Wednesday, July 2, 2025

Latest Posts

ಹೆಚ್.ವಿಶ್ವನಾಥ್‌ರನ್ನು ಭೇಟಿ ಮಾಡಿ ಬೆಂಬಲ ಕೋರಿದ ಮಾಜಿ ಸಿಎಂ ಕುಮಾರಸ್ವಾಮಿ

- Advertisement -

Political News: ಇಂದು ಮಾಜಿ ಸಿಎಂ ಕುಮಾರಸ್ವಾಮಿ ಮುನಿಸು ತೊರೆದು, ಹೆಚ್.ವಿಶ್ವನಾಥ್ ಅವರನ್ನು ಭೇಟಿಯಾಗಿ, ಅವರ ಮನೆಯಲ್ಲಿ ಭೋಜನ ಕೂಟದಲ್ಲಿ ಭಾಗಿಯಾಗಿದ್ದರು.

ಮಾಜಿ ಸಚಿವರು, ಹಿರಿಯ ನಾಯಕರು ಆದ ಶ್ರೀ ಹೆಚ್.ವಿಶ್ವನಾಥ್ ಅವರನ್ನು ಮೈಸೂರು ಜಿಲ್ಲೆಯ ಕೆ.ಆರ್.ನಗರದ ಅವರ ನಿವಾಸದಲ್ಲಿ ಭೇಟಿಯಾಗಿ ಲೋಕಸಭೆ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡೆ. ಅವರ ಪ್ರೀತಿ, ವಿಶ್ವಾಸ ಮತ್ತು ಸಕಾರಾತ್ಮಕ ಸ್ಪಂದನೆಗೆ ಕೃತಜ್ಞತೆಗಳನ್ನು ತಿಳಿಸಿದ್ದೇನೆ ಎಂದರು.

ಈ ಭೇಟಿಯ ಸಂದರ್ಭದಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ ಜಿ.ಟಿ.ದೇವೇಗೌಡರು, ಮಾಜಿ ಸಚಿವರಾದ ಶ್ರೀ ಸಾ.ರಾ.ಮಹೇಶ್, ಶ್ರೀ ಸಿ.ಎಸ್.ಪುಟ್ಟರಾಜು, ಶ್ರೀ ಬಂಡೆಪ್ಪ ಕಾಷೆಂಪೂರ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಹಾಗೂ ಶ್ರೀ ವಿಶ್ವನಾಥ್ ಅವರ ಬೆಂಬಲಿಗರು ಉಪಸ್ಥಿತರಿದ್ದರು ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ನನ್ನ ಮಕ್ಕಳು ರಾಹುಲ್ ಗಾಂಧಿಯಂತಾಗಬೇಕು, ಮೋದಿಯಂತೆ ಸುಳ್ಳು ಹೇಳಬಾರದು: ಸಚಿವ ಸಂತೋಷ್ ಲಾಡ್

ರಾಹುಲ್ ಗಾಂಧಿ ಕೆಟ್ಟು ನಿಂತ ಗ್ರಾಮಾಫೋನ್ ಇದ್ದಂತೆ. ಹೇಳಿದ್ದನ್ನೇ ಹೇಳುತ್ತಾರೆ: ಪ್ರಹ್ಲಾದ್ ಜೋಶಿ ವ್ಯಂಗ್ಯ..

ಇದು ಕಾಂಟ್ರ್ಯಾಕ್ಟ್ ಮದುವೆಯಲ್ಲ, ಧೀರ್ಘಕಾಲದ ಸಂಬಂಧ: ಮೈತ್ರಿ ಬಗ್ಗೆ ರಾಧಾಮೋಹನ್ ಹೇಳಿಕೆ

- Advertisement -

Latest Posts

Don't Miss