Wednesday, April 16, 2025

Latest Posts

ಮಾಜಿ ಸಚಿವ ರೇಣುಕಾಚಾರ್ಯ ಮತ್ತು ಅವರ ಪುತ್ರನಿಗೆ ಜೀವ ಬೆದರಿಕೆ

- Advertisement -

Political News: ದಾವಣಗೆರೆಯ ಹೊನ್ನಾಳಿಯ ಮಾಜಿ ಶಾಸಕ, ರೇಣಾಕಾಚಾರ್ಯ ಮತ್ತು ಅವರ ಪುತ್ರನಿಗೆ ಸೋಮವಾರ ರಾತ್ರಿಯೊಳಗೆ ನಿಮ್ಮನ್ನು ಕೊಲ್ಲುವುದಾಗಿ, ಜೀವ ಬೆದರಿಕೆ ಕರೆ ಬಂದಿದೆ.

ಅಂತರಾಷ್ಟ್ರೀಯ ಸಂಖ್ಯೆಯಿಂದ ಅನಾಮಿಕ ವ್ಯಕ್ತಿ ಕರೆ ಮಾಡಿ, ಈ ರೀತಿ ಜೀವ ಬೆದರಿಕೆ ಹಾಕಿದ್ದು, ರೇಣುಕಾಚಾರ್ಯ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಮೊದಲು ನನಗೆ ಮಿಸ್‌ಕಾಲ್‌ ಬಂದಿತ್ತು. ನಾನು ಆ ಕಾಲ್ ಸ್ವೀಕರಿಸಲಿಲ್ಲ. ಮತ್ತೆ ಮಧ್ಯಾಹ್ನದ ಸಮಯದಲ್ಲಿ ಕಾಲ್ ಬಂತು, ಅಂತರಾಷ್ಟ್ರೀಯ ಕರೆ ಆಗಿದ್ದರೂ ಕೂಡ, ಆ ವ್ಯಕ್ತಿ ಕನ್ನಡದಲ್ಲಿ ಮಾತನಾಡಿ, ನಾನು ನಿನ್ನನ್ನು ಮುಗಿಸುತ್ತೇನೆ. ನಿನ್ನ ಮಗನನ್ನೂ ಮುಗಿಸುತ್ತೇನೆ ಎಂದು ಹೇಳಿದ್ದಾನೆ. ಯಾರು ನೀನು ಎಂದು ಕೇಳುತ್ತಿದ್ದ ಹಾಗೆ ಆತ ಕಾಲ್ ಕಟ್ ಮಾಡಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದ್ದರು.

ಮಲೇಷಿಯಾದಿಂದ ಈ ಕರೆ ಬಂದಿದೆ ಎಂದು ತಿಳಿದುಬಂದಿದೆ. 2 ವರ್ಷದ ಹಿಂದೆ ಇದೇ ರೀತಿ ಬೆದರಿಕೆ ಕಾಾಲ್ ಬಂದಿತ್ತು. ಆಗ ಬೆಂಗಳೂರಿನ ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಅದೃಷ್ಟವಶಾತ್ ಅಂದು ನನಗೇನೂ ಆಗಿರಲಿಲ್ಲ. ಇದೀಗ ಅದೇ ರೀತಿ ಜೀವ ಬೆದರಿಕೆ ಬಂದಿದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಇನ್ನು ಈ ಬೆದರಿಕೆ ಕರೆಗೆ ರೇಣುಕಾಚಾರ್ಯ ಹೆದರಲು ಕಾರಣವೇನೆಂದರೆ, ಕಳೆದ ವರ್ಷ ರೇಣುಕಾಚಾರ್ಯ ಅಣ್ಣನ ಮಗ ಕಿಡ್ನ್ಯಾಪ್ ಆಗಿದ್ದು, ಕೊನೆಗೆ ಶವವಾಗಿ ಪತ್ತೆಯಾಗಿದ್ದ. ಅಷ್ಟೇ ಅಲ್ಲದೇ, ರೇಣುಕಾಚಾರ್ಯ ಮನೆಗೆ ಕಲ್ಲು ತೂರಾಟ ನಡೆಸಿ, ಬೆಂಕಿ ಹಚ್ಚಿ ಪ್ರಾಣ ಹಾನಿ ಮಾಡುವ ಕೆಲಸ ಕೂಡ ನಡೆದಿತ್ತು ಎನ್ನಲಾಗಿದೆ.

Lok Sabha Election 2024: ಪ್ರಧಾನ ಮಂತ್ರಿ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ಧತೆ ಶುರು

ಕಾಂಗ್ರೆಸ್ ಗೆದ್ದರೆ 1 ಲಕ್ಷ ರೂಪಾಯಿ ಬರುತ್ತದೆ ಎಂದು ಬರೀ 10 ದಿನಗಳಲ್ಲಿ 12 ಸಾವಿರ ಅಕೌಂಟ್ ಓಪೆನ್

ಫಲಿತಾಂಶಕ್ಕೂ ಮುನ್ನವೇ ರಾಶಿ ರಾಶಿ ಲಡ್ಡು ತಯಾರಿಸಿ, ಹಂಚಲು ಬಿಜೆಪಿಗರು ರೆಡಿ

- Advertisement -

Latest Posts

Don't Miss