Eye test: ಕಣ್ಣಿಗೆ ಬಟ್ಟೆ ಕಟ್ಟಿದರೂ ಪುಸ್ತಕ ಓದುವ ಮಹಾ ಮೇಧಾವಿ..!

ಬೆಂಗಳೂರು: ನಾವು ಏನನ್ನಾದರೂ ಓದಬೇಕೆಂದರೆ ಮೊದಲು ಮನಸ್ಸಿನಲ್ಲಿ ಓದಿಕೊಂಡು ನಂತರ ಹೊರಗೆ ಎಲ್ಲಾರಿಗೂ ಕೇಳುವ ಹಾಗೆ ಓದುತ್ತೇವೆ ಯಾಕೆಂದರೆ ಏನನ್ನಾದರೂ ತಪ್ಪು ಓದಿದರೆ ಜನ ನಕ್ಕು ಬಿಡುತ್ತಾರೆ ಎಂದು. ಒಂದೊಂದು ಸಲ ಎಷ್ಟೇ  ನೋಡಿಕೊಂಡರೂ ಓದುವಾಗ ಪುನಃ ತಪ್ಪನ್ನು ಮಾಡುತ್ತಿರುತ್ತೇವೆ ಆದರೆ ಇಲ್ಲೊಬ್ಬ ಎಂಟು ವರ್ಷದ ಪುಟ್ಟ ಬಾಲಕ  ಕಣ್ಣಿಗೆ ಬಟ್ಟೆಕಟ್ಟಿಕೊಂಡು ಕೊಂಚವೂ ತಪ್ಪಿಲ್ಲದೆ  ಸರಾಗವಾಗಿ ಓದುತ್ತಾನೆ ಹಾಗೂ ಅವನ ಮುಂದೆ ಯಾವುದೇ ಬಣ್ಣ ಇಟ್ಟರೂ ಲೀಲಾಜಾಲವಾಗಿ  ಬಣ್ಣದ ಹೆಸರನ್ನು ಗುರುತಿಸುತ್ತಾನೆ ಅವರ ಹೆಸರು ಪರಿಕ್ಷಿತ್ ಪಂಡಿತ್

ಕಲಬುರಗಿಯವರಾದ  ಹರೀಶ್ ಓಂಕಾರ್ ಹಾಗೂ ಅಶ್ವಿನಿ‌ ದಂಪತಿಗಳು ಪುತ್ರ ಪರೀಕ್ಷಿತ್ ಪಂಡೀತ್.  ಬೆಂಗಳೂರಿನ ವಿಜಯನಗರ ನಿವಾಸಿಗಳಾಗಿದ್ದಾರೆ. ದಂಪತಿಗಳ ಮಗ ಕಣ್ಣಿಗೆ ಬಟ್ಟೆ ಕಟ್ಟಿದರೂ ನೋಟಿನ ನಂಬರ್ ಹೇಳ್ತಾನೆ.ಇನ್ನು ಹಿಂದೂ ಧಾರ್ಮಿಕ ಗ್ರಂಥವಾದ  ಭಗವದ್ಗೀತೆಯ 12 ಅಧ್ಯಾಯಗಳು ಕರಗತ ಮಾಡಿಕೊಂಡುರುವ ತಪ್ಪಿಲ್ಲದೆ ಎಲ್ಲವನ್ನೂ ಓದುತ್ತಾನೆ ಇನ್ನು ಮಗನ ವಿಶೇಷತೆಯ ಬಗ್ಗೆ ಮಾತನಾಡಿರುವ ಪೋಷಕರು, ಮನೆಯಲ್ಲಿ ಎಲ್ಲ ರೀತಿಯ ಮ್ಯಾಪ್​ ಹಾಕಿದ್ದೇವು,

ಎಷ್ಟೋ ಬಾರಿ ಮನೆಯಲ್ಲಿ ನಾವು ಪರೀಕ್ಷೆ ಮಾಡಿ ನೋಡಿದರೆ ನಮಗೆ ಅಚ್ಚರಿ ಆಗುವಂತೆ ಅವನು ವಸ್ತುಗಳನ್ನು ಗುರುತಿಸುತ್ತಾನೆ. ನಮಗೆ ಕಣ್ಣು ಕಟ್ಟಿದರೆ ಏನು ಹೇಳೋಕೆ ಆಗೋದಿಲ್ಲ ಆದರೆ ಇವನು ಅದು ಹೇಗೆ ಗುರುತಿಸುತ್ತಾನೆ  ಎಂಬುದೇ ಅನುಮಾನ ಬಹುಶಃ ದೇವರು ಕರುಣಿಸಿರುವ ವಿಶೇಷ ಶಕ್ತಿ ಇರಬಹುದು ಎಂಬುದು ದಂಪತಿಗಳ ಮಾತು

ಟಾಪ್ 100 ಸಾಧಕ ಬಾಲಕರಲ್ಲಿ ಕನ್ನಡಿಗ ಪರೀಕ್ಷಿತ್ ಪಂಡಿತ್‌ ಕೂಡ ಒಬ್ಬ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸರಾಗವಾಗಿ  ಓದ್ತಾನೆ. ಪಜಲ್‌ನಲ್ಲಿ ಬರುವ ದೇಶದ ಧ್ವಜದ ಬಣ್ಣವನ್ನು ಅಷ್ಟೇ ಕರಾರುವಕ್ಕಾಗಿ ಹೊಂದಿಸಿ ತೋರಿಸ್ತಾನೆ ನಾಲ್ಕನೆಯ ವಯಸ್ಸಿನಲ್ಲಿಯೇ ನಕ್ಷೆಯಲ್ಲಿ ರಾಜ್ಯಗಳ ಆಕಾರ ಗುರುತಿಸಿದ್ದಕ್ಕಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್, ವರ್ಲ್ಡ್ ಇಂಡಿಯಾ ರೆಕಾರ್ಡ್‌ನಲ್ಲಿ ಹೆಸರು ನಮೂದಿಸಿದ್ದಾನೆ.

Sandalwood : ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಶುರುವಾಗಿದೆ  ಫ್ಯಾನ್ಸ್ ವಾರ್..!

Akash shankar IAS: ಐಎಎಸ್ ಅಧಿಕಾರಿ ವಿರುದ್ದ ಪತ್ನಿಯಿಂದ ದೂರು ದಾಖಲು

Sharavathi :ಶರಾವತಿ ಕಣಿವೆ ಜಲ ವಿದ್ಯುತ್ ಯೋಜನೆ ಸಂತ್ರಸ್ಥ ಕುಟುಂಬಗಳ ಬೇಡಿಕೆಗಳ ಕುರಿತ ಪರಿಶೀಲನಾ ಸಭೆ

 

 

About The Author