ಬಾವಿಗೆ ಬಿದ್ದ ಬೆಕ್ಕಿನ ರಕ್ಷಣೆ ಮಾಡಲು ಹೋಗಿ ಐವರ ದುರ್ಮರಣ

National News: ಮಹಾರಾಷ್ಟ್ರದ ಅಹಮದ್‌ನಗರದಲ್ಲಿ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ, ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಪಾಳು ಬಾವಿಯೊಂದರಲ್ಲಿ ಬೆಕ್ಕೊಂದು ಬಿದ್ದಿದ್ದು ಅದನ್ನು ಬದುಕಿಸಲು, ಒಬ್ಬರ ಬಳಿಕ ಒಬ್ಬರು ಬಾವಿಗೆ ಹಾರಿದ್ದಾರೆ. ಆದರೆ ಬೆಕ್ಕಿನ ಪ್ರಾಣ ಉಳಿಸಲು ಹೋಗಿದ್ದವರು, ತಾವೇ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೋರ್ವ ಕೂಡ ಸೊಂಟಕ್ಕೆ ಹಗ್‌ಗ ಕಟ್ಟಿಕೊಂಡು ಬಾವಿಗೆ ಇಳಿದಿದ್ದು, ಇವನನ್ನು ಪೊಲೀಸರು ಬದುಕಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಮೃತದೇಹಗಳನ್ನು ಸಹ ಹೊರತೆಗೆಯಲಾಗಿದೆ.

ಇನ್ನು ಬಾವಿಗೆ ಇಳಿದವರು ಯಾಕೆ ಸಾವನ್ನಪ್ಪಿದರು ಎಂದು ತನಿಖೆ ನಡೆಸಿದಾಗ, ಬಾವಿಯಲ್ಲಿ ಸ್ವಚ್ಛ ನೀರು ಇರಲಿಲ್ಲ. ಇದು ಪಾಳು ಬಾವಿಯಾದ್ದರಿಂದ ಇಲ್ಲಿ ಜನ ಕಸ ಹಾಕುತ್ತಿದ್ದರು. ಈ ಕಸದ ಬಾವಿಯಲ್ಲಿ ಬಿದ್ದ ಜನ, ವಿಷಾನಿಲ ಸೇವಿಸಿ, ಸಾವನ್ನಪ್ಪಿದ್ದಾರೆ.

ಉಜ್ಜಯನಿ ದೇವಸ್ಥಾನದಲ್ಲಿ ಅಗ್ನಿ ಅವಘಡ ಪ್ರಕರಣ: ಓರ್ವ ಅರ್ಚಕ ಸಾವು

ಚುನಾವಣೆ ಪ್ರಚಾರದ ವೇಳೆ ಮಹಿಳೆಗೆ ಕಿಸ್ ಕೊಟ್ಟ ಅಭ್ಯರ್ಥಿ: ಫೋಟೋ ವೈರಲ್‌

598 ಅಂಕ ಗಳಿಸಿದ ಎ.ವಿದ್ಯಾಲಕ್ಷ್ಮೀಗೆ 1 ಲಕ್ಷ ರೂಪಾಯಿ ಬಹುಮಾನ ನೀಡಿದ ಚೌಗಲಾ ಶಿಕ್ಷಣ ಸಂಸ್ಥೆ

About The Author