ಬೇಸಿಗೆ ಶುರುವಾಗಿದೆ. ರಣ ಬಿಸಿಲಿನಿಂದ ಬಳಲಿಕೆ ಹೆಚ್ಚಾಗಿದೆ. ಎಷ್ಟು ನೀರು ಕುಡಿದರೂ ಸಾಲುವುದಿಲ್ಲ. ಅದಕ್ಕಾಗಿ ನಾವಿಂದು ಬೇಸಿಗೆಯಲ್ಲಿ ದೇಹ ತಂಪಾಗಿರಿಸಲು ಯಾವ ಟ್ರಿಕ್ಸ್ ಬಳಸಬೇಕು. ಎಂಥ ಆಹಾರ ಸೇವಿಸಬೇಕು ಮತ್ತು ಎಂಥ ಆಹಾರ ಸೇವಿಸಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531

ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ
8147130507 / 7349360507
ಮೊದಲನೇಯದಾಗಿ ಉಷ್ಣ ಪದಾರ್ಥಗಳ ಬಳಕೆ ಕಡಿಮೆ ಮಾಡಬೇಕು. ಮಸಾಲೆ ಪದಾರ್ಥಗಳು, ಮೆಣಸಿನಕಾಯಿ, ಉಪ್ಪಿನಕಾಯಿ, ಚೀಸ್, ಹುಳಿ ಹಣ್ಣು, ಟೊಮೆಟೋ, ಕರಿದ ಪದಾರ್ಥಗಳು, ಇವುಗಳನ್ನೆಲ್ಲ ತಿನ್ನಬಾರದು. ಯಾಕಂದ್ರೆ ಬೇಸಿಗೆಯಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚಾಗಿರುವುದರಿಂದ, ನಾವು ಉಷ್ಣ ಪದಾರ್ಥಗಳನ್ನು ತಿಂದರೆ, ಎದೆಯುರಿ ಸಮಸ್ಯೆ ಸೇರಿ ಇನ್ನೂ ಹಲವು ಆರೋಗ್ಯ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿದೆ.
ಪಿತ್ತ ತರಿಸುವ ಆಹಾರ ಸೇವಿಸಬಾರದು. ಬೇಸಿಗೆಯಲ್ಲಿ ಹೆಚ್ಚು ಹುಳಿಯಾದ ಮೊಸರು, ಹುಣಸೆಹಣ್ಣು, ಹುಳಿ ಮಾವು ಇವುಗಳನ್ನೆಲ್ಲ ಸೇವಿಸಬಾರದು. ಇದರ ಬದಲಾಗಿ ಹೆಚ್ಚು ಹುಳಿ ಇರದ ಮೊಸರು, ಕಲ್ಲಂಗಡಿ ಹಣ್ಣು, ಸೇಬು, ಕಿತ್ತಳೆ, ಬಾಳೆ, ಹೀಗೆ ದೇಹ ತಂಪಾಗಿರಿಸುವ ಹಣ್ಣನ್ನು ಸೇವಿಸಿ. ಇದರ ಜೊತೆಗೆ ಸಮಯಕ್ಕೆ ಸರಿಯಾಗಿ ಊಟ ಮಾಡಿ, ತಿಂಡಿ ತಿನ್ನಿ ನಿದ್ದೆ ಮಾಡಿ. ಯಾಕಂದ್ರೆ ನಮ್ಮ ದೇಹದ ಬೆಳವಣಿಗೆಯಾಗುವುದೇ ಬೇಸಿಗೆ ಕಾಲದಲ್ಲಿ. ಹಾಗಾಗಿ ನಾವು ಆದಷ್ಟು ಹೆಲ್ದಿ ಫುಡ್ ಸೇವನೆ ಮಾಡಬೇಕು. ಆರೋಗ್ಯಕರ ಪೇಯವನ್ನೇ ಕುಡಿಯಬೇಕು.
ಸ್ನಾನ ಮಾಡುವ ಮುನ್ನ ವಾರಕ್ಕೆ ಎರಡು ಬಾರಿಯಾದರೂ ಮೈಗೆ ತೆಂಗಿನ ಎಣ್ಣೆ ಹಚ್ಚಿ ಮಸಾಜ್ ಮಾಡಿ, ಸ್ನಾನ ಮಾಡಿ. ಇದರಿಂದ ಮೈ ಹಗುರವಾಗುವುದಲ್ಲದೇ, ಆರಾಮದಾಯಕವಾಗಿರುತ್ತದೆ. ಇದು ದೇಹಕ್ಕೂ ತಂಪು ಅಂತಾ ಹೇಳಲಾಗುತ್ತದೆ. ಇನ್ನು ಬೇಸಿಗೆಯಲ್ಲಿ ತಂಪು ಆಹಾರ ಸೇವಿಸಬೇಕೇ ವಿನಃ ಫ್ರಿಜ್‌ನಲ್ಲಿರಿಸಿದ ಆಹಾರ ಸೇವಿಸಬಾರದು. ತಂಪು ಪಾನೀಯ, ತಂಪು ನೀರು ಕುಡಿಯುವುದಿದ್ದರೆ, ಮಣ್ಣಿನ ಮಡಿಕೆಯಲ್ಲಿ ಕುಡಿಯಿರಿ.
ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531
ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507 / 7349360507
ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ
8147130507 / 7349360507

