ಶಿವಮೊಗ್ಗ: ಶಿವಮೊಗ್ಗದಲ್ಲಿ ಅಮಾಯಕ ಯುವಕನ ಕೊಲೆಯಾಗಿದೆ. ಇನ್ನೊಂದು ವಾರ ಅವರ ಮನೆಗೆ ಭೇಟಿ ನೀಡುತ್ತಾರೆ. ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮೊಸಳೆ ಕಣ್ಣೀರು ಸುರಿಸ್ತಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಹಲವು ಅಹಿತಕರ ಘಟನೆ ನಡೆದಿತ್ತು. ಆಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆರೋಪಿಸಿತ್ತು. ಅವರ ಆರೋಪದಲ್ಲಿ ಕೆಲವೊಂದು ಸತ್ಯವೂ ಇದೆ. ನಿನ್ನೆ ಘಟನೆಯ ಹಿಂದಿನ ಉದ್ದೇಶ ಏನೆಂದು ಗೊತ್ತಾಗಬೇಕು. 2 ವರ್ಷದ ಹಿಂದೆ ಹರ್ಷ ಕೊಲೆಗೆ ಘೋಷಣೆ ಮಾಡಿದ್ದರು. 10 ಲಕ್ಷ ಹಣ ಕೊಡುವುದಾಗಿ ಘೋಷಿಸಿದ್ದರೆಂದು ಮೃತ ಹರ್ಷ ಸಂಬಂಧಿಕರೊಬ್ಬರು ಈ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರಿಗೆ ಮಾಹಿತಿ ಇರಲಿಲ್ಲವೇ? ನಿಮ್ಮ ಪಕ್ಷಕ್ಕೆ ಬೆಂಬಲ ನೀಡುವ ಸದಸ್ಯನಿಗೆ ರಕ್ಷಣೆ ನೀಡಿಲ್ಲ. ಇನ್ನು ನೀವು ಈ ರಾಜ್ಯದ ಜನರಿಗೆ ರಕ್ಷಣೆ ಕೊಡುತ್ತೀರಾ? ಮುಂದೆ ರಾಜ್ಯದಲ್ಲಿ ಏನಾಗುತ್ತೆ ಎಂಬುದಕ್ಕೆ ಇದು ಟ್ರೇಲರ್ ಎಂಬ ಬಗ್ಗೆ ನನಗೆ ಅನುಮಾನವಿದೆ ಎಂದರು.
ಇನ್ನು ಡಿ.ಕೆ.ಶಿ ಪ್ರಚೋದನೆಯಿಂದ ಹತ್ಯೆಯಾಗಿದೆ ಎಂಬ ಹೇಳಿಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕರು ಕ್ರಮಕೈಗೊಳ್ಳಬೇಕಿತ್ತು. ಊರೆಲ್ಲಾ ಬೆಂಕಿ ಇಟ್ಟ ಮೇಲೆ ಫೈರ್ ಇಂಜಿನ್ ಹೋಗಬಾರದು. ರಾಜ್ಯದಲ್ಲಿ 100 ಕ್ಕೆ 50ರಷ್ಟು ರಾಜಕಾರಣಿಗಳ ಶಾಲೆಗಳಿವೆ. ಈ ಶಾಲೆಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಇದ್ಯಾ. ಕೇವಲ ಅಮಾಯಕ ಮಕ್ಕಳಿರುವ ಶಾಲೆಗಳಲ್ಲಿ ವಿವಾದ ಇದೆ. ಚುನಾವಣೆಗಾಗಿ ಈ ವಿವಾದ ಹುಟ್ಟು ಹಾಕಿರುವ ಆರೋಪ ರಾಜ್ಯದ ಜನರು ಎಚ್ಚೆತ್ತುಕೊಳ್ಳಬೇಕು ಎಂದರು.