ಹಾಸನ: ಹಾಸನದಲ್ಲಿ ಮಾಜಿ ಸಚಿವ ರೇವಣ್ಣ ಮಾತನಾಡಿದ್ದು, ಸಿಎಂ ಅವರೆ ನಿಮ್ಮ ಬಗ್ಗೆ ಗೌರವ ಇದೆ. ನಿಮ್ಮ ಹುದ್ದೆಯ ಗೌರವ ಹಾಳು ಮಾಡಿಕೊಳ್ಳಬೇಡಿ. ಬೇಕಿದ್ದರೆ ಕಳೆದ ನಾಲ್ಕು ವರ್ಷದಲ್ಲಿ ನಾವು 48 ಮದ್ಯದಂಗಡಿ ಮಾಡಿದ್ದೇವೆ. ಜನರು ಸುಖ ನಿದ್ರೆ ಮಾಡಲು ಕೊಡುಗೆ ಕೊಟ್ಟಿದ್ದೇವೆ ಎಂದು ಉದ್ಘಾಟನೆ ಮಾಡಿ ಎಂದು ಸಿಎಂ ವಿರುದ್ಧ ರೇವಣ್ಣ ಲೇವಡಿ ಮಾಡಿದ್ದಾರೆ.
ಅಲ್ಲದೇ, ಅಬಕಾರಿ ಸಚಿವರೆ, ಸಿಎಂ ಅವರೇ ನೀವು ಇದನ್ನು ಉದ್ಘಾಟನೆ ಮಾಡಿ. ಡಿಸಿ, ಎಸ್ಪಿ, ಸಿಎಂ, ಉಸ್ತುವಾರಿ ಸಚಿವರೆ ಕೆಲಸ ಆಗದೆ ಯಾಕೆ ಕಲ್ಲು ಹಾಕಿಸಿಕೊಳ್ಲೊಕೆ ಹೋಗಿದಿರಾ. ರೇವಣ್ಣ, ಕುಮಾರಸ್ವಾಮಿ ಮಾಡಿರೊ ಕೆಲಸಕ್ಕೆ ಅಡಿಗಲ್ಲು ಹಾಕೊಕೆ ಹೊರಟಿದ್ದಾರೆ. 2023ಕ್ಕೆ ಬಿಜೆಪಿ ಇರುತ್ತದೊ ಇಲ್ಲವೊ, 140 ಸೀಟ್ ಬರುತ್ತೆ ಎಂದಮೇಲೆ ಯಾಕೆ ಹೆದರಬೇಕು..? ವಿಮಾನ ನಿಲ್ದಾಣದ ಆವರಣದಲ್ಲಿ 250 ಎಕರೆ ಹೊಡೆಯೋಕೆ ಹೊರಟಿದ್ದಾರೆ ಎಂದು ರೇವಣ್ಣ ಕಿಡಿಕಾರಿದ್ದಾರೆ.
ಮೊದಲ ಬಾರಿಗೆ ರೇವಣ್ಣರನ್ನ ಭೇಟಿಯಾದ ಹಾಸನ ಟಿಕೇಟ್ ಆಕಾಂಕ್ಷಿ ಸ್ವರೂಪ್..