Sports News: ಭಾರತ ಮತ್ತು ಆಸ್ಚ್ರೇಲಿಯಾದ 3ನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನ ಗಾಬಾ ಮೈದಾನದಲ್ಲಿ ನಡೆಯುತ್ತಿದೆ. ಈ ಆಟದಲ್ಲಿ ಭಾರತದ ಪರ ಜಸ್ಪ್ರೀತ್ ಬೂಮ್ರಾ 6 ವಿಕೇಟ್ ಪಡೆದಿದ್ದರು. ಈ ವೇಳೆ ಇಂಗ್ಲೆಂಡ್‌ನ ಮಾಜಿ ಆಟಗಾರ್ತಿ, ವೀಕ್ಷಕ ವಿವರಣೆಗಾರ್ತಿ ಇಷಾ ಗುಹಾ, ಜಸ್ಪ್ರೀತ್ ಬುಮ್ರಾ ಅವರನ್ನು ಕೋತಿಗೆ ಹೋಲಿಸಿ ಮಾತನಾಡಿ, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬ್ರಾಡ್ಲಿ ಮತ್ತು ಇಷಾ ಗುಹಾ ಇಬ್ಬರೂ ಕ್ರಿಕೇಟ್ ವೀಕ್ಷಕ ವಿವರಣೆ ನೀಡುತ್ತಿದ್ದರು. ಆಗ ಬ್ರಾಡ್ಲಿ ಬೂಮ್ರಾ ಆಡುತ್ತಿರುವುದನ್ನು ಕಂಡು ಅವರನ್ನು ಮೋಸ್ಟ್ ವ್ಯಾಲ್ಯೂಯೇಬಲ್ ಪ್ಲೇಯರ್ ಎಂದು ಹೊಗಳಿದರು. ಈ ವೇಳೆ ಇಷಾಾ ಗುಹಾ, ಮೋಸ್ಟ್ ವ್ಯಾಲ್ಯೂಯೇಬಲ್ ಪ್ರೈಮೇಟ್ ಎಂದು ಬಿಟ್ಟರು.
ಪ್ರೈಮೇಟ್ ಎಂದರೆ, ಕೋತಿಯ ಇನ್ನೊಂದು ತಳಿಯ ಹೆಸರು. ಹೀಗೆ ಹೇಳಿದಾಕ್ಷಣ ಇಷಾ ವಿರುದ್ದ ಭಾರತೀಯ ಕ್ರಿಕೇಟ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಈ ಮಾತನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಇಷಾ ಬೇಕಂತಲೇ ಈ ಪದ ಬಳಸಿ, ಭಾರತೀಯ ಆಟಗಾರರನ್ನು ವಿದೇಶದಲ್ಲಿ ಅವಮಾನಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಆಕ್ರೋಶ ಹೊರಬೀಳುತ್ತಿದ್ದಂತೆ, ನಾನು ಜಸ್ಪ್ರೀತ್ ಬೂಮ್ರಾ ಅವರನ್ನು ಹೊಗಳುವ ಭರದಲ್ಲಿ ಆ ರೀತಿ ಹೇಳಿದೆ. ನನ್ನ ಮಾತಿನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ, ನಾನು ಕ್ಷಮೆ ಕೇಳುತ್ತೇನೆ ಎಂದು ಇಷಾ ಗುಹಾ ಕ್ಷಮೆ ಕೇಳಿದರು.