Financial Education: ಮ್ಯೂಚ್ಯುವಲ್ ಫಂಡ್ ಅಥವಾ ಶೇರ್ ಮಾರ್ಕೇಟ್‌ನಲ್ಲಿ ದುಡ್ಡು ಹಾಕಲು ಇಚ್ಛಿಸುವವರು ಮೊದಲು ಮಾಡುವ ಯೋಚನೆ ಅಂದ್ರೆ, ನಾನು ಇವತ್ತು ಇಂತಿಷ್ಟು ದಡ್ಡು ಹಾಕಿದ್ರೆ, ಭವಿಷ್ಯದಲ್ಲಿ ಇಷ್ಟು ವರ್ಷದ ಬಳಿಕ ನನಗೆಷ್ಟು ಲಾಭ ಬರಬಹುದು ಎಂಬ ಯೋಚನೆ. ಆದರೆ ನಿಮಗೆ ಹಣದ ಹೂಡಿಕೆ ಬಗ್ಗೆ ಸಲಹೆ ಕೊಡುವವರು ಎಂದಿಗೂ ನಿಮಗೆಷ್ಟು ಲಾಭ ಬರಬಹುದು ಅಂತಾ ಹೇಳುವುದಿಲ್ಲ.
ಏಕೆಂದರೆ ಕಾನೂನಿನ ಪ್ರಕಾರ ಇದು ತಪ್ಪು. ಮಾರುಕಟ್ಟೆಯಲ್ಲಿ ಏರಿಳಿಗಳು ಇರೋದು ಸಹಜ. ಕೆಲವು ವರ್ಷ ಶೇರ್ ಮಾರ್ಕೇಟ್ ಚೆನ್ನಾಗಿ ಓಡುತ್ತಿದ್ದರೆ, ಇನ್ನು ಕೆಲ ಸಮಯ ಬಿದ್ದಿರುತ್ತದೆ. ಲಾಸ್- ಪ್ರಾಫಿಟ್ ಎರಡನ್ನೂ ಎದುರಿಸಲು ನಾವು ರೆಡಿಯಾಗಿರಬೇಕು. ಶೇರ್ ಮಾರ್ಕೇಟ್ ತರಬೇತುದಾರರಾದ ಡಾ.ಭರತ್ ಚಂದ್ರ ಅವರು ಈ ಬಗ್ಗೆ ಕರ್ನಾಟಕ ಟಿವಿ ಮನಿ ಚಾನೆಲ್‌ನಲ್ಲಿ ಮಾತನಾಡಿದ್ದು, ಹಣ ಹೂಡಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ.
1 ಕೋಟಿ ಗಳಿಸಬೇಕು ಎಂದರೆ, ನೀವು ಯಾವ ವಯಸ್ಸಿನಿಂದ ಎಷ್ಟು ಇನ್ವೆಸ್ಟ್ ಮಾಡಬೇಕು ಎಂಬ ಬಗ್ಗೆ ವಿಸ್ತ್ರತವಾಗಿ ವಿವರಣೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನೀವು ಈ ವೀಡಿಯೋವನ್ನು ನೋಡಬಹುದು.