Business Tips: ಹಲವರು ವ್ಯಾಪಾರಗಳನ್ನು ಆರಂಭಿಸುತ್ತಾರೆ. ಆದರೆ ಎಲ್ಲರೂ ಆ ಉದ್ಯಮದಲ್ಲಿ ಸಕ್ಸಸ್ ಆಗುವುದಿಲ್ಲ. ಕೆಲವರಿಗೆ ಬಂಡವಾಳದ ಕೊರತೆ ಇದ್ದರೆ, ಇನ್ನು ಕೆಲವರು ಉದ್ಯಮದ ಬಗ್ಗೆ ತಿಳುವಳಿಕೆ ಸಾಕಾಗಿರುವುದಿಲ್ಲ. ಹಾಗಾದ್ರೆ ವ್ಯಾಪಾರದಲ್ಲಿ ಯಶಸ್ಸು ಕಾಣಬೇಕು ಅಂದ್ರೆ ಯಾವ ನಿಯಮವನ್ನು ಅನುಸರಿಸಬೇಕು ಎಂದು ತಿಳಿಯೋಣ ಬನ್ನಿ..
ಮೊದಲನೇಯ ನಿಯಮ, ನಿಮ್ಮ ಉದ್ಯಮದ ಮೇಲೆ ನಿಮಗೆಷ್ಟು ಕಂಟ್ರೋಲಿದೆ ಎಂಬುದು ನಿಮಗೆ ಗೊತ್ತಿರಬೇಕು. ಉದಾಹರಣೆಗೆ ಅಂಗಡಿಯನ್ನು ಬಾಡಿಗೆಗೆ ತೆಗೆದುಕೊಂಡು, ವ್ಯಾಪಾರ ಆರಂಭಿಸುತ್ತಾರೆ. 5 ವರ್ಷದವರೆಗೆ ವ್ಯಾಪಾರ ಅತ್ಯುತ್ತಮವಾಗಿ ನಡೆಯುತ್ತಿರುತ್ತದೆ. 5 ವರ್ಷದ ಬಳಿಕ, ಅಂಗಡಿಯ ಮಾಲೀಕ ಬಂದು, ನಿಮ್ಮ ಅಂಗಡಿಯನ್ನು ಖಾಲಿ ಮಾಡಿ ಎಂದರೆ ಆವಾಗ ವ್ಯಾಪಾರಸ್ಥ ಏನು ಮಾಡಬೇಕು..? ಆಗ ವ್ಯಾಪಾರದ ಮೇಲಿನ ಕಂಟ್ರೋಲ್ ತಪ್ಪಿ ಹೋಗುತ್ತದೆ. ವ್ಯಾಪಾರಿ ಕಕ್ಕಾಬಿಕ್ಕಿಯಾಗುತ್ತಾನೆ. ಹಾಗಾಗಬಾರದು ಅಂದ್ರೆ, ನಿಮ್ಮ ವ್ಯಾಪಾರ ಭವಿಷ್ಯದಲ್ಲೂ ಚೆನ್ನಾಗಿ ನಡೆಯುತ್ತದೆ ಅನ್ನುವ ನಂಬಿಕೆ ಇದ್ದರೆ, ನೀವು ಅಂಗಡಿಯನ್ನು ಲೀಸ್‌ಗೆ ತೆಗೆದುಕೊಳ್ಳಬಹುದು.
ಎರಡನೇಯ ನಿಯಮ, ಜನರಿಗೆ ಅವಶ್ಯಕತೆ ಇರುವ ವಸ್ತುಗಳನ್ನು ಸೇಲ್ ಮಾಡಬೇಕು. ಉದಾಹರಣೆಗೆ ಕೊರೊನಾ ಸಮಯದಲ್ಲಿ ಯಾವುದು ಅತ್ಯಾವಶ್ಯಕ ಅನ್ನುವುದು ನಮಗೆ ಗೊತ್ತಾಗಿದೆ. ಹಾಗಾಗಿ ದೊಡ್ಡ ದೊಡ್ಡ ವ್ಯಾಪಾರಿಗಳು ಬೀದಿಗಿಳಿದು, ಹಣ್ಣು, ತರಕಾರಿ ವ್ಯಾಪಾರ ಮಾಡೋಕ್ಕೆ ಶುರು ಮಾಡಿದ್ದರು. ದಿನಸಿ ಅಂಗಡಿ ವ್ಯಾಪಾರ ಅತ್ಯುತ್ತಮವಾಗಿತ್ತು. ಏಕೆಂದರೆ, ಆ ಸಮಯದಲ್ಲಿ ಹೊಟೇಲ್ ವ್ಯಾಪಾರ ಇರಲಿಲ್ಲ. ಜನ ಮನೆಯಲ್ಲೇ ರುಚಿ ರುಚಿ ಅಡುಗೆ ಮಾಡಿ ತಿನ್ನಲು, ಹೆಚ್ಚೆಚ್ಚು ದಿನಸಿ ಖರೀದಿಸುತ್ತಿದ್ದರು. ಹಾಗಾಗಿ ಯಾವ ಕಾಲಕ್ಕೂ ಜನರಿಗೆ ಅವಶ್ಯಕವಿರುವುದು ದಿನಸಿ, ಹಣ್ಣು, ತರಕಾರಿ. ಈ ವ್ಯಾಪಾರ ಸದಾ ನಿಮ್ಮ ಕೈ ಹಿಡಿಯುತ್ತದೆ.
ಮೂರನೇಯ ನಿಯಮ, ಇನ್ನೊಬ್ಬರಿಗೆ ಜವಾಬ್ದಾರಿ ವಹಿಸಿ, ನೀವು ಉನ್ನತ ಮಟ್ಟಕ್ಕೇರುವುದರ ಬಗ್ಗೆ ಯೋಚಿಸಿ. ನೀವು ಒಂದು ಉದ್ಯಮ ಆರಂಭಿಸಿರುತ್ತೀರಿ. ಅದರಲ್ಲಿ ಲಾಭ ಬರುವರೆಗೂ ನೀವು ತಿಂಗಳಿಡೀ ಕೆಲಸ ಮಾಡಬೇಕು. ಲಾಭ ಬಂದ ಬಳಿಕ, ಕೆಲಸಗಾರರಿಗೆ ಜವಾಬ್ದಾರಿ ವಹಿಸಿ, ನೀವು ಕೆಲಸದಲ್ಲೆಲ್ಲೂ ತೊಂದರೆಯಾಗದಂತೆ ನಿಗಾ ವಹಿಸಬೇಕು. ಜೊತೆಗೆ ಇನ್ನೊಂದು ಕಡೆ ಬ್ರ್ಯಾಂಚ್ ಓಪೆನ್ ಮಾಡಬಹುದಾ..? ಅಥವಾ ಈ ವ್ಯಾಪಾರವನ್ನು ಇನ್ನೂ ಎತ್ತರಕ್ಕೆ ಹೇಗೆ ಕೊಂಡೊಯ್ಯಬೇಕು ಎನ್ನುವ ಬಗ್ಗೆ ಯೋಚಿಸಬೇಕು.
ತನ್ನ 29ನೇ ವಯಸ್ಸಿನಲ್ಲೇ ಕೋಟಿ ಕೋಟಿ ರೂಪಾಯಿ ಗಳಿಸಿದ ಹುಡುಗಿ.. ಹೇಗೆ..?
ಆಫರ್, ಡಿಸ್ಕೌಂಟ್ ಇಲ್ಲದೇ ಗ್ರಾಹಕರು ನಿಮ್ಮ ಬಳಿ ಬರಬೇಕೇ..? ಹೀಗೆ ಮಾಡಿ..




