International News: ಲಾಸ್ ಏಂಜಲೀಸ್‌ನಲ್ಲಿ ಬೆಂಕಿ ಬಿದ್ದು, ಹಲವು ಮನೆಗಳು ಸುಟ್ಟು ಕರಕಲಾಗಿದೆ. ಅಲ್ಲದೇ, 24ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಲಾಸ್ ಏಂಜಲೀಸ್ ಬಗ್ಗೆ ಹಲವು ವೀಡಿಯೋಗಳು ಓಡಾಡುತ್ತದೆ. ಹಾಲಿವುಡ್ ಎಂಬ ಸ್ಥಳದಲ್ಲಿ ಜೋರಾಗಿ ಬೆಂಕಿ ಹೊತ್ತಿ ಉರಿದ ಹಾಗೆ, ಲಾಸ್ ಏಂಜಲೀಸ್‌ನ ಮನೆಗಳೆಲ್ಲ ಬೆಂಕಿಯಲ್ಲಿ ಇರುವ ಹಾಗೆ ವೀಡಿಯೋ ಎಡಿಟ್ ಮಾಡಿ ಹರಿಬಿಡಲಾಗಿದೆ. ಆದರೆ ಹಾಲಿವುಡ್‌ನಲ್ಲಿ ನಿಂತು ಎಷ್ಟೋ ಜನ ನೀವು ನೋಡುತ್ತಿರುವ ವೀಡಿಯೋಗಳು ಫೇಕ್. ಇಲ್ಲಿ ಅಂಥ ದೊಡ್ಡ ಅವಘಡವೇ ಆಗಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.
ಈ ಮಧ್ಯೆ ಇನ್ನೊಂದು ವೀಡಿಯೋ ಹರಿದಾಡುತ್ತಿದ್ದು, ಪಕ್ಷಿಯೊಂದು ಬೆಂಕಿ ಉಗುಳುತ್ತಿದ್ದು. ಇದೇ ಪಕ್ಷಿ ಲಾಸ್ ಏಂಜಲೀಸ್‌ನಲ್ಲಿ ಬೆಂಕಿ ತಗುಲಲು ಕಾರಣವಾಗಿದೆ ಎಂದು ಹಲವರು ಆರೋಪಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಆದರೆ ಫ್ಯಾಕ್ಟ್ ಚೆಕ್ ಮಾಡಿದಾಗ, ಇದು ಫೇಕ್ ವೀಡಿಯೋ, ಬೆಂಕಿ ಉಗುಳುವ ಯಾವುದೇ ಪಕ್ಷಿ ಇಲ್ಲವೆಂದು ಗೊತ್ತಾಗಿದೆ.
ಈ ವೀಡಿಯೋದ ರಿಯಾಲಿಟಿ ಏನು ಎಂದರೆ, Fabricio Rabachim ಎಂಬ ವ್ಯಕ್ತಿ ಈ ಪಕ್ಷಿಯ ನಡೆಯನ್ನು ವೀಡಿಯೋ ಮಾಡಿದ್ದು, ಆ ಪಕ್ಷಿ ಕೊಂಕು ಬಳಸುತ್ತಿದ್ದ ರೀತಿ ಕಂಡು, ಅದನ್ನು ಯಾವ ರೀತಿಯಾದ್ರೂ ಎಡಿಟ್ ಮಾಡಿ ಚೆಂದಗಾಣಿಸಬೇಕು ಎಂಬ ಕಾರಣಕ್ಕೆ, ಅದು ಕೊಂಕಿನಿಂದ ಬೆಂಕಿ ಬಿಡುವ ಹಾಗೆ ಎಡಿಟ್ ಮಾಡಿ, 2020ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋವನ್ನು ಹರಿಬಿಟ್ಟಿದ್ದ.
ಈ ವೀಡಿಯೋವನ್ನೇ ಇಟ್ಟುಕೊಂಡು ಜನ ಇದೇ ಪಕ್ಷಿ ಲಾಸ್ ಏಂಜಲೀಸ್‌ನಲ್ಲಿ ಬೆಂಕಿಯುಗುಳಿದ್ದು ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾಗ, ಇದು ಸುಳ್ಳು ಸುದ್ದಿ. ಇದು ಯಾವುದೇ ಪಕ್ಷಿಯ ಕೆಲಸವಲ್ಲ. ಇದು ನಾನು ಮಾಡಿದ ಎಡಿಟೆಡ್ ವೀಡಿಯೋ ಎಂದು ಸತ್ಯ ಹೇಳಿದ್ದಾರೆ. ಒಟ್ಟಾರೆಯಾಗಿ ಇದು ಸುಳ್ಳು ಸುದ್ದಿ ಎಂದು ಸಾಬೀತಾಾಗಿದೆ.
Courtesy: Fabricio Rabachim