ಬೆಂಗಳೂರು: ಮೈತ್ರಿ ಸರ್ಕಾರದ ನಾಯಕರನ್ನ ಮಾಜಿ ಡಿಸಿಎಂ ಆರ್. ಅಶೋಕ್ ತೀವ್ರವಾಗಿ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅಶೋಕ್, ಚುನಾವಣೆ ಸಮಯದಲ್ಲಿ ದೇವೇಗೌಡರು, ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ನರೇಂದ್ರ ಮೋದಿ ಅವ್ರನ್ನ ತೆಗಳಿದರು. ಕಳ್ಳರು, ಸುಳ್ಳರು, ಜೈಲಿಗೆ ಹೋಗಿ ಬಂದವರು ಅಂತ ಹೇಳಿದ್ರು.
ಇನ್ನಾದ್ರೂ ಬಿಎಸ್ ವೈ ಅವ್ರ ಬಗ್ಗೆ ಗೌರವ ಕೊಟ್ಟು ಮಾತ್ನಾಡಲಿ. ಮೈತ್ರಿ ನಾಯಕರ ಪುಟಗೋಸಿಯನ್ನ ರಾಜ್ಯದ ಜನರು ಹರಿದು ಹಾಕಿದ್ದಾರೆ ಅಂತ ಅಶೋಕ್ ಕಟುವಾಗಿ ಟೀಕಿಸಿದ್ದಾರೆ.
ನಿಂಬೆಹಣ್ಣು ಇಟ್ಟು ಟೈಂ ನೋಡಿ ರಾಜೀನಾಮೆ ನೀಡಿ
ಇನ್ನು ಮೋದಿ ಮತ್ತೆ ಪ್ರಧಾನಿಯಾದ್ರೆ ರೇವಣ್ಣ ರಾಜೀನಾಮೆ ನೀಡ್ತೀನಿ ಅಂತ ಹೇಳಿದ್ದ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್,ನರೇಂದ್ರ ಮೋದಿ ಈಗ ಗೆದ್ದಾಯ್ತು. ರೇವಣ್ಣ ನಿಂಬೇಹಣ್ಣು ಇಟ್ಟು ಸಮಯ ನೋಡಿ ರಾಜೀನಾಮೆ ನೀಡಲಿ ಅಂತ ವ್ಯಂಗ್ಯವಾಡಿದ್ದಾರೆ.
ಮೋದಿಗೆ ಸ್ಪೆಷಲ್ ವಿಶ್ ಹೇಗ್ ಮಾಡಿದ್ರು ಗೊತ್ತಾ…? ಈ ವಿಡಿಯೋ ತಪ್ಪದೇ ನೋಡಿ