ಬೆಂಗಳೂರು : ನಿರ್ಮಾಣ ಹಂತದಲ್ಲಿ ಇದ್ದಂತಹ ಮಾಲ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. 5 ಎಕರೆ ವಿಸ್ತೀರ್ಣ ಇರುವಂತಹ ಪ್ರೆಸ್ಟೀಜ್ ಫಾಲ್ ಕಾನ್ ಸಿಟಿ ಮಾಲ್ (Prestige Fall Con City Mall)ನಿರ್ಮಾಣ ಹಂತದಲ್ಲಿದ್ದು, ಇದು 12 ಅಂತಸ್ತಿನ ಮಾಲ್ ಇದಾಗಿದ್ದು, ಮಾರ್ಚ್ ನಲ್ಲಿ ಪ್ರಾರಂಭಿಸಲು ಸಿದ್ಧತೆ ನಡೆಯುತ್ತಿತ್ತು. ಕೋಣನಕುಂಟೆ (KONANAKUNTE)ಕ್ರಾಸ್ ಬಳಿಯಿರುವ ಈ ಮಾಲ್ ನಲ್ಲಿ ಒಂದು ಸ್ಟೋರು ಮಾಡಿದ್ದು ಅದರಲ್ಲಿ ಥರ್ಮಾಕೋಲ್ ಇಡಲಾಗಿತ್ತು. ಇದಕ್ಕೆ ಶಾರ್ಟ್ ಸರ್ಕ್ಯೂಟ್ (Short circuit) ಆಗಿ ಬೆಂಕಿ ಹೊತ್ತುಕೊಂಡಿದೆ. ನಂತರ ಅಗ್ನಿಶಾಮಕ ದಳದ ಕಂಟ್ರೋಲ್ ರೂಮಿಗೆ ಫೋನ್ ಮಾಡಲಾಗಿದ್ದು,ತಕ್ಷಣ 3 ಅಗ್ನಿಶಾಮಕ ದಳ ಹಾಗೂ ಸಿಬ್ಬಂದಿಗಳು ಬಂದು ಬೆಂಕಿಯನ್ನು ಹಾರಿಸಿದ್ದಾರೆ. ಕೋಣನಕುಂಟೆ ರಸ್ತೆಯು ಹೊಗೆಯಿಂದಾಗಿ ತುಂಬಿಹೋಗಿತ್ತು. ಇದರಿಂದ ಕೆಲಕಾಲ ವಾಹನ ಸವಾರರಿಗೆ ಸಮಸ್ಯೆ ಉಂಟಾಗಿತ್ತು. ಘಟನಾ ಸ್ಥಳಕ್ಕೆ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಭೇಟಿ ನೀಡಿ. ಪರಿಶೀಲನೆ ನಡೆಸಿದ್ದಾರೆ.
ನಿರ್ಮಾಣ ಹಂತದಲ್ಲಿದ್ದ ಮಾಲ್ ನಲ್ಲಿ ಬೆಂಕಿ ಅವಘಡ..!
- Advertisement -
- Advertisement -