ತುಮಕೂರು: ಜೆಡಿಎಸ್ ಸಭೆಯೊಂದರಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು, ಕೆಲ ಮಾಧ್ಯಮಗಳು ನಡೆಸುತ್ತಿರುವ ಸಮೀಕ್ಷೆಗಳ ವಿರುದ್ಧ ಗರಂ ಆಗಿದ್ದಾರೆ.
ಮಾಧ್ಯಮಗಳು ನಡೆಸುತ್ತಿರುವ ಸಮೀಕ್ಷೆಯಲ್ಲಿ, 24ಸೀಟು, 27 ಸೀಟು, 29 ಸೀಟು ಇದರ ಆಸುಪಾಸಿನಲ್ಲೇ ಜನತಾದಳವನ್ನ ಇರಿಸಿದ್ದಾರೆ. ನಾವು ಕೋಟಿ ಕೋಟಿ ಕೊಟ್ಟರೆ, 29 ಸೀಟಿನಿಂದ 129 ಸೀಟೆಂದು ಹಾಕುತ್ತಾರೆ. ಆದರೆ ನಮ್ಮ ಕಾರ್ಯಕರ್ತರಿಗೆ ಕೊಡಲು ನಮ್ಮ ಬಳಿ ದುಡ್ಡಿಲ್ಲ. ಅಂಥದ್ರಲ್ಲಿ ಇವರಿಗೆಲ್ಲ ನಾವು ಎಲ್ಲಿಂದ ದುಡ್ಡು ಕೋಡೋದು..? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನಾಮಪತ್ರ ಸಲ್ಲಿಕೆ ಮುಗಿದು, ಅದನ್ನ ಹಿಂಪಡೆಯುವ ಕೆಲಸವೇ ಮುಗಿದಿಲ್ಲ. ಆಗಲೇ ಯಾವುದೋ ಒಂದು ಚಾನೆಲ್‌ನಲ್ಲಿ, ಆಗಲೇ ಕೆಲವು ಪಕ್ಷಕ್ಕೆ 116 ಸೀಟೆಂದು ಹೇಳಿದ್ದಾರೆ. ಈ ರೀತಿಯಾಗಿ ರಾಜಕಾರಣದಲ್ಲಿ ನಿಮ್ಮನ್ನು ಅಸ್ಥಿರಗೊಳಿಸಲಿಕ್ಕೆ ಟ್ರೈ ಮಾಡುತ್ತಾರೆ. ಇದಕ್ಕೆ ಬಲಿಯಾಗಬೇಡಿ. ಈ ಬಾರಿ ಕಾಂಗ್ರೆಸ್, ಬಿಜೆಪಿ ಸೋಲಿಸಿ, ಜೆಡಿಎಸ್ ಬಹುಮತದಲ್ಲಿ ಗೆಲ್ಲಲಿದೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ವೀಕ್ಷಿಸಿ..
ಮಗ.. ಅಮ್ಮ.. ತಂದೆ.. ತಾಯಿ.. ಎಲ್ಲಾ ಜ್ಞಾಪಕಕ್ಕೆ ಬರ್ತಾ ಇದ್ದಾರೆ : ಭವಾನಿಗೆ ಪ್ರೀತಂ ಟಾಂಗ್..