Wednesday, July 2, 2025

Latest Posts

ಕಾಂಟಾ ಲಗಾ ಖ್ಯಾತಿಯ ಶೆಫಾಲಿ ಜರಿವಾಲಾ ಸಾವು ನಿಗೂಢ?

- Advertisement -

ಪುನೀತ್ ರಾಜ್‌ ಕುಮಾರ್ ಅಭಿನಯದ ಹುಡುಗರು ಸಿನಿಮಾದ ಬೋರ್ಡು ಇರದ ಬಸ್ಸನು ಹಾಡು ನಿಮಗೆಲ್ಲಾ ಗೊತ್ತಿದೆ. ಕಾಂಟಾ ಲಗಾ ಖ್ಯಾತಿಯ ಶೆಫಾಲಿ ಜರಿವಾಲ, ಸಾವನ್ನಪ್ಪಿದ್ದಾರೆ. ಮುಂಬೈನ ಅಂದೇರಿಯಲ್ಲಿ ವಾಸವಾಗಿದ್ದ ಶೆಫಾಲಿ, ನಿನ್ನೆ ಇದ್ದಕ್ಕಿದ್ದಂತೆ ತೀವ್ರ ಅಸ್ವಸ್ಥರಾಗಿ ಕುಸಿದುಬಿದ್ದಿದ್ದಾರೆ. ಬಳಿಕ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಮಾರ್ಗ ಮಧ್ಯೆದಲ್ಲೇ ಶೆಫಾಲಿ ಕೊನೆಯುಸಿರೆಳೆದಿದ್ದಾರೆ.

ಹಲವು ಸಿನಿಮಾಗಳು, ಕಿರುತೆರೆ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿದ್ದ ಶೆಫಾಲಿ, ಕನ್ನಡದಲ್ಲಿ ಹುಡುಗರು ಸಿನಿಮಾದ ಹಾಡಿಗೆ ಹೆಜ್ಜೆಹಾಕಿದ್ರು. ನಾ ಬೋರ್ಡ್ ಇರದ ಬಸ್ಸಲ್ಲಿ ಹಾಡಿಗೆ, ಪುನಿತ್ ರಾಜ್ಕುಮಾರ್ , ಶ್ರೀನಗರ ಕಿಟ್ಟಿ, ಲೂಸ್ ಮಾದ ಜೊತೆ ಸೊಂಟ ಬಳುಕಿಸಿದ್ರು.

ಶೆಫಾಲಿ 2004ರಲ್ಲಿ ಹರ್ಮಿತ್ ಸಿಂಗ್ ಜೊತೆ ಮದುವೆಯಾಗಿ 2009ರಲ್ಲಿ ಡಿವೋರ್ಸ್ ಪಡೆದಿದ್ರು. 2005ರಲ್ಲಿ ತ್ಯಾಗಿ ಜೊತೆ 2ನೇ ಮದುವೆಯಾಗಿದ್ರು. ಫಿಟ್ನೆಸ್ ಫ್ರೀಕ್ ಆಗಿದ್ರು. ಶೆಫಾಲಿ ಕೆಲ ವರ್ಷಗಳಿಂದ ಮೂರ್ಛೆ ರೋಗದಿಂದ ಬಳಲುತ್ತಿದ್ದರಂತೆ.

ಇನ್ನು, ಶೆಫಾಲಿ ಮನೆಯಲ್ಲಿ ಮುಂಬೈ ಪೊಲೀಸರು, ಫೊರೆನ್ಸಿಕ್ ಲ್ಯಾಬ್ ಟೀಮ್ ಪರಿಶೀಲನೆ ನಡೆಸಿದ್ದಾರೆ. ಕಾರ್ಡಿಯಾಕ್ ಅರೆಸ್ಟ್ ಆಗಿದೆ ಅಂತಾ ಹೇಳಲಾಗ್ತಿದ್ದರೂ, ಪೊಲೀಸರು ಏನನ್ನೂ ಸ್ಪಷ್ಟಪಡಿಸಿಲ್ಲ. ಪೋಸ್ಟ್ ಮಾರ್ಟಮ್ ರಿಪೋರ್ಟ್ ಗಾಗಿ ಕಾಯ್ತಿದ್ದಾರೆ.

ಕಾರ್ಡಿಯಾಕ್ ಅರೆಸ್ಟ್ ಎಂದರೇನು..?

ಕಾರ್ಡಿಯಾಕ್ ಅರೆಸ್ಟ್ ಅಂದರೆ ಹೃದಯ ಸ್ತಂಬನ ನಿಲ್ಲುವಂತಹ ಸ್ಥಿತಿ. ಹೃದಯ ಇದ್ದಕ್ಕಿದ್ದಂತೆ ಬಡಿತವನ್ನು ನಿಲ್ಲಿಸುತ್ತದೆ. ರಕ್ತವನ್ನು ಪಂಪ್ ಮಾಡುವ ಬದಲು ನಡುಗುವಂತೆ ಮಾಡುತ್ತೆ. ಹೃದಯ ಜೋರಾಗಿ ಬಡಿದುಕೊಂಡು ತಕ್ಷಣವೇ ನಾಡಿಮಿಡಿತ ನಿಲ್ಲುತ್ತದೆ. ಮೆದುಳು, ಅಂಗಾಂಗಳಿಗೆ ರಕ್ತದ ಸಂಚಾರ ಸ್ಥಗಿತವಾಗುತ್ತದೆ. ದೇಹದಲ್ಲಿನ ವಿದ್ಯುತ್ ವ್ಯವಸ್ಥೆಯಂತಹ ಜೀವ ಚೈತನ್ಯ ವಿಫಲಗೊಳ್ಳುತ್ತದೆ. ಮಾನವನ ಉಸಿರಾಟ ಹಠಾಟ್ ನಿಲ್ಲುತ್ತದೆ. ಇದೊಂದು ಮಾರಣಾಂತಿಕ ಸ್ಥಿತಿ. ಕೆಲವೊಮ್ಮೆ ಬದುಕುಳಿದರೂ ಅಂಗಾಗ ವೈಫಲ್ಯ ಸಾಧ್ಯತೆ ಹೆಚ್ಚಾಗಿರುತ್ತದೆ.

- Advertisement -

Latest Posts

Don't Miss