- Advertisement -
ಹುಬ್ಬಳ್ಳಿ : ರಾಜ್ಯ ರಾಜಕೀಯದಲ್ಲಿ ಸದ್ಯ ವಿಧಾನಪರಿಷತ್ ಚುನಾವಣೆಗಳು ಕಾವೇರಿದ್ದು, ವಿಧಾನ ಪರಿಷತ್ ಚುನಾವಣೆ ಸಂಬಂಧ ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಮ್ಮುಖದಲ್ಲೇ ಬಿಜೆಪಿ ಶಾಸಕರ ಮಧ್ಯೆ ಗಲಾಟೆ ನಡೆದಿದೆ.
ಹುಬ್ಬಳ್ಳಿಯ ಖಾಸಗಿ ಹೋಟೇಲ್ ನಲ್ಲಿ ವಿಧಾನಪರಿಷತ್ ಚುನಾವಣಾ ಉಸ್ತುವಾರಿ ಹಂಚಿಕೆ ಸಂಬಂಧ. ರಾಣೆಬೆನ್ನೂರು ಬಿಜೆಪಿ ಶಾಸಕ ಅರುಣ್ ಕುಮಾರ್ ಮತ್ತು ಪರಿಷತ್‌ನ ಬಿಜೆಪಿ ಸದಸ್ಯ ಆರ್ ಶಂಕರ್ ಮಧ್ಯೆ ಈ ಗಲಾಟೆ ನಡೆದಿದೆ.
ವಿಧಾನಪರಿಷತ್ ಬಿಜೆಪಿ ಸದಸ್ಯ ಆರ್ ಶಂಕರ್ ವಿರುದ್ದ ಶಾಸಕ ಅರುಣ್ ಕುಮಾರ್ ಗರಂ ಆಗಿದ್ದಾರೆ. ಉಭಯ ಶಾಸಕರ ಮಧ್ಯೆ ಗಲಾಟೆ ತಾರಕಕ್ಕೇರಿದೆ. ಗಲಾಟೆಯಾಗುತ್ತಿದ್ದಂತೆ ಆರ್ ಶಂಕರ್ ಸಭೆಯಿಂದ ಹೊರನಡೆದಿದ್ದಾರೆ. ಬಳಿಕ ಮುಖಂಡರು ಆರ್. ಶಂಕರ್ ಅವರನ್ನು ವಾಪಸ್ ಸಭೆಗೆ ಕರೆದುಕೊಂಡು ಬಂದಿರುವ ಘಟನೆ ನಡೆದಿದೆ.
- Advertisement -