Wednesday, January 15, 2025

Latest Posts

ಸರ್ಕಾರದ ಮೊರೆ ಹೋದ ನಿವೃತ್ತ ಯೋಧನ ಕುಟುಂಬ..!

- Advertisement -

www.karnatakatv.net :ಗುಂಡ್ಲುಪೇಟೆ: ನಿವೃತ್ತ ಯೋಧನ ಕುಟುಂಬದ ಮೇಲೆ ಪಂಚಾಯತ್ ಪಿಡಿಒ ಹಲ್ಲೆ ನಡೆಸುತ್ತಿದ್ದು, ಸರ್ಕಾರದ ಮೊರೆ ಹೋಗಿದ್ದಾರೆ.

ಹೌದು. ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿ ಕೋಟೆಕೆರೆ ಗ್ರಾಮಪಂಚಾಯತಿಯಲ್ಲಿ ನಡೆಯುತ್ತಿರುವ  ಭ್ರಷ್ಟಾಚಾರ ವಿರುದ್ಧ ಧ್ವನಿಯೆತ್ತಿದ್ದ ನಿವೃತ್ತ ಯೋದ ಲಕ್ಷ್ಮಣರಾವ್ ಅವರ ಪುತ್ರ ಸತೀಶ್ ರಾವ್ ವಿರುದ್ಧ ಪಂಚಾಯತಿ ಪಿಡಿಓ ಅವರು ಗುಂಪು ಕಟ್ಟಿಕೊಂಡು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಸತೀಶ್ ರಾವ್ ಆರೋಪ ಮಾಡುತ್ತಿದ್ದಾರೆ.

ಗಡಿಕಾದು ದೇಶದ ರಕ್ಷಣೆ ಮಾಡಿದ ಯೋಧನ ಕುಟುಂಬಕ್ಕೆ ಪ್ರತಿ ನಿತ್ಯ ಕಿರುಕುಳ ನೀಡುತ್ತಿದ್ದರೂ ಸಹ ಪೊಲೀಸಿನವರು ರಕ್ಷಣೆ ನೀಡುತ್ತಿಲ್ಲ, ಉದ್ದೇಶಪೂರಕವಾಗಿ  ಕುರುಬರಹುಂಡಿಯಲ್ಲಿರುವ ನನ್ನ ಜಮೀನನ್ನು ವಶಪಡಿಸಿಕೊಳ್ಳಲು ಪಿತೂರಿ ನಡೆಸಲಾಗುತ್ತಿದೆ, ಜಮೀನಿನಲ್ಲಿ ಇದ್ದ ನನ್ನ ಮನೆಗೆ ಹಾನಿ ಮಾಡಲಾಗಿದ್ದು ಮರಗಳನ್ನು ಕಡಿಯಲಾಗಿದೆ , ಇಷ್ಟೇ ಅಲ್ಲದೆ ನನ್ನ ಸ್ವಂತ ಜಮೀನಿನಲ್ಲಿ ಸೈಟ್ ನಿರ್ಮಾಣ ಮಾಡಲು ಅದ್ದುಬಸ್ತಿನ ಕಲ್ಲುಗಳನ್ನು ನೆಡಲಾಗಿದೆ ಎಂದು ಆರೋಪಿಸಿದರು.

ಪಂಚಾಯತಿ ಅವ್ಯವಹಾರದ ವಿರುದ್ಧ ಮಾತನಾಡಿದ್ದಕ್ಕೆ ಪಿಡಿಒ ಅವರು ಉದ್ದೇಶಪೂರಕವಾಗಿ ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿದ್ದಾರೆ ಇದನ್ನ ಪೊಲೀಸ್ ಇಲಾಖೆ  ಸೂಕ್ಷ್ಮವಾಗಿ ಪರಿಗಣಿಸದೆ ನಮ್ಮನ್ನ ಕಡೆಗಣನೆ ಮಾಡುತ್ತಿದೆ ಈ ಹಿನ್ನೆಲೆಯಲ್ಲಿ ಸರ್ಕಾರದ ಜವಾಬ್ದಾರಿಯುತ ಅಧಿಕಾರಿಗಳಿಂದ ರಕ್ಷಣೆ ನೀಡಬೇಕು ಎಂದು ಸತೀಶ್  ರಾವ್ ಸರ್ಕಾರಕ್ಕೆ ಮನವಿ ಮಾಡುವ ಮೂಲಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ

- Advertisement -

Latest Posts

Don't Miss