Political News: ಉತ್ತರಪ್ರದೇಶದ ಅಲಹಾಬಾದ್‌ನ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ ನಡೆಯುತ್ತಿದ್ದು, ಮೌನಿ ಅಮಾವಾಸ್ಯೆಯ ದಿನ ಕಾಾಲ್ತುಳಿತ ಸಂಭವಿಸಿ, ಹಲವರು ಮೃತಪಟ್ಟಿದ್ದಾರೆ. ಇಷ್ಟು ದಿನ ಮಹಾಕುಂಭ ಮೇಳದ ಬಗ್ಗೆ ಒಳ್ಳೆಯ ಸುದ್ದಿಗಳೇ ಹರಡುತ್ತಿದ್ದು, ಕಾಲ್ತುಳಿತದ ಬಳಿಕ ಹಲವು ಆರೋಪಗಳು ಕೇಳಿ ಬರುತ್ತಿದೆ. ಅದರಲ್ಲೂ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸೇರಿ, ಮಹಾ ಕುಂಭ ಮೇಳದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ನಿನ್ನೆ ಸಮಾಜವಾದಿ ಪಕ್ಷದ ಸಂಸದೆ ಜಯಾಬಚ್ಚನ್, ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತರಾದವರ ಮೃತ ದೇಹವನ್ನು ಗಂಗಾನದಿಯಲ್ಲಿ ಎಸೆಯಲಾಗಿದೆ ಎಂದು ಆರೋಪಿಸಿದ್ದರು. ಇಂದು ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್ ಕೂಡ, ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕುಂಭ ಮೇಳದಲ್ಲಿ ಬೆಳಿಗ್ಗೆ 1 ಗಂಟೆ ಸುಮಾರಿಗೆ ಕಾಲ್ತುಳಿತ ಸಂಭವಿಸಿದೆ. ಆಗ ಬಂದಿದ್ದ ಆ್ಯಂಬುಲೆನ್ಸ್‌ಗಳು, ಘಟನಾ ಸ್ಥಳದಿಂದ ಖಾಲಿಯಾಗಿದ್ದು 11 ಗಂಟೆ ಸುಮಾರಿಗೆ. ಅಂದ್ರೆ ಎಷ್ಟು ಜನ ಸಾವನ್ನಪ್ಪಿದರಬೇಕು ಎಂದು ನೀವೇ ಅಂದಾಜು ಮಾಡಿ. ಉತ್ತರಪ್ರದೇಶ ಸರ್ಕಾರ ಸರಿಯಾದ ಸಾವಿನ ಲೆಕ್ಕ ಕೊಡಲಿಲ್ಲ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಇನ್ನು ಈ ಆರೋಪಕ್ಕೆ ಉತ್ತರಿಸಿರುವ ಯೋಗಿ ಆದಿತ್ಯನಾಥ್, ಮಹಾಕುಂಭದ ಬಗ್ಗೆ ಸಮಾಜವಾದಿ ಪಕ್ಷಗಳು ಸುಳ್ಳು ಸುದ್ದಿ ಹರಡುತ್ತಿದೆ. ಸಮಾಜವಾದಿ ಪಾರ್ಟಿ ಜೊತೆ ಕಾಂಗ್ರೆಸ್ ಸೇರಿ ಬಾಯಿಗೆ ಬಂದಂತೆ ಆರೋಪ ಮಾಡುತ್ತಿದ್ದಾರೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.