ಬೆಂಗಳೂರು: ಸದ್ಯ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ತಯಾರಿ ಭರದಿಂದ ಸಾಗಿದೆ. ಕೇಂದ್ರ ನಾಯಕರು, ಸ್ಟಾರ್ ಪ್ರಚಾರಕರೆಲ್ಲ ಸೇರಿ ಪ್ರಚಾರಕ್ಕೆ ಇಳಿದಿದ್ದಾರೆ. ಆದರೆ ಈಗ ಸದ್ದು ಮಾಡುತ್ತಿರುವ ಇನ್ನೊಂದು ಸುದ್ದಿ ಅಂದ್ರೆ, ಕಾಂಗ್ರೆಸ್ ಪ್ರಣಾಳಿಕೆ ವಿಷಯ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಜರಂಗದಳ ಬ್ಯಾನ್ ಮಾಡುತ್ತೇವೆಂದು ಕಾಂಗ್ರೆಸ್ ಹೇಳಿದೆ. ಈ ಪ್ರಣಾಳಿಕೆ ವಿರುದ್ಧ ಅನೇಕ ಹಿಂದೂಗಳು ಸೇರಿ ಬಿಜೆಪಿ ನಾಯಕರು ರೊಚ್ಚಿಗೆದ್ದಿದ್ದಾರೆ. ನಿನ್ನೆ ಮೊನ್ನೆ ಎಲ್ಲ ಈ ವಿಷಯಕ್ಕೆ ಪ್ರತಿಕ್ರಿಯೆ ಕೊಡಲು ನಿರಾಕರಿಸಿದ್ದ ಸಿದ್ದರಾಮಯ್ಯ, ಚರ್ಚೆ ಜೋರಾಗುತ್ತಿದ್ದಂತೆ, ಟ್ವೀಟ್ ಮೂಲಕ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಗರಿಗೆ ವ್ಯಂಗ್ಯವಾಗಿ ಪ್ರಶ್ನೆ ಕೇಳಿರುವ ಸಿದ್ದರಾಮಯ್ಯ, ಜನರಿಗೆ ಬೇಕಿರುವುದು ಆಹಾರ, ಉದ್ಯೋಗ, ನೆಮ್ಮದಿಯಿಂದ ಬದುಕುವ ವಾತಾವರಣ. ಇದನ್ನು ಒದಗಿಸಬೇಕಿರುವುದು ಜನರಿಂದ ಆಯ್ಕೆಯಾದ ಸರ್ಕಾರದ ಕರ್ತವ್ಯ. ಕೋಮುಗಲಭೆ ಸೃಷ್ಟಿಸುವವರ ಮೇಲೆ ಕಠಿಣ ಕ್ರಮ ತೆಗೆದುಕೊಂಡರೆ ಸಮಾಜ ಘಾತುಕರಿಗೆ ನೋವಾಗಬೇಕು, ಬಿಜೆಪಿ ನಾಯಕರಿಗೆ ಯಾಕೆ ಆಗುತ್ತಿದೆ? ಎಂದು ಪ್ರಶ್ಮಿಸಿದ್ದಾರೆ.
ಸಂವಿಧಾನದ ವಿಧಿಗಳನ್ನು ಉಲ್ಲಂಘಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಮತ್ತು ಕೋಮು ಗಲಭೆಗಳಲ್ಲಿ ಭಾಗಿಯಾಗುವ ಸಂಘಟನೆಗಳ ವಿರುದ್ಧ ನಿಷೇಧವೂ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಇದರಲ್ಲಿ ತಪ್ಪೇನಿದೆ? ಎಂದು ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ.
ಜನರಿಗೆ ಬೇಕಿರುವುದು ಆಹಾರ, ಉದ್ಯೋಗ, ನೆಮ್ಮದಿಯಿಂದ ಬದುಕುವ ವಾತಾವರಣ. ಇದನ್ನು ಒದಗಿಸಬೇಕಿರುವುದು ಜನರಿಂದ ಆಯ್ಕೆಯಾದ ಸರ್ಕಾರದ ಕರ್ತವ್ಯ.
ಕೋಮುಗಲಭೆ ಸೃಷ್ಟಿಸುವವರ ಮೇಲೆ ಕಠಿಣ ಕ್ರಮ ತೆಗೆದುಕೊಂಡರೆ ಸಮಾಜ ಘಾತುಕರಿಗೆ ನೋವಾಗಬೇಕು, @BJP4Karnataka ನಾಯಕರಿಗೆ ಯಾಕೆ ಆಗುತ್ತಿದೆ? 2/2
— Siddaramaiah (@siddaramaiah) May 3, 2023
ಸಂವಿಧಾನದ ವಿಧಿಗಳನ್ನು ಉಲ್ಲಂಘಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಮತ್ತು ಕೋಮು ಗಲಭೆಗಳಲ್ಲಿ ಭಾಗಿಯಾಗುವ ಸಂಘಟನೆಗಳ ವಿರುದ್ಧ ನಿಷೇಧವೂ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೇವೆ.
ಇದರಲ್ಲಿ ತಪ್ಪೇನಿದೆ? 1/2— Siddaramaiah (@siddaramaiah) May 3, 2023
‘ರಾತ್ರಿ ಎಲ್ಲಾ ಮಟನ್ ತಿಂತಾರೆ, ಬೆಳಿಗ್ಗೆ ಎದ್ದು ಮಾಂಸಾಹಾರಿಗಳಿಗೆ ಬೈತಾರೆ’
ಕುಮಾರಸ್ವಾಮಿ ಸಿಎಂ ಆಗುವುದು ಶತಸಿದ್ಧ: ಹೆಚ್ಡಿಕೆ ಬಗ್ಗೆ ಭವಿಷ್ಯ ನುಡಿದ ಹೆಚ್ಡಿಡಿ..