Saturday, April 12, 2025

Latest Posts

ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ತಿರುಗೇಟು ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ..

- Advertisement -

ಬಿಡದಿ/ರಾಮನಗರ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ತಮ್ಮ ಇಲಾಖೆಯಲ್ಲಿ ಏನೆಲ್ಲಾ ನಡೆಯುತ್ತಿತ್ತು ಎನ್ನುವುದು ಗೊತ್ತಿರಲಿಲ್ಲವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದ್ದಾರೆ.

ಸಿದ್ಧರಾಮಯ್ಯ ಕೋಲಾರದಲ್ಲಿ ನಿಲ್ಲಲ..!: ಅಚ್ಚರಿ  ಹೇಳಿಕೆ ನೀಡಿದ ಸಿ ಎಂ ಇಬ್ರಾಹಿಂ

ಬಿಡದಿಯ ತಮ್ಮ ತೋಟದಲ್ಲಿ ರೈತ ಸಂಕ್ರಾಂತಿ ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು; ತಮ್ಮ ಇಲಾಖೆಯಲ್ಲಿ ದಂಧೆ ನಡೆಯುತ್ತಿದ್ದರೆ ಸಚಿವರು ಏನು ಮಾಡುತ್ತಿದ್ದರು. ಅದನ್ನು ಅವರು ಜನರಿಗೆ ತಿಳಿಸಬೇಕು ಎಂದು ಎಂದರು.

ಸ್ಯಾಂಟ್ರೋ ರವಿ ಬಳಿ ಹಣ ಪಡೆದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ತೀನಿ ಎನ್ನುವ ಆರಗ ಜ್ಞಾನೇಂದ್ರ ಹೇಳಿಕೆ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿಗಳು, ಅವರು ಆತ್ಮಹತ್ಯೆ ಮಾಡಿಕೊಳ್ಳಲಿ ಅಂತ ನಾನ್ಯಾಕೆ ಹೇಳಲಿ. ಈ ಸರಕಾರದಲ್ಲಿ ನಡೆಯುತ್ತಿರುವ ಕಾಸಿಗಾಗಿ ಪೋಸ್ಟಿಂಗ್ ವಿಚಾರ ಬೀದಿ ಬೀದಿಯಲ್ಲಿ ಚರ್ಚೆ ನಡೆಯುತ್ತಿದೆ. ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ದಂಧೆಗಳ ಜನರು ಕೂತಲ್ಲಿ, ನಿಂತಲ್ಲಿ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಸಿದ್ಧರಾಮಯ್ಯ ಕೋಲಾರದಲ್ಲಿ ನಿಲ್ಲಲ..!: ಅಚ್ಚರಿ  ಹೇಳಿಕೆ ನೀಡಿದ ಸಿ ಎಂ ಇಬ್ರಾಹಿಂ

ಈಗ ಬಂಧನಕ್ಕೆ ಒಳಗಾಗಿರುವ ವ್ಯಕ್ತಿ ಎಲ್ಲಿ, ಯಾರಿಂದ ಏನೆಲ್ಲಾ ಕೆಲಸ ಮಾಡಿಕೊಂಡಿದ್ದಾನೆ ಎಲ್ಲ ಕಡೆ ಹೇಳಿಕೊಂಡು ತಿರುಗಿದ್ದಾನೆ. ಆತನ ಫೋಟೋಗಳು, ಅಡಿಯೋಗಳು ರಾಜ್ಯದ ತುಂಬಾ ಹಬ್ಬಿವೆ. ಇದೆಲ್ಲಾ ಗೃಹ ಸಚಿವರ ಗಮನಕ್ಕೆ ಬಂದಿಲ್ಲವೇ ಎಂದು ಕುಮಾರಸ್ವಾಮಿ ಅವರು ಕೇಳಿದರು.

- Advertisement -

Latest Posts

Don't Miss