Wednesday, May 29, 2024

Latest Posts

ಲಿಂಕ್ ಕ್ಲಿಕ್ ಮಾಡಿ 2 ಲಕ್ಷ ಕಳೆದುಕೊಂಡ ಮಾಜಿ ಬಿಗ್‌ಬಾಸ್ ಸ್ಪರ್ಧಿ

- Advertisement -

Big Boss News: ಯಾರೋ ಅಪರಿಚಿತರು ಕಳಿಸಿದ ಲಿಂಕ್, ಯಾರೋ ನಿಮಗೆ ಗಿಫ್ಟ್ ಬಂದಿದೆ ಎಂದು ಕಳಿಸುವ ಲಿಂಕ್, ಹೀಗೆ ಯಾವುದ್ಯಾವುದೋ ಲಿಂಕ್ ಪ್ರೆಸ್ ಮಾಡಬೇಡಿ. ಇದು ನಿಮ್ಮ ಮೊಬೈಲ್ ಹ್ಯಾಕ್‌ ಮಾಡುತ್ತೆ ಅಂತಾ ಹಲವು ಬಾರಿ ಎಚ್ಚರಿಸಲಾಗಿದೆ. ಆದರೂ ಕೂಡ ವಿದ್ಯಾವಂತರೇ ಇಂಥ ಲಿಂಕ್ ಕ್ಲಿಕ್ ಮಾಡಿ, ಕಷ್ಟಕ್ಕೆ ಒಳಗಾಗುತ್ತಿದ್ದಾರೆ.

ನಟಿ, ಮಾಜಿ ಬಿಗ್‌ಬಾಸ್ ಸ್ಪರ್ಧಿ, ಕೀರ್ತಿ ಭಟ್ ಯಾವುದೋ ಒಂದು ಲಿಂಕ್ ಕ್ಲಿಕ್ ಮಾಡಿ, 2 ಲಕ್ಷ ಕಳೆದುಕೊಂಡಿದ್ದಾರೆ. ಈ ನಟಿಗೆ ಕೋರಿಯರ್ ಬರಬೇಕಿತ್ತು. ಆದರೆ ಅದು ಸಮಯ ಮೀರಿದರೂ ಬರದ ಕಾರಣ, ಅವರು ಕೇಂದ್ರ ಕಚೇರಿಗೆ ಕಾಲ್ ಮಾಡಿದ್ದಾರೆ. ಬರಬೇಕಿದ್ದ ಕೊರಿಯರ್ ಈಗಾಗಲೇ ಡಿಲೆವರಿಯಾಗಿದೆ ಎಂದು ಕಂಪನಿಯವರು ಹೇಳಿದ್ದಾರೆ.

ಆದರೆ ಮತ್ತೊಮ್ಮೆ ಕೋರಿಯರ್ ಬಂದಿಲ್ಲವೆಂದು ಹೇಳಿದಾಗ, ನೀವು ಇರುವ ಅಡ್ರೆಸ್ ಟ್ರ್ಯಾಕ್ ಆಗುತ್ತಿಲ್ಲ. ಹಾಗಾಗಿ ನಿಮಗೊಂದು ಲಿಂಕ್ ಕಳಿಸುತ್ತೇವೆ. ಆ ಲಿಂಕ್ ಕ್ಲಿಕ್‌ ಮಾಡಿ ನಿಮ್ಮ ಅಡ್ರೆಸ್ ಸಿಗುತ್ತದೆ ಎಂದಿದ್ದಾರೆ. ಕೀರ್ತಿ ಭಟ್ ಲಿಂಕ್ ಕ್ಲಿಕ್ ಮಾಡಿದ್ದು, ಅಕೌಂಟ್‌ನಿಂದ 2 ಲಕ್ಷ ರೂಪಾಯಿ ಕಟ್ ಆಗಿದೆ. ಬಳಿಕ ನಂಬರ್ ಬ್ಲಾಕ್ ಮಾಡಲಾಗಿದೆ. ಈ ಬಗ್ಗೆ ಕೀರ್ತಿ ಭಟ್ ಪೊಲೀಸರಿಗೆ ದೂರು ನೀಡಿದ್ದು, ಈವರೆಗೆ ಯಾವುದೇ ಹಣ ವಾಪಸ್ ಬಂದಿಲ್ಲ.

ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಬ್ಯಾಡ್ಮಿಂಟನ್ ತಾರೆ ಸೈನಾ

ಇದ್ರು ,ಹೋದ್ರು ನನಗೆ ಮಂಡ್ಯ ಸಾಕು. ಸ್ವಾರ್ಥ ಅನ್ನೋದು ಇದ್ರೆ ಮಂಡ್ಯ ಮಾತ್ರ: ಸಂಸದೆ ಸುಮಲತಾ ಅಂಬರೀಷ್

ಹಾಸನದಲ್ಲಿ ಹಿಟ್ ಅಂಡ್ ರನ್‌ಗೆ ಮಾವ-ಅಳಿಯ ಬಲಿ

- Advertisement -

Latest Posts

Don't Miss