Mysuru: ಹುಣಸೂರು ತಾಲೂಕಿನ ಕಡೆಮಾನುಗನಹಳ್ಳಿ ಗ್ರಾಮದಲ್ಲಿ ಕೃಷ್ಣೇಗೌಡರ ಮಗ ವೆಂಕಟೇಶ್ ಕೆ ಅವರಿಗೆ ಸೇರಿದ 2 ಎಕರೆ ಜಮೀನಿನಲ್ಲಿ 1.5 ಎಕರೆ ಅಡಿಕೆ ಮರ ಮತ್ತು ಅರ್ಧ ಎಕರೆ ಶುಂಠಿ ಬೆಳೆಗಳನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಅಡಿಕೆ ಮರಗಳು ಕಡಿದು ಮರಗಳ ಮಾರಣಹೋಮ ನಡೆಸಿದ್ದಾರೆ.
ಜಮೀನಿನ ಮಾಲೀಕ ಬುಧವಾರ ಬೆಳಿಗ್ಗೆ ಜಮೀನಿನ ಕಡೆ ಹೋದಾಗ, ಈ ಘಟನೆ ನಡೆದಿತ್ತು. ಧರೆಗುರುಳಿದ ಮರಗಳನ್ನು ನೋಡಿ ಕಂಗಾಲಾದ ರೈತ ವೆಂಕಟೇಶ್ ಕೆ ರವರು ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ತೋಟವನ್ನು ಗಮನಿಸಿದ್ದ ಗ್ರಾಮಸ್ಥರು ಹಾಗೂ ಗ್ರಾಮಪಂಚಾಯಿತಿ ಸದ್ಯಸರು, ಕರ್ನಾಟಕ ಟಿವಿ ವಾಹಿನಿಗೆ ಕರೆಮಾಡಿ ತಿಳಿಸಿದ್ರು. ಕರ್ನಾಟಕ ಟಿವಿ ಸ್ಥಳಕ್ಕೆ ಭೇಟಿ ಕೊಟ್ಟಾಗ ಜಮೀನಿನ ಮಾಲೀಕ ಹಾಗೂ ಗ್ರಾಮಸ್ಥರು ಅಳಲನ್ನು ತೋಡಿಕೊಂಡರು.
ನಾವು ಜಮೀನು ನಂಬಿ ಬದುಕುವವರು ನಮಗೆ ಜಮೀನು ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ಅಡಿಕೆ ಮರವನ್ನು ನಾಶಮಾಡಿದ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಆಗಲೇಬೇಕು. ಈ 2 ದಿನಗಳ ಇಂದೆ ಶುಂಠಿ ಬೇಳೆ ನಾಶ ಮಾಡಿದ್ರು .ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಅನುಮಾನ ಪಟ್ಟ ವ್ಯಕಿಗಳ ಮೇಲೆ ದೂರು ದಾಖಲಿಸಿದ್ವಿ. ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ದೂರು ದಾಖಲಿಸಿದ್ದಕ್ಕೆ ಯಾವುದೇ ನಕಲು ಪ್ರತಿಗಳನ್ನು ಕೊಡಲಿಲ್ಲ. ಹೀಗಾದರೆ ರೈತರು ಬದುಕುವುದಾರು ಹೇಗೆ ಎಂದು ಬೇಸರ ವ್ಯಕ್ತಪಡಿಸಿದ್ರು.
ರವಿಕುಮಾರ್ ಹುಣಸೂರು, ಕರ್ನಾಟಕ ಟಿವಿ, ಹುಣಸೂರು
DKS: ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಸುರೇಶ್ ಕುಮಾರ್ ಯಾಕೆ ಪತ್ರ ಬರೆಯಲಿಲ್ಲ ?
Rahul Gandhi : ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಅನರ್ಹವಾದಷ್ಟೇ ಬೇಗ ಆದೇಶ ತೆರವಾಗಬೇಕು : ಡಿಸಿಎಂ ಡಿ.ಕೆ.ಶಿ
DK Shivakumar: ಕುಮಾರಕೃಪಾ ಅತಿಥಿಗೃಹದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ: