Chikkodi News: ಚಿಕ್ಕೋಡಿ: ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ರಾಜ್ಯ ಸರ್ಕಾರ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಿಕೊಟ್ಟಿದ್ದು, ಅದರಿಂದ ಹೆಣ್ಣು ಮಕ್ಕಉ ಸ್ವಾವಲಂಬಿಯಾಗಲಿ ಎಂದು ಹೇಳಿತ್ತು. ಆದರೆ ಇಲ್ಲಿ ಹೆಣ್ಣು ಮಕ್ಕಳು ಸೀಟ್‌ಗಾಗಿ ಬಡಿದಾಡಿಕೊಂಡಿದ್ದು, ವೀಡಿಯೋ ವೈರಲ್ ಆಗಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ ಡ್ಯಾಂನಿಂದ ಹೊರಟ ಬಸ್‌ನಲ್ಲಿ ಹೆಣ್ಣು ಮಕ್ಕಳು ಪ್ರಯಾಣಿಸುತ್ತಿದ್ದರು. ಈ ವೇಳೆ ಸೀಟ್‌ಗಾಗಿ ಇಬ್ಬರು ಹೆಂಗಸರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಚಪ್ಪಲಿಯಿಂದ ಹೊಡೆದಾಡಿಕೊಂಡಿದ್ದಾರೆ. ಇನ್ನು ಇಬ್ಬರು ಹೆಂಗಸರ ಮಧ್ಯೆ ಜಗಳ ಬಿಡಿಸಲು ಬಂದಿದ್ದ ಬಾಲಕಿಯ ಮೇಲೂ ಓರ್ವ ಹೆಂಗಸು ಕೈ ಮಾಡಿದ್ದಾಳೆ. ಇನ್ನು ಬಸ್‌ನಲ್ಲಿದ್ದ ಇತರ ಪ್ರಯಾಣಿಕರು, ಇಬ್ಬರನ್ನೂ ದೂರ ಮಾಡಿ, ಜಗಳವನ್ನು ತಿಳಿಗೊಳಿಸಿದ್ದಾರೆ.
ಒಟ್ಟಾರೆಯಾಗಿ, ಹೆಣ್ಣು ಮಕ್ಕಳು ಸ್ವಾವಲಂಬಿಯಾಗಬೇಕು. ಅವರಿಗೆ ಕೆಲಸಕ್ಕೆ ಹೋಗಲು, ಇತರ ಊರುಗಳಿಗೆ ಹೋಗಲು ಅನುಕೂಲವಾಗಬೇಕು ಎಂದು ರಾಜ್ಯ ಸರ್ಕಾರ ನೀಡಿರುವ ಈ ಯೋಜನೆಯನ್ನು, ಹೆಂಗಸರು ಈ ರೀತಿ ಬಳಸಿಕೊಳ್ಳುತ್ತಿರುವುದು ವಿಪರ್ಯಾಸ.
ಧಾರವಾಡದಲ್ಲಿ ಬಿಜೆಪಿ ಭಿನ್ನಮತ, ಆಹ್ವಾನವಿದ್ದರೂ ಕಾರ್ಯಕ್ರಮಕ್ಕೆ ಗೈರಾದ ನಾಯಕರು
ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ಮಗ: ಹೆಚ್.ಡಿ.ಕುಮಾರಸ್ವಾಮಿ
ನಮ್ಮ ಹುಡುಗರ ಆಟವು ಚಂದ, ಗೆಲವಿನ ಹಠವೂ ಬಲು ಚಂದ: ಕ್ರಿಕೇಟ್ ತಂಡಕ್ಕೆ ಅಭಿನಂದಿಸಿದ ಡಿಕೆಶಿ