ಹಾಸನ: ಹಾಸನ ಜಿಲ್ಲೆಯ ಅರಸೀಕೆರೆಯ ಕಾಂಗ್ರೆಸ್ ಪಕ್ಷ ಸೇರ್ಪಡೆ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ನಾನು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸೇರ್ಪಡೆಯಾಗಿ ಅಂತಾ ಹೇಳಿದ್ದೆವು. ಆದ್ರೆ ಶಿವಲಿಂಗೇಗೌಡ್ರು ನಾನು ಅರಸೀಕೆರೆಯಲ್ಲಿಯೇ ಸೇರ್ತೇನೆ ಅಂತಾ ಹೇಳಿದ್ರು. ನೀವು ಹಾಗೂ ಡಿಕೆ ಶಿವಕುಮಾರ್ ಇಬ್ಬರೂ ಅರಸೀಕೆರೆಗೆ ಬರಬೇಕೆಂದು ಹೇಳಿದ್ರು. ಶಿವಲಿಂಗೇಗೌಡ್ರು ಒಬ್ಬ ಜನಪರ ಕಾಳಜಿ ಇರುವ , ಕ್ಷೇತ್ರದ ಬಗ್ಗೆ ಅಭಿವೃದ್ದಿ ಹೊಂದಬೇಕೆನ್ನುವ ಹಂಬಲ ಇರುವ ವ್ಯಕ್ತಿ. ಮಂತ್ರಿಗಳತ್ರ, ಅಧಿಕಾರಿಗಳತ್ರ ಹೇಗೆ ಕೆಲಸ ಮಾಡಬೇಕೆಂಬುದನ್ನ ಚೆನ್ನಾಗಿ ಅರಿತಿದ್ದಾರೆ ಎಂದು ಶಿವರಾಮೇಗೌಡರನ್ನು ಹಾಡಿ ಹೊಗಳಿದ್ದಾರೆ.
ಶಿವಲಿಂಗೇಗೌಡ್ರು ಶಾಸಕರಾಗೋಕೂ ಮುಂಚೆಯಿಂದ ಪರಿಚಯಿಸ್ಥರು. ಅರಸೀಕೆರೆ ತಾಲೂಕಿಗೆ ಕುಡಿಯುವ ನೀರು ಬಂದಿದೆ ಅಂದ್ರೆ ಅದಕ್ಕೆ ಶಿವಲಿಂಗೇಗೌಡ ಅವರೇ ಕಾರಣ. ಅದು ಯಾರು ಅನ್ನೋದನ್ನ ನೀವ್ಯಾರೂ ಮರಿಲೇಬಾರದು . ಎತ್ತಿನಹೊಳೆ ಉದ್ಘಾಟನೆಗೆ ಚಿಕ್ಕಬಳ್ಳಾಪುರದಲ್ಲಿ ಕಾರ್ಯಕ್ರಮ ಮಾಡಿದ್ದೆವು. ಅದಕ್ಕೆ ಜೆಡಿಎಸ್ ನ ಎಲ್ಲಾ ಶಾಸಕರು, ಕುಮಾರಸ್ವಾಮಿ ಹಾಗೂ ರೇವಣ್ಣ ಅವರಿಗೂ ಆಹ್ವಾನ ನೀಡಿದ್ದೆವು. ಆದ್ರೆ ಅವರ್ಯಾರೂ ಬರಲಿಲ್ಲ.
ಎತ್ತಿನಹೊಳೆ ಯೋಜನೆಗೆ ಅರಸೀಕೆರೆ ತಾಲೂಕು ಇರಲಿಲ್ಲ, ಅದನ್ನ ನಾವು ಸೇರಿಸಿದ್ದೆವು. ಅದನ್ನ ಕುಮಾರಸ್ವಾಮಿ ಅವರು ವಿರೋಧ ಮಾಡಿದ್ರು. ಅದೊಂದು ದುಡ್ಡು ಹೊಡೆಯುವ ಕಾರ್ಯಕ್ರಮ, ಅದರಿಂದ ನೀರು ಬರಲ್ಲ ಅಂತಾ ವಿರೋಧ ಮಾಡಿದ್ರು. ಬಿಜೆಪಿ ಸರ್ಕಾರ ದಡ್ಡು ಬಿಡುಗಡೆ ಮಾಡದೇ ಕುಂಟುತ್ತಾ ಸಾಗ್ತಾ ಇದೆ. ಕಾಂಗ್ರೆಸ್ ಗೆ ಹೆಸರು ಬರುತ್ತೆ ಅಂತಾ ಯೋಜನೆಗೆ ಹಣ ನೀಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಶಿವಲಿಂಗೇಗೌಡ್ರು ಇವತ್ತು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅವರು ಇವತ್ತಿನಿಂದ ನಮ್ಮ ಕಾಂಗ್ರಸ್ ಪಕ್ಷದ ನಾಯಕರು. ನಾನು ಹಾಗೂ ಡಿಕೆ ಶಿವಕುಮಾರ್ ಇಬ್ಬರೂ ಹೈಕಮಾಂಡ್ ಜೊತೆ ಮಾತಾಡಿ, ಟಿಕೆಟ್ ಕೊಟ್ಟೇ ಕೊಡಿಸುತ್ತೇವೆ, ಗೆಲ್ಲಿಸಬೇಕಾದವ್ರು ನೀವು ಎಂದು ಸಿದ್ದರಾಮಯ್ಯ ಜನತೆಯಲ್ಲಿ ಮನವಿ ಮಾಡಿದ್ದಾರೆ.
‘ಅಧಿಕಾರ ನಶ್ವರ, ಶಿವಲಿಂಗೇಗೌಡ್ರು ಮಾಡಿರೋ ಅಭಿವೃದ್ದಿಯ ಕೆಲಸ ಅಜರಾಮರ, ಮತದಾರರೇ ಈಶ್ವರ ‘
‘ನಾವು ಕೊಟ್ಟ ಭರವಸೆ ಈಡೇರಿಸಲು ಆಗದಿದ್ದರೆ ಒಂದು ಸೆಕೆಂಡ್ ಕೂಡ ಅಧಿಕಾರದಲ್ಲಿ ಇರಲ್ಲ’

