Thursday, December 4, 2025

Latest Posts

ವಿರಾಟ್ ನೆನೆದ  ಕ್ರಿಕೆಟ್ ಅಭಿಮಾನಿಗಳು 

- Advertisement -

ಪೋರ್ಟ್ ಆಫ್ ಸ್ಪೇನ್:  ಮಾಜಿ ನಾಯಕ ವಿರಾಟ್ ಕೊಹ್ಲಿ  ವೆಸ್ಟ್ ಇಂಡೀಸ್ ಸರಣಿ ಆಡದೆ  ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ವಿರಾಟ್ ಅನುಪಸ್ಥಿತಿ ಎಲ್ಲರನ್ನೂ ಕಾಡುತ್ತಿದೆ. ಅಭಿಮಾನಿಗಳನ್ನು ಬಿಟ್ಟಿಲ್ಲ.

ಭಾನುವಾರ ವಿಂಡೀಸ್ ವಿರುದ್ಧ ನಡೆದ ಎರಡನೆ ಏಕದಿನ ಪಂದ್ಯದ ವೇಳೆ ಕ್ರಿಕೆಟ್ ಅಭಿಮಾನಿಗಳು  ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ  ಬ್ಯಾನರ್ ಹಿಡಿದು  ಪ್ರದರ್ಶಿಸಿದರು.

ಬ್ಯಾನರ್‍ನಲ್ಲಿ  ಮಿಸ್ ಯೂ ವಿರಾಟ್ ಕೊಹ್ಲಿ ಮತ್ತು  ಒನ್ಸ್ ಎ ಕಿಂಗ್ ಆಲ್ವೆಸ್ ಎ ಕಿಂಗ್ ಎಂದು ಬರೆದಿದ್ದಾರೆ.

ಇತ್ತಿಚೆಗೆ ವಿಂಡೀಸ್ ತಂಡದ ಮುಖ್ಯ ಕೋಚ್ ಸಿಮಾನ್ಸ್ ಕೂಡ ವಿರಾಟ್ ಇಲ್ಲದ ಸರಣಿ ನಿರಾಸೆಯಿಂದ ಕೂಡಿದೆ ಎಂದು ಹೇಳಿದ್ದರು.

ಸದ್ಯ ವಿರಾಟ್ ವಿಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲಿ  ಆಡುತ್ತಿಲ್ಲಘಿ.  ಮುಂಬರುವ ಏಷ್ಯಾಕಪ್‍ನಲ್ಲಿ  ವಿರಾಟ್ ಆಡಲಿದ್ದಾರೆ ಎಂದು ತಿಳಿದು ಬಂದಿದೆ.

ವಿರಾಟ್ ಕೊಹ್ಲಿ ವಿಶ್ರಾಂತಿಯನ್ನು ತಂಡದ ಮಾಜಿ ನಾಯಕರಾದ ಕಪಿಲ್ ದೇವ್ ಮತ್ತು ಸುನಿಲ್ ಗಾವಸ್ಕರ್ ಪ್ರಶ್ನಿಸಿದ್ದರು.  ವಿರಾಟ್ ಕೊಹ್ಲಿಗೆ ವಿಶ್ರಾಂತಿ ಕೊಟ್ಟಿದ್ದು ತಪ್ಪು ಸಂದೇಶ ಹೋಗಿದೆ ಎಂದು ಮಾಜಿ ಆಟಗಾರ ದಿಲೀಪ್ ವೆಂಗ್‍ಸರ್ಕಾರ್ ಹೇಳಿದ್ದರು.

- Advertisement -

Latest Posts

Don't Miss