Friday, December 13, 2024

Latest Posts

Recipe: ಸಂಜೆ ಟೀ ಟೈಮ್‌ ಸ್ನ್ಯಾಕ್ಸ್ ಚಟ್ಟಂಬಡೆ ರೆಸಿಪಿ

- Advertisement -

ಬೇಕಾಗುವ ಸಾಮಗ್ರಿ:  1 ಕಪ್ ಕಡಲೆಬೇಳೆ, 1 ಸ್ಪೂನ್ ಜೀರಿಗೆ, 2 ಹಸಿಮೆಣಸು, ಕೊಂಚ ಹಿಂಗು, ಸಣ್ಣಗೆ ತುಂಡು ಮಾಡಿದ ಕಾಯಿ, ಅಥವಾ ಕಾಯಿತುರಿ, ಕೊತ್ತೊಂಬರಿ ಸೊಪ್ಪು, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ: ಕಡಲೆಬೇಳೆಯನ್ನು 4 ತಾಸು ನೆನೆಸಿಡಿ. ಬಳಿಕ ನೀರು ತೆಗೆದು, ಚೆನ್ನಾಗಿ ತೊಳೆದು, ತರಿತರಿಯಾಗಿ ರುಬ್ಬಿಕೊಳ್ಳಿ. ರುಬ್ಬುವಾಗ ನೀರು ಬಳಸಬಾರದು. ಈಗ ಇದಕ್ಕೆ ಉಪ್ಪು, ಹಿಂಗು, ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಜೀರಿಗೆ, ಕಾಯಿತುರಿ, ಕರಿಬೇವು ಹಾಕಿ ಮಿಕ್ಸ್ ಮಾಡಿ.

ಈಗ ಎಣ್ಣೆ ಕಾಯಿಸಿ, ಕಡಲೆಬೇಳೆ ಮಿಶ್ರಣವನ್ನು ವಡೆಯಂತೆ ತಟ್ಟಿ, ಕಾದ ಎಣ್ಣೆಯಲ್ಲಿ ಕರಿದರೆ, ಚಟ್ಟಂಬಡೆ ರೆಡಿ. ಇದನ್ನು ಕಾಯಿಚಟ್ನಿಯೊಂದಿಗೆ ಸವಿಯಬಹುದು. ಇದಕ್ಕೆ ಈರುಳ್ಳಿ, ಬೆಳ್ಳುಳ್ಳಿ ಹಾಕದ ಕಾರಣ, ಹಬ್ಬದ ದಿನದಲ್ಲೂ ಈ ತಿಂಡಿ ಮಾಡಬಹುದು.

- Advertisement -

Latest Posts

Don't Miss