Bengaluru News: ಅಖಿಲ ಕರ್ನಾಟಕ ವೀರಶೈವ ಮಹಾಸಭಾ ನೂತನ ಅಧ್ಯಕ್ಷರಾಗಿ ಮಾಜಿ ಡಿಜಿಪಿ ಶಂಕರ್ ಬಿದರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಅರಣ್ಯ ಸಚಿವ ಈಶ್ವರ್ ಖಂಡ್ರೆ, ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಕಾರ್ಯಕಾರಣಿ ಸದಸ್ಯೆ ಹೆಚ್.ಎಮ್, ರೇಣುಕಾ ಪ್ರಸನ್ನ, ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ್ ಸಾಗರನಹಳ್ಳಿ, ತುಮಕೂರಿನ ಡಿ.ಆರ್.ಪರಮೇಶ್, ಮಂಡ್ಯದ ಆನಂಂದ್, ಹಾವೇರಿಯ ಕೋರಿಶೆಟ್ಟರ್, ಚಿತ್ರದುರ್ಗದ ಶಿವಕುಮಾರ್, ರಾಮನಗರದ ಯೋಗಾನಂದ್, ಬಾಲಚಂದ್ರ ಮತ್ತು ಗೌರಿಶ್ ಆರಾಧ್ಯ ಸೇರಿದಂತೆ, ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಂಕರ್ ಬಿದರಿ ಅವರು ಮಾಜಿ ಎಂಎಲ್‌ಸಿ ತಿಪ್ಪಣ್ಣ ಅವರಿಂದ ಅಧಿಕಾರ ಸ್ವೀಕರಿಸಿದರು. ಮಹಾಸಭಾದ ಚುನಾವಣಾ ಸಂಸ್ಥೆಯು 31 ಸಾವಿರ ಸದಸ್ಯರನ್ನು ಒಳಗೊಂಡಿದೆ.
ಇನ್ನು ಅವಿರೋಧವಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಬಿದರಿ, ನನ್ನನ್ನು ಬೆಂಬಲಿಸಿದ ಮತ್ತು ಅವಿರೋಧವಾಗಿ ಆಯ್ಕೆಯಾಗಲು ಸಹಾಯ ಮಾಡಿದ, ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ನಾನು ಕೆಲಸ ಮಾಡುತ್ತೇನೆ ಎಂದು ಶಂಕರ್ ಬಿದರಿ ಹೇಳಿದ್ದಾರೆ. ಇವರು ಬೆಂಗಳೂರು ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.