Sunday, September 8, 2024

Latest Posts

ಬಾಕಿ ಉಳಿದಿರುವ ಜೇಮ್ಸ್ ಚಿತ್ರದ ಫೈಟಿಂಗ್, ಆಧುನಿಕ ತಂತ್ರಜ್ಞಾನ ಬಳಸಿ “ಪುನೀತ್ ಅವರನ್ನು” ತೆರೆಮೇಲೆ ತರುವ ಪ್ರಯತ್ನ..!

- Advertisement -

www.karnatakatv.net:ಜೇಮ್ಸ್ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಭರ್ಜರಿ ಚೇತನ್ ಕಾಂಬಿನೇಷನ್‌ನ ಸಿನಿಮಾ. ಈ ಚಿತ್ರದ ಶೂಟಿಂಗ್ ಪೂರ್ಣವಾಗಿದ್ದು, ಕೇವಲ ಡಬ್ಬಿಂಗ್ ಕೆಲಸಗಳು ಮಾತ್ರ ಬಾಕಿ ಉಳಿದಿತ್ತು ಎಂಬ ವಿಷಯವನ್ನು ಚಿತ್ರತಂಡ ಹಂಚಿಕೊoಡಿತ್ತು.

ಪುನೀತ್ ಅವರ ಅಕಾಲಿಕ ಮರಣದಿಂದ ಜೇಮ್ಸ್ ಚಿತ್ರದಲ್ಲಿನ ಅಪ್ಪು ಅವರ ಪಾತ್ರದ ಡಬ್ಬಿಂಗ್ ಪೂರ್ಣ ಗೊಂಡಿರಲಿಲ್ಲ. ಈ ಬಗ್ಗೆ ನಿರ್ದೇಶಕ ಚೇತನ್ ಅವರೇ ಮಾಹಿತಿಯನ್ನು ಹೊರಹಾಕಿದ್ದರು. ಅದಾದ ನಂತರ ಅಪ್ಪು ಪಾತ್ರಕ್ಕೆ ಶಿವರಾಜ್ ಕುಮಾರ್ ಧ್ವನಿ ನೀಡುತ್ತಾರೆ ಎನ್ನುವ ವಿಷಯಗಳು ಹರಿದಾಡಿತ್ತು ಮತ್ತು ಸ್ವತಃ ಶಿವರಾಜ್ ಕುಮಾರ್ ಅವರೇ ಈ ಬಗ್ಗೆ ಮಾತನಾಡಿ ಜೇಮ್ಸ್ ಸಿನಿಮಾದಲ್ಲಿನ ಅಪ್ಪು ಪಾತ್ರಕ್ಕೆ ನಾನು ಧ್ವನಿ ನೀಡಬಲ್ಲೆ ಆದರೆ, ಅಪ್ಪು ಧ್ವನಿಗು ನನ್ನ ಧ್ವನಿಗು ಅಷ್ಟಾಗಿ ಹೊಂದಾಣಿಕೆ ಯಾಗುವುದಿಲ್ಲ ಎನ್ನುವ ಹೇಳಿಕೆಯನ್ನು ನೀಡಿದ್ದರು.

ಈ ಎಲ್ಲಾ ಬೆಳವಣಿಗೆಯ ನಂತರ ಈಗ ಹೊಸ ವಿಷಯವೊಂದು ಹೊರಬಿದ್ದಿದ್ದು. ಜೇಮ್ಸ್ ಚಿತ್ರದಲ್ಲಿ ಇನ್ನೂ ಒಂದು ಸಾಹಸ ದೃಶ್ಯ ಚಿತ್ರೀಕರಣ ಮಾಡಬೇಕಿತ್ತು ಎನ್ನುವುದು. ಇದನ್ನು ಚಿತ್ರೀಕರಿಸಲು ಇಂದು ನಮ್ಮೊಂದಿಗೆ ಪುನೀತ್ ಅವರೇ ಇಲ್ಲ ಆದರೆ ಆಧುನಿಕ ತಂತ್ರಜ್ಞಾನ ಬಳಸಿ ಪುನೀತ್ ಅವರನ್ನು ತೆರೆಮೇಲೆ ತರಲು ಚಿತ್ರತಂಡ ಯೋಚನೆ ಮಾಡುತ್ತಿದ್ದು, ಅದಕ್ಕೆ ಬೇಕಾದ ಎಲ್ಲಾ ರೀತಿಯ ತಯಾರಿಗಳನ್ನು ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ. ಗ್ರೀನ್ ಮ್ಯಾಟ್, VFX ಸುಧಾರಿತ ತಂತ್ರಜ್ಞಾನ ಇದೆಲ್ಲದರ ಜೊತೆ ಹೊರ ರಾಜ್ಯದ ತಂತ್ರಜ್ಞಾರನ್ನು ಕರೆತಂದು ಅಪ್ಪುರನ್ನು ತೆರೆಮೇಲೆ ತಂದು ಸಾಹಸ ದೃಶ್ಯ ಚಿತ್ರಿಕರಿಸಿ ಸಿನಿಮಾದಲ್ಲಿ ಸೇರಿಸಲು ಮುಂದಾಗಿದ್ದಾರೆ ಚೇತನ್, ಮತ್ತು ಇವರಿಗೆ ಬೆಂಬಲವಾಗಿ ನಿರ್ಮಾಪಕ ಕಿಶೋರ್ ಸಹಕರಿಸುತ್ತಿದ್ದಾರೆ.

ಈ ಹಿಂದೆ ದಿಗಂತ್ ಮತ್ತು ರಮ್ಯ ನಟಿಸಿದಂತಹ ನಾಗರಹಾವು ಸಿನಿಮಾದಲ್ಲಿ ತಂತ್ರಜ್ಞಾನ ಬಳಸಿ ಸಾಹಸ ಸಿಂಹ ವಿಷ್ಣುವರ್ಧನ್ ಅವರನ್ನು ತೆರೆಮೇಲೆ ಬರುವಂತೆ ಮಾಡಿದ್ದರು ನಿರ್ದೇಶಕ ಕೊಡಿ ರಾಮಕೃಷ್ಣ. ಆದಲ್ಲದೇ ಅಲವಾರು ಚಿತ್ರಗಳಲ್ಲಿ ಈ ರೀತಿಯಾ ತಂತ್ರಜ್ಞಾನ ಬಳಸಲಾಗಿದೆ, ಆಗಾಗಿ ಬಾಕಿ ಉಳಿದಿರುವ ಜೇಮ್ಸ್ ಸಿನಿಮಾದ ಫೈಟ್ ದೃಶ್ಯವನ್ನು ಆಧುನಿಕ ತಂತ್ರಜ್ಞಾನ ಬಳಸಿ ಪೂರ್ಣ ಗೊಳಿಸಲಿದ್ದಾರೆ. ಇನ್ನೂ ಎಲ್ಲಾ ಅಂದು ಕೊಂಡತ್ತೇ ಆದರೇ ಪುನೀತ್ ಅವರ ಹುಟ್ಟಿದ ದಿನ 17 ಮಾರ್ಚ 2022ಕ್ಕೆ ಸಿನಿಮಾ ರಿಲೀಸ್ ಮಾಡುವ ನಿರೀಕ್ಷೇಗಳಿದೆ.

- Advertisement -

Latest Posts

Don't Miss