- Advertisement -
ಕರ್ನಾಟಕ ಟಿವಿ : ಇಡಿ ವಿಚಾರಣೆಯಿಂದ ಜರ್ಜರಿತವಾಗಿರುವ ಡಿಕೆಶಿಗೆ ನೈತಿಕ ಬೆಂಬಲ ಸೂಚಿಸಲು ಮಾಜಿ ಶಾಸಕರ ದಂಡು ದೆಹಲಿಗೆ ದೌಡಾಯಿಸಿದೆ. ಮಾಜಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಳವಳ್ಳಿ ಮಾಜಿ ಶಾಸಕ ನರೇಂದ್ರಸ್ವಾಮಿ, ಮಾಗಡಿ ಮಾಜಿ ಶಾಸಕ ಬಾಲಕೃಷ್ಣ, ಮಂಡ್ಯ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಗಣಿಗ ರವಿ, ಕಾಂಗ್ರೆಸ್ ಯುವ ಮುಖಂಡ ರಘುವೀರ್ ಗೌಡ ಡಿಕೆಶಿ ಭೇಟಿಯಾಗಿ ಧೈರ್ಯ ತುಂಬಿದ್ದಾರೆ.
ಇಡಿ ಅಧಿಕಾರಿಗಳ ಬಳಿ ಗೌರಿ-ಗಣೇಶ ಹಬ್ಬ ಆಚರಣೆಗೆ ಅವಕಾಶ ಕೇಳಿದ್ರು ಸಿಕ್ಕಲ್ಲ. ಈ ಹಿನ್ನೆಲೆ ನಾಯಕರೆ ಡಿಕೆಶಿ ಭೇಟಿಯಾಗಿ ನೈತಿಕ ಬೆಂಬಲ ಸೂಚಿಸಿದ್ದಾರೆ. ಮಾಜಿ ಸಂಸದ ಶಿವರಾಮೇಗೌಡ, ಡಿಕೆ ಸಹೋದರ ಸುರೇಶ್ ಡಿಕೆ ಶಿವಕುಮಾರ್ ದೆಹಲಿ ತಲುಪಿದ ಕ್ಷಣದಿಂದಲೇ ಜೊತೆಯಲ್ಲಿದ್ದಾರೆ
- Advertisement -