Wednesday, September 11, 2024

Latest Posts

ನಕಲಿ ಪತ್ರಕರ್ತರ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಖದೀಮ ಅರೆಸ್ಟ್

- Advertisement -

Belagavi News: ಬೆಳಗಾವಿ: ಬೆಳಗಾವಿಯಲ್ಲಿ ನಕಲಿ ಪತ್ರಕರ್ತರ ಸೋಗಿನಲ್ಲಿ ಮನೆಗೆ ಕನ್ನ ಹಾಕುತ್ತಿದ್ದ ಗ್ಯಾಂಗ್‌ ಪೊಲೀಸರ ಅತಿಥಿಯಾಗಿದೆ. ಈ ಕಳ್ಳರು ಸುಮಾರು ದಿನಗಳಿಂದ ಕಳ್ಳತನ ಮಾಡುತ್ತಿದ್ದರೂ, ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿರಲಿಲ್ಲ. ಏಕೆಂದರೆ, ಇವರು ತಮ್ಮ ಕಾರ್‌ ಮೇಲೆ ಪ್ರೆಸ್ ಎಂದು ಬರೆಸಿಕೊಂಡಿದ್ದರು. ಈ ಕಾರಣಕ್ಕಾಗಿ, ಪೊಲೀಸರು ಈ ಖದೀಮರನ್ನು ಅಷ್ಟು ಸಲೀಸಾಗಿ ಅರೆಸ್ಟ್ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಕಳ್ಳರ ಎಲ್ಲ ಬಣ್ಣವನ್ನು ಬಯಲಿಗೆಳೆಯಲಾಗಿದೆ.

ಮಹಾರಾಷ್ಟ್ರದ ಸೊಲ್ಲಾಪುರದ ನಿವಾಸಿ ಎ,೧ ಆರೋಪಿ ನಾಗರಾಜ್ ಕಚೇರಿ ಎಂಬಾತ ಮಹಾರಾಷ್ಟ್ರ, ಕರ್ನಾಟಕದಲ್ಲಿ ಪತ್ರಕರ್ತರ ಸೋಗಿನಲ್ಲಿ ಹೋಗಿ, ಕಳ್ಳತನ ಮಾಡುತ್ತಿದ್ದ. ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾರ್ ಮೇಲೆ ಪ್ರೆಸ್ ಎಂದು ಬರೆಸಿಕೊಂಡಿದ್ದ. ಇವನೊಂದಿಗೆ ಇವನ ಸಹಚರರಾದ ಹುಸೇನ್, ಸಾಗರ್ ಗಾಯಕಾವಾಡ್,ಅಮೂಲ್,ಕೇತ್ಯಾ ಎಂಬ ಆರೋಪಿಗಳು ಇದ್ದರು. ಆದರೆ ಅವರೆಲ್ಲರೂ ಎಸ್ಕೇಪ್ ಆಗಿದ್ದು, ನಾಗರಾಜ್ ಒಬ್ಬನೇ ಅರೆಸ್ಟ್ ಆಗಿದ್ದಾರೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ.

ಮಾಳಮಾರುತಿ ಠಾಣೆ ಪೊಲೀಸರಿಂದ ಅಂತರಾಜ್ಯ ಖದೀಮ ಅರೆಸ್ಟ್ ಆಗಿದ್ದು, ಬಂಧಿತ ಆರೋಪಿಯಿಂದ 20 ಲಕ್ಷ ಮೌಲ್ಯದ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ. xvu ಕಾರು ಹಾಗೂ 10 ಲಕ್ಷ ಮೌಲ್ಯದ ಬಂಗಾರದ ಆಭರಣ ವಶಕ್ಕೆ ಪಡೆಯಲಾಗಿದೆ. ಬೆಳಗಾವಿಯ ಮಹಾಂತೇಶ ನಗರ, ಆಂಜನೇಯ ನಗರ, ಶಿವಬಸವ ನಗರದಲ್ಲಿ ಈತ ಕಳ್ಳತನ ಮಾಡಿದ್ದ.

ಇನ್ನು ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ವಿಶೇಷ ತಂಡ ರಚಿಸಿದ್ದು, ಬೆಳಗಾವಿ ಮಾಳಮಾರುತಿ ಠಾಣೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

- Advertisement -

Latest Posts

Don't Miss