- Advertisement -
ಚಿಕ್ಕಬಳ್ಳಾಪುರ: ಚರಕಮಟ್ಟೇನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಹಾಕಿದ ವಿದ್ಯುತ್ ಬೇಲಿಗೆ ರೈತರೊಬ್ಬರು ಬಲಿಯಾಗಿದ್ದಾರೆ. ಆ ಜಮೀನಿಗೆ ಬೇಲಿ ಹಾಕಿದ ಮಾಲೀಕನನ್ನು ಸ್ಥಳೀಯರು ಹೊಡೆದು ಸಾಯಿಸಿದ್ದಾರೆ.
ರೈತನಾದ ವಸಂತರಾವ್ ವಿದ್ಯುತ್ ತಂತಿಗೆ ಬಲಿಯಾದ ಸುದ್ದಿ ತಿಳಿದು ಗ್ರಾಮಸ್ಥರು ಆ ಜಮೀನಿನ ಮಾಲೀಕ ಅಶ್ವತ್ಥ ರಾವ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅಶ್ವತ್ಥ ರಾವ್ ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಮೃತಪಟ್ಟ ಅಶ್ವತ್ಥ ರಾವ್ ತಮ್ಮ ಟೊಮ್ಯಾಟೊ ತೋಟಕ್ಕೆ ಅಕ್ರಮವಾಗಿ ವಿದ್ಯುತ್ ತಂತಿ ಬೇಲಿ ಅಳವಡಿಸಿದ್ದರು ಎನ್ನಲಾಗಿದೆ. ಅಶ್ವತ್ಥ ರಾವ್ ಚಿಕ್ಕಬಳ್ಳಾಫುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಚಿಕ್ಕಹನುಮೇನಹಳ್ಳಿ ನಿವಾಸಿ. ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
- Advertisement -