ಜರ್ಮನಿಯಲ್ಲಿ ತಮ್ಮ ಅಭಿಮಾನಿಗಳನ್ನ ಮೀಟ್ ಮಾಡಲು ಬಂದ ಕಿಂಗ್ ಚಾರ್ಲ್ಸ್‌ಗೆ, ಮುಜುಗರವಾಗುವ ಘಟನೆ ನಡೆದಿದೆ. ಈ ಬಗ್ಗೆ ಓರ್ವ ವ್ಯಕ್ತಿ ಟ್ವೀಟರ್‌ನಲ್ಲಿ ವೀಡಿಯೋ ಶೇರ್ ಮಾಡಿದ್ದಾರೆ.
ಕಿಂಗ್ ಚಾರ್ಲ್ಸ್ ತಮ್ಮ ರಾಯಲ್ ಫ್ಯಾನ್ಸ್‌ನ್ನ ಮೀಟ್ ಮಾಡಲು ಹೋದಾಗ, ಓರ್ವ ವ್ಯಕ್ತಿ ಬರ್ಗರ್ ಕಿಂಗ್ ನ ಕಿರೀಟವನ್ನು ಚಾರ್ಲ್ಸ್‌ಗೆ ಹಾಕಲು ಹೋಗಿದ್ದಾನೆ. ಚಾರ್ಲ್ಸ್ ಇದನ್ನು ನಿರ್ಲಕ್ಷಿಸಿ ಮುನ್ನಡೆದಿದ್ದಾರೆ. ಈ ದೃಶ್ಯವನ್ನು ಕೆಲವರು ಸೆರೆ ಹಿಡಿದಿದ್ದಾರೆ. ಅಲ್ಲದೇ ಈ ವೀಡಿಯೋವನ್ನು ಟ್ವಿಟರ್‌ನಲ್ಲಿ ಹಾಕಿದ್ದಾರೆ. ರಾಜನಾದ ಬಳಿಕ ಚಾರ್ಲ್ಸ್ ಮೊದಲ ಬಾರಿ ವಿದೇಶ ಪ್ರಯಾಣ ಮಾಡಿದ್ದಾರಂತೆ. ಬರ್ಲಿನ್‌ಗೆ ಹೋಗಿದ್ದ ಚಾರ್ಲ್ಸ್‌ರನ್ನ ಅಲ್ಲಿನ ಪ್ರಧಾನಿ, ಫ್ರ್ಯಾಂಕ್ ವಾಲ್ಟರ್ ವೆಲ್ಕ್ಂ ಮಾಡಿದ್ದಾರೆ. ತದನಂತರ ಈ ಘಟನೆ ನಡೆದಿದೆ.
ಈ ವೀಡಿಯೋದಲ್ಲಿ ಆ ವ್ಯಕ್ತಿ, ಚಾರ್ಲ್ಸ್ ಕೈ ಕುಲುಕಿದ್ದು, ಇನ್ನೊಂದು ಕೈಯಿಂದ ಬರ್ಗರ್ ಕಿಂಗ್ ಕಿರೀಟ ಕೊಡಲು ಮುಂದಾಗಿದ್ದಾನೆ. ಅಲ್ಲದೇ, ಇದು ನಿಮಗಾಗಿ, ಬೇಕಾದ್ರೆ ತೊಗೊಳ್ಳಿ ಎಂದಿದ್ದಾರೆ. ಆದರೆ ಚಾರ್ಲ್ಸ್ ನೋ ಐ ಆ್ಯಮ್ ಆಲ್ ರೈಟ್ ಎಂದು ಮುನ್ನಡೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಸಖತ್ ವೈರಲ್ ಆಗಿದ್ದು, ಹಲವರು ಹಲವು ತರಹದ ಕಾಮೆಂಟ್ಸ್ ಮಾಡುತ್ತಿದ್ದಾರೆ.
👑!@burgerKing Charles! Al rey Carlos se le ofreció una corona de papel, en el primer compromiso oficial de Estado a Alemania hoy. En la Puerta de Brandenburgo se encontró con varios simpatizantes que llevaban coronas de 'Burger King' quienes se la ofrecieron al rey pic.twitter.com/MJsaPU0HsV
— ıllıllı Marisa Cariolo ıllıllı (@cariolisima) March 29, 2023
ಕುರ್ಚಿಯ ವಿಷಯಕ್ಕೆ ತನ್ನ ಸಹೋದ್ಯೋಗಿಯನ್ನ ಗುಂಡಿಕ್ಕಿ ಕೊಂದ ವ್ಯಕ್ತಿ..

