Sunday, September 8, 2024

Latest Posts

ರಾಜಸ್ಥಾನದಲ್ಲಿ Omicron virus ಗೆ ಮೊದಲ ಬಲಿ

- Advertisement -

ನವದೆಹಲಿ: ದೇಶದಲ್ಲಿ ಕೊರೋನಾ ಜೊತೆಗೆ ಓಮಿಕ್ರಾನ್ ಪ್ರಕರಣಗಳ ( Omicron variant ) ಆರ್ಭಟ ಕೂಡ ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ದೇಶದಲ್ಲಿ ಒಮಿಕ್ರಾನ್ ವೈರಸ್(omicron virus) ಗೆ ಮೊದಲ ಬಲಿ ರಾಜಸ್ಥಾನದಲ್ಲಿ ಆಗಿದೆ.

ಪಶ್ಚಿಮ ರಾಜ್ಯ ರಾಜಸ್ಥಾನದಲ್ಲಿ ವೇಗವಾಗಿ ಹರಡುತ್ತಿರುವ ಒಮೈಕ್ರಾನ್ ರೂಪಾಂತರಕ್ಕೆ ಸಂಬಂಧಿಸಿದ ಮೊದಲ ಕೋವಿಡ್-19 ಸಾವಿನ ಬಗ್ಗೆ ಭಾರತ ಬುಧವಾರ ವರದಿ ಮಾಡಿದೆ ಎಂದು ಫೆಡರಲ್ ಆರೋಗ್ಯ ಸಚಿವಾಲಯದ ( federal health ministry ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತದಲ್ಲಿ (India reports) ಕೋವಿಡ್ ಪ್ರಕರಣಗಳು (COVID cases) 24 ಗಂಟೆಗಳಲ್ಲಿ ಶೇ.55% ಜಿಗಿತ ಕಂಡಿದೆ. ಅಲ್ಲದೇ ಸಾವಿನ ಸಂಖ್ಯೆ 500ರ ಗಡಿಯನ್ನು ದಾಟಿದೆ. ಈ ಮೂಲಕ ದೇಶಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯನ್ನು ಕಂಡಿದೆ.

ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಗಳಲ್ಲಿ 58,097 ಜನರಿಗೆ ಕೋವಿಡ್ ( Covid19 Case ) ಹೊಸದಾಗಿ ದೃಢಪಟ್ಟಿದೆ. ಇದರ ಜೊತೆಗೆ 15,389 ಮಂದಿ ಸೋಂಕಿತರು ಗುಣಮುಖಲಾಗಿದ್ದಾರೆ. ಅಲ್ಲದೇ ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ 534 ಸಾವನ್ನಪ್ಪಿರೋದಾಗಿ ತಿಳಿಸಿದೆ.

ಇನ್ನೂ ಇಂದಿನ ಕೊರೋನಾ ಪಾಸಿಟಿವ್ ( Corona Positive ) ಪ್ರಕರಣದಿಂದಾಗಿ ದೈನಂದಿನ ಧನಾತ್ಮಕತೆ ದರ ( Daily positivity rate ) ಶೇ.4.18%ಕ್ಕೆ ಏರಿಕೆಯಾಗಿದೆ. ಈಗ ಭಾರತದಲ್ಲಿ 2,14,004 ಸಕ್ರೀಯ ಕೊರೋನಾ ( Active cases ) ಪ್ರಕರಣಗಳಿದ್ದಾವೆ. ಇದುವರೆಗೆ 3,43,21,803 ಸೋಂಕಿತರು ಗುಣಮುಖರಾಗಿದ್ದಾರೆ. ಅಲ್ಲದೇ 4,82,551 ಮಂದಿ ಸೋಂಕಿತರು ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ. ದೇಶದಲ್ಲಿ ಇಲ್ಲಿಯವರೆಗೆ 147.72 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ.

- Advertisement -

Latest Posts

Don't Miss