Wednesday, April 16, 2025

Latest Posts

ಕೋಲಾರದಲ್ಲಿ ಬಿಜೆಪಿ ಟಿಕೇಟ್ ಆಕಾಂಕ್ಷಿಗಳ ಮಧ್ಯೆ ಮುಂದುವರೆದ ನಾನಾ- ನೀನಾ ಫೈಟ್..

- Advertisement -

ಕೋಲಾರ: ಕೋಲಾರ ಜಿಲ್ಲೆಯ ಮಾಲೂರು ಬಿಜೆಪಿ ಯಲ್ಲಿ ಟಿಕೆಟ್ ಆಕಾಂಕ್ಷಿಗಳ ಮಧ್ಯೆ ನಾನಾ-ನೀನಾ ಫೈಟ್ ಮುಂದುವರೆದಿದೆ. ಮಾಜಿ ಶಾಸಕ ಮಂಜುನಾಥ್ ಗೌಡ ಹಾಗು ಹೂಡಿ ವಿಜಯ್ ಕುಮಾರ್ ಮಧ್ಯೆ ಟಿಕೆಟ್ ಫೈಟ್ ಮುಂದುವರೆದಿದೆ. ಇತ್ತೀಚೆಗೆ ನಡೆದ ಕೆಂಪೇಗೌಡರ ರಥಯಾತ್ರೆ ವೇಳೆ ಬಿಜೆಪಿ ಮುಖಂಡ ಗೋಪಾಲಗೌಡ ಮೇಲೆ ಮಂಜುನಾಥ್ ಗೌಡರು ಹಲ್ಲೆ ನಡೆಸಿದ್ದಾರೆಂದು, ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ ನಿಂದನೆ ಹಾಗು ಬೆದರಿಕೆ ಹಾಕ್ತಿದ್ದಾರೆಂದು ಕೋಲಾರ ಎಸ್ಪಿ ಅವರಿಗೆ ಹೂಡಿ ವಿಜಯ್ ಕುಮಾರ್ ಮತ್ತು ಬೆಂಬಲಿಗರು ದೂರು ಸಲ್ಲಿಸಿದ್ದಾರೆ.

2ನೇ ಮದುವೆಲಿ ತಾಳಿ ಕಟ್ಟಿ ಸಿಕ್ಕಿಬಿದ್ದು ಪೊಲೀಸ್ ಅತಿಥಿಯಾದ ಯೋಧ..

ದೂರು ಸಲ್ಲಿಕೆ ನಂತರ ಮಾತನಾಡಿದ ಹೂಡಿ ವಿಜಯ್ ಕುಮಾರ್, ಮಾಲೂರು ಮಾಜಿ ಶಾಸಕ ಮಂಜುನಾಥ್ ಗೌಡ ವಿರುದ್ದ, ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ಅವರು ವಾಗ್ದಾಳಿ ಮುಂದುವರೆಸಿದ್ದಾರೆ. ಟೇಕಲ್ ಗ್ರಾಮದಲ್ಲಿ ಕೆಂಪೇಗೌಡ ರಥಯಾತ್ರೆ ವೇಳೆ ಪಕ್ಷದ ಮುಖಂಡರ ಮೇಲೆ ಮಂಜುನಾಥ್ ಗೌಡರು ಹಲ್ಲೆ ನಡೆಸಿದ್ದು, ವೇದಿಕೆ ಕಾರ್ಯಕ್ರಮದಲ್ಲಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಮಾಲೂರು ಪಟ್ಟಣದಲ್ಲಿ ಕೆಂಪೇಗೌಡ ರಥಯಾತ್ರೆ ವೇಳೆ ಹಲ್ಲೆಗೆ ಸಂಚು ಮಾಡಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಹೂಡಿ ವಿಜಯ್ ಕುಮಾರ್ ಹಾಗು ಬೆಂಬಲಿಗರ ವಿರುದ್ದ ಅಶ್ಲೀಲವಾಗಿ ಪದಬಳಕೆ ಮಾಡಿ ನಿಂದಿಸಿ ಬೆದರಿಕೆ ಹಾಕಿರುವ ಬಗ್ಗೆ, ಕೋಲಾರ ಎಸ್ಪಿಯವರಿಗೆ ದೂರು ಸಲ್ಲಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿದರು.

ರಥಯಾತ್ರೆ ವೇಳೆ ನಡೆದ ಗಲಾಟೆ ಸಂಬಂದ ಮಾಸ್ತಿ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ಹೆಸರಿನ ಖಾತೆಗಳ ಮೂಲಕ ನಿಂದಿಸುವ ಘಟನೆಗಳು ನಡೆಯುತ್ತಿರುವ ಕಾರಣ, ಕ್ರಮಕ್ಕೆ ಕೈಗೊಳ್ಳುವಂತೆ ಮುಖಂಡರು ಎಸ್ಪಿಯವರಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಮಾಲೂರು ಪಟ್ಟಣದಲ್ಲಿ ನಡೆದ ಕೆಂಪೇಗೌಡ ರಥಯಾತ್ರೆ ಕಾರ್ಯಕ್ರಮ ಮೆರವಣಿಗೆ ವೇಳೆ ಮಂಜುನಾಥ್ ಗೌಡ ಬೆಂಬಲಿಗರು, ಮಾರಕಾಸ್ತ್ರಳನ್ನ ಹೊಂದಿದ್ದು ಈ ಬಗ್ಗೆ ತನಿಖೆ ನಡೆಸುವಂತೆ, ಮಾಜಿ ಶಾಸಕ ಮಂಜುನಾಥ್ ಗೌಡ ಸೇರಿದಂತೆ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಚಿನ್ನಸ್ವಾಮಿ ಗೌಡ, ಕಿರಣ್ ರಾವ್, ದ್ಯಾವಿರಪ್ಪ ಸೇರಿದಂತೆ 11 ಮಂದಿ ವಿರುದ್ದ ದೂರು ನೀಡಲಾಗಿದೆ ಎಂದರು.

‘ತಿನ್ನಲ್ಲ, ತಿನ್ನೋಕ್ಕೂ ಬಿಡಲ್ಲ ಎಂದಿದ್ರಿ, ಹಾಗಾದ್ರೆ ಈಗ ನಿಮ್ಮವರೇನು ತಿನ್ನುತ್ತಿದ್ದಾರೆ’..?

ಪಕ್ಷದ ಕಾರ್ಯಕರ್ತರ ಬೆಂಬಲಕ್ಕಾಗಿಯೇ ನಾನು ಅವರ ಜೊತೆಯಾಗಿರೊದಾಗಿ ಹೇಳಿದ್ದೇನೆ. ಗ್ರಾಮಗಳಗೆ ಹೋದಲ್ಲಿ ಕಲ್ಲು ಹೊಡೆಯುತ್ತಾರೆ ಎಂದು ಮಂಜುನಾಥ್ ಗೌಡರು ಬೆದರಿಕೆ ಹಾಕಿದ್ದರು, ಹಾಗಾಗಿ ದೂರು ಸಲ್ಲಿಸಿ ಕಾನೂನು ಕ್ರಮವಾಗಲಿ ಎಂದು ಮಂಜುನಾಥ್ ಗೌಡ ವಿರುದ್ದ ಕಿಡಿಕಾರಿದ್ದಾರೆ.

- Advertisement -

Latest Posts

Don't Miss