು..? ಎಂದು ಪ್ರಶ್ನಿಸಿ, ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಹಲವು ಬಿಜೆಪಿ ನಾಯಕರು ಅಸಮಾಧಾನ ಹೊರಹಾಕಿದ್ದರು.

ಬಿಜೆಪಿ ನಾಯಕ ಪ್ರೀತಂಗೌಡ ಕೂಡ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದು, ಯತೀಂದ್ರ ವಿರುದ್ಧ ಹರಿಹಾಯ್ದಿದ್ದಾರೆ. ಸಿಎಂ ಸುಪುತ್ರ ಡಾ.ಯತೀಂದ್ರಅವರೇ, ದೇಶ ಕಟ್ಟುವವರು ಯಾರು, ಗೂಂಡಾ ಪಡೆ ಕಟ್ಟುವವರು ಯಾರು ಎಂದು ಇಡೀ ರಾಜ್ಯಕ್ಕೆ ತಿಳಿದಿದೆ. ATM ಸರ್ಕಾರದ ಕಮಿಷನ್-ಕಲೆಕ್ಷನ್ ದಂಧೆ, ವರ್ಗಾವಣೆ ದಂಧೆ, ಗ್ಯಾರಂಟಿ ಹೆಸರಲ್ಲಿ, ಕೇಳಿದಷ್ಟು ನೀರನ್ನು ಕದ್ದುಮುಚ್ಚಿ ತಮಿಳುನಾಡಿಗೆ ಹರಿಸುವ ದಂಧೆ, ಜಾಹೀರಾತಿನ ಹೆಸರಲ್ಲಿ ದಂಧೆ ಹಾಗೂ ಶಾಡೋ ಸಿಎಂ ಆಗಿ ಇಡೀ ರಾಜ್ಯ ಸರ್ಕಾರವನ್ನೇ ನಡೆಸುವವರನ್ನು ಗೂಂಡಾ ಎನ್ನಬಹುದೇ? ಯಾವುದಕ್ಕೂ ಸಿಎಂ ಕುರ್ಚಿಯ ಮೇಲೆ ಕುಳಿತಿರುವ ನಿಮ್ಮ ತಂದೆಯವರನ್ನು ಕೇಳಿ ಹೇಳ್ತಾರೆ ಎಂದು ಪ್ರೀತಂ ಗೌಡ ಮಾತಿನಲ್ಲೇ ತಿವಿದಿದ್ದಾರೆ.

ಗುಜರಾತಿನ ಘಟನೆಯಲ್ಲಿ ಇಡೀ ನಿಮ್ಮ ಯುಪಿಎ ಸರ್ಕಾರ ಕೊಟ್ಟ ಕಿರುಕುಳ, ಎಲ್ಲ ರೀತಿಯ ತನಿಖೆಗಳನ್ನು ಎದುರಿಸಿ ನಿಮ್ಮೆಲ್ಲ ಆರೋಪಗಳಿಂದ ಮುಕ್ತರಾಗಿ, ಹೊರಬಂಧವರು ನಮ್ಮ ನಾಯಕರು. ಎಲುಬಿಲ್ಲದ ನಾಲಿಗೆಯೆಂದು ಸುಳ್ಳುಸುಳ್ಳೇ ಮಾತನಾಡುವುದನ್ನು ನಿಲ್ಲಿಸಿ. ಕೊತ್ವಾಲ್ ಶಿಷ್ಯ ಪರಂಪರೆಯನ್ನೇ ಮುಂದುವರೆಸಿ ಗೂಂಡಾಪಡೆ ಕಟ್ಟಿರುವ ನಿಮ್ಮ ಪಕ್ಷದ ಇತಿಹಾಸ ಎಲ್ಲರಿಗೂ ತಿಳಿದಿದೆ ಎಂದು ಪ್ರೀತಂ ಗೌಡ ಯತೀಂದ್ರ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.

ಕಷ್ಟಕ್ಕೆ ಸ್ಪಂದಿಸುವ ಡಿ.ಕೆ.ಸುರೇಶ್ ಬೇಕೊ? ವೈಟ್ ಕಾಲರ್ ಡಾ.ಮಂಜುನಾಥ್ ಬೇಕೋ?ನೀವೇ ನಿರ್ಧರಿಸಿ ಎಂದ ಸಿಎಂ

ಮೇಡಂ ಟುಸ್ಸಾಡ್ಸ್‌ನಲ್ಲಿರುವ ತಮ್ಮ ಮೇಣದ ಪ್ರತಿಮೆ ಅನಾವರಣಗೊಳಿಸಿದ ನಟ ಅಲ್ಲು ಅರ್ಜುನ್

ನಾವೆಲ್ಲರೂ ಲಿಂಗಾಯತರು ನಮ್ಮನ್ನು ಬೆಳೆಸಿದ್ದು ಪ್ರಹ್ಲಾದ್ ಜೋಶಿ: ಶಾಸಕ ಎಂ.ಆರ್.ಪಾಟೀಲ್

- Advertisement -

Latest Posts

Don't Miss