Tuesday, April 30, 2024

Latest Posts

Flip cart: ಫ್ಲಿಪ್ ಕಾರ್ಟ್ ಕಂಪನಿಯಿಂದ ಸೇವಾ ನ್ಯೂನತೆ, ದಂಡಕ್ಕೆ ಆಗ್ರಹ..!

- Advertisement -

ಧಾರವಾಡ : ಗ್ರಾಹಕರ ಮನೆ ಬಾಗಿಲಿಗೆ ಸೇವೆ ಒದಗಿಸುವ ಪ್ಲಿಪ್ ಕಾರ್ಟ್ ಕಂಪನಿಯಿಂದ ಗ್ರಾಹಕರಿಗೆ ಸೇವಾ ನ್ಯೂನತೆ ಉಂಟಾಗಿದೆ. ಇದರಿಂದ ಮಾನಸಿಕವಾಗಿ ಹಿಂಸೆ ಅನುಭವಿಸಿದ ಪ್ಲಿಪ್ ಕಾರ್ಟ್ ಅನುಭೋಗಿ ಗ್ರಾಹಕರ ಆಯೋಗಕ್ಕೆ  ದೂರನ್ನು ಸಲ್ಲಿಸಿದ್ದಾರೆ. ಸರಿಯಾಗಿ ತನಿಖೆ ನಡೆಸಿದ ಆಯೋಗ ತೀರ್ಪು ನೀಡಿ ಗ್ರಾಹಕರಿಗೆ ಪರಿಹಾರ ಒದಗಿಸುವಂತೆ ಕಂಪನಿಗೆ ದಂಡ ವಿಧಿಸಿದೆ.

ತಾಲೂಕಿನ ಖಾನಾಪೂರ ಮ. ತಡಕೋಡ ಗ್ರಾಮದ ನಿವಾಸಿ ಈರಣ್ಣ ಗುಂಡಗೋವಿ ಎಂಬುವವರು ಫ್ಲಿಪ್‍ಕಾರ್ಟ್ ಕಂಪನಿಯಿಂದ ಆನ್‍ಲೈನ್ ಮೂಲಕ ಜನವರಿ 14, 2023 ರಂದು ರೂ. 2,632 ಸಂದಾಯ ಮಾಡಿ ಮಿಲ್ಟನ್ ಬೆವರೇಜ್ ಡಿಸ್ಪೆನ್ಸರ್ 2500 ಎಂಎಲ್‌ನ ಥರ್ಮಸ್ ಆರ್ಡರ್ ಮಾಡಿದ್ದರು. ಥರ್ಮಸ್‍ನ್ನು ಕಂಪನಿಯ ಕೋರಿಯರ್ ಸರ್ವಿಸ್‍ನವರು ತಲುಪಿಸಿದ್ದರು. ಈರಣ್ಣ ಆ ಬಾಕ್ಸ್‌ನ್ನು ತೆರೆದು, ಥರ್ಮಸ್ ಬಳಸಲು ನೋಡಿದಾಗ ಅದು ದೋಷದಿಂದ ಕೂಡಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ಅದನ್ನು ಮರಳಿ ಕಳುಹಿಸಲು ಕೋರಿಯರ್‌ನವರಿಗೆ ವಿನಂತಿಸಿಕೊಳ್ಳುತ್ತಾರೆ.‌

ಹೀಗಾಗಿ ಕಂಪನಿಯ ಕೋರಿಯರ್ ಸರ್ವಿಸ್‍ನವರು ಆ ಥರ್ಮಸ್‌ನ್ನು ಈರಣ್ಣ ಅವರಿಂದ ಜನವರಿ, 2023 ರಂದು ಹಿಂಪಡೆದುಕೊಂಡು ಹೋಗಿರುತ್ತಾರೆ. ಆದರೆ ಆ ದೋಷಯುಕ್ತ ಥರ್ಮಸ್ ಬದಲು ಬೇರೆ ಹೊಸ ಥರ್ಮಸ್ ಕೊಡದೇ ಮತ್ತು ಅದರ ಬೆಲೆಯನ್ನು ಹಿಂದಿರುಗಿಸದೇ ವಸ್ತುವನ್ನು ಮರಳಿ ಪಡೆಯುವಿಕೆ ರದ್ದುಗೊಳಿಸಲಾಗಿರುತ್ತದೆ. ಈ ಬಗ್ಗೆ ಈರಣ್ಣ ಅವರ ಮೂಬೈಲ್‍ಗೆ ಸಂದೇಶ ಕಳುಹಿಸಲಾಗುತ್ತೆ. ಇದರಿಂದಾಗಿ ಕಂಪನಿಯವರಿಂದ ಇದರಲ್ಲಿ ಸೇವಾ ನ್ಯೂನ್ಯತೆ ಎಸಗಿದ್ದಾರೆ. ಹಾಗೂ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಅಂತಾ ಈರಣ್ಣ ಗ್ರಾಹಕ ಸಂರಕ್ಷಣಾ ಕಾಯಿದೆ ಅಡಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.

ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ದೋಷಯುಕ್ತ ಮಿಲ್ಟನ್ ಬೆವರೇಜ್ ಡಿಸ್ಪನ್ಸರ್ ಥರ್ಮಸ್ ಹಿಂಪಡೆದು ಬೇರೆ ಹೊಸ ಥರ್ಮಸ್ ಮರಳಿಸುವಲ್ಲಿ ಕಂಪನಿಯವರು ವಿಫಲರಾಗಿದ್ದಾರೆ. ಆ ಮೂಲಕ ಅವರು ದೂರುದಾರನಿಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಅಭಿಪ್ರಾಯಪಟ್ಟು ತೀರ್ಪು ನೀಡಿದ್ದಾರೆ.

ಕಂಪನಿಯವರು ಈರಣ್ಣ ಅವರಿಗೆ ಥರ್ಮಸ್‍ನ ಮೌಲ್ಯ ರೂ. 2,632 ಗಳನ್ನು ಈ ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ಕೊಡಲು ಆದೇಶಿಸಿದ್ದಾರೆ. ಅಲ್ಲದೇ ದೂರುದಾರನಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ ರೂ.10,000 ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ. 5,000 ನೀಡುವಂತೆ ಫ್ಲಿಪ್‍ಕಾರ್ಟ್ ಮತ್ತು ಸಿಆಯ್‍ಜಿ ಎಫ್ಆಯ್‍ಎಲ್ ಲಿಮಿಟೆಡ್ ಕಂಪನಿಗೆ ತೀರ್ಪಿನಲ್ಲಿ ಆದೇಶಿಸಿದ್ದಾರೆ.

Cauvery Water : ಬೆಂಗಳೂರು ಬಂದ್ : ಟೌನ್ ಹಾಲ್ ಬಳಿ ಎಂದಿನಂತೆ ಜನ ಸಂಚಾರ

KSRTC: ಮರಕ್ಕೆ ಡಿಕ್ಕಿ ಹೊಡೆದು ಕೆಎಸ್ಆರ್ ಟಿಸಿ ಬಸ್ ಪಲ್ಟಿ:

Temple : ವಿದೇಶದಲ್ಲಿ ಹಿಂದೂ ದೇವಾಲಯ ಉದ್ಘಾಟನೆಗೆ ಸಿದ್ದ

- Advertisement -

Latest Posts

Don't Miss