National News: ಹೋಳಿ ಹಬ್ಬದ ಪ್ರಯುಕ್ತ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಐವರು ಅರ್ಚಕರು ಸೇರಿ 13 ಮಂದಿಗೆ ಸುಟ್ಟ ಗಾಯಗಳಾಗಿದೆ. ಗಾಯಾಳುಗಳಿಗೆ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪ್ರತಿದಿನ ನಡೆಯುಂತೆ ಗರ್ಭಗುಡಿಯಲ್ಲಿ ಭಸ್ಮಾರತಿ ನಡೆಸುತ್ತಿದ್ದಾಗ, ಈ ಅವಘಡ ಸಂಭವಿಸಿದೆ. ಭಸ್ಮಾರತಿ ವೇಳೆ ಗುಲಾಲ್ ಬಳಸಿದ್ದು, ದೇವಸ್ಥಾನದಲ್ಲಿ ಧೂಳಾಗಬಾರದು ಎಂದು ಗರ್ಭ ಗುಡಿಯಲ್ಲಿ ಕವರ್ ಹಾಕಲಾಗಿತ್ತು. ಗುಲಾಲ್ ಬಳಸಿದ ವೇಳೆ ಬೆಂಕಿ ಹತ್ತಿಕೊಂಡು, ಬೆಂಕಿ ಕವರ್‌ಗೆ ತಾಕಿ, ಐವರು ಅರ್ಚಕರು ಮತ್ತು ಕೆಲವರು ಭಕ್ತರಿಗೆ ಬೆಂಕಿ ತಗುಲಿ ಗಾಯವಾಗಿದೆ.
ಇದೇ ವೇಳೆ ಅಲ್ಲಿನ ಸಿಎಂ ಮೋಹನ್ ಯಾದವ್ ಮತ್ತು ಅವರ ಪುತ್ರ ಕೂಡ ಭಸ್ಮಾರತಿಯಲ್ಲಿ ಭಾಗವಹಿಸಿದ್ದು, ಇಬ್ಬರು ಬೆಂಕಿ ಅವಘಡದಿಂದ ಪಾರಾಗಿ, ಸುರಕ್ಷಿತವಾಗಿದ್ದಾರೆ. ಇನ್ನು ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದರು.
ಅಚ್ಛೇ ದಿನ್ ತರುವ ಭರವಸೆಯನ್ನು ಹುಸಿಗೊಳಿಸಿದ ಮೋದಿಯವರನ್ನು ಜನರು ಯಾಕೆ ನಂಬುತ್ತಾರೆ?: ಸಿಎಂ
ಬೆಳಗಾವಿಯಲ್ಲಿ ಯಾವುದೇ ವಿರುದ್ಧ ವಾತಾವರಣ ಇದ್ದರೂ ಅದನ್ನು ಶಮನ ಮಾಡುವೆ: ಜಗದೀಶ್ ಶೆಟ್ಟರ್
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸಭೆ